»   » ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?

ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಹಿಂದಿ ರಿಮೇಕ್ ಸಿನಿಮಾವೊಂದರಲ್ಲಿ ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ನಾವು ನಿಮಗೆ ಈ ಮೊದಲೇ ಹೇಳಿದ್ವಿ ತಾನೇ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ಇದೀಗ ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದ್ದು, 'ಕೃಷ್ಣ ನೀ ಬೇಗನೆ ಬಾರೋ' ಎಂದು ಹೆಸರಿಡಲಾಗಿದೆ. 'ರನ್ನ'. 'ವಿಕ್ಟರಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ನಂದ ಕಿಶೋರ್ ಅವರು ಈ ಸಿನಿಮಾಗೆ ಆಕ್ಷನ್-ಕಟ್ ಹೇಳಲಿದ್ದು, ಜನವರಿ 23 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.[ಉಪ್ಪಿ-ಕಿಚ್ಚನ ಸಿನಿಮಾ ಶೂಟಿಂಗ್ ದಿನಾಂಕ ಯಾವಾಗ ಗೊತ್ತಾ?]

Upendra-Sudeep's Multi-Starrer Titled As 'Krishna Ni Begane Baaro'

ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಕಾಣಿಸಿಕೊಂಡಿದ್ದ, ನಿರ್ದೇಶಕ ಉಮೇಶ್ ಶುಕ್ಲಾ ಆಕ್ಷನ್-ಕಟ್ ಹೇಳಿದ್ದ 'ಓ ಮೈ ಗಾಡ್' ಸಿನಿಮಾದ ರಿಮೇಕ್ ಇದಾಗಿದ್ದು, ತೆಲುಗಿನಲ್ಲೂ ಇದು 'ಗೋಪಾಲ ಗೋಪಾಲ' ಎಂಬ ಹೆಸರಿನಲ್ಲಿ ತೆರೆಕಂಡಿತ್ತು. ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಪವನ್ ಕಲ್ಯಾಣ್ ಮಿಂಚಿದ್ದರು.[ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!]

ಇದೇ ಸಿನಿಮಾ ಕನ್ನಡಕ್ಕೆ 'ಕೃಷ್ಣ ನೀ ಬೇಗನೆ ಬಾರೋ' ಎಂದು ರಿಮೇಕ್ ಆಗುತ್ತಿದೆ. ಇಲ್ಲಿ ಕೃಷ್ಣ ದೇವರಾಗಿ ಸುದೀಪ್ ಮಿಂಚಲಿದ್ದು, ದೇವರನ್ನು ದ್ವೇಷಿಸುವ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕಿಚ್ಚ ಕ್ರಿಯೇಷನ್ಸ್, ಎನ್ ಕುಮಾರ್ ಮತ್ತು ಜಯಶ್ರೀ ದೇವಿ ಎಂಬ ಮೂರು ಪ್ರೊಡಕ್ಷನ್ಸ್ ಕಂಪೆನಿಗಳು ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ.[ಜೊತೆಜೊತೆಯಲಿ ರಿಯಲ್ ಸ್ಟಾರ್ ಉಪೇಂದ್ರ- ಕಿಚ್ಚ ಸುದೀಪ್]

ಈಗಾಗಲೇ 'ಕೃಷ್ಣ ನೀ ಬೇಗನೆ ಬಾರೋ' ಚಿತ್ರ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ನಾಯಕಿ ಸೇರಿದಂತೆ ಇನ್ನುಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.

English summary
Kannada Actors Upendra and Sudeep are sharing screen space in the remake of Bollywood hit movie 'OMG-Oh My God'. The latest update about the movie is that, the Kannada remake of OMG has been titled as 'Krishna Ni Begane Baaro', which is all set to go on the floors very soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada