For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಹೇಳಿಕೆಗೆ ಚಪ್ಪಾಳೆ ಹೊಡೆದ ಉಪೇಂದ್ರ

  |

  ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ಸಂಬಂಧಪಟ್ಟಂತೆ ನಟ ಜಗ್ಗೇಶ್ ಹೇಳಿಕೆಯೊಂದನ್ನ ನೀಡಿದ್ದರು. ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರಿಗೆ ಸ್ಮಾರಕ ಸಾಕು, ನಂತರದ ಪೀಳಿಗೆಯ ಕಲಾವಿದರಿಗೆ ಯಾವ ಸ್ಮಾರಕನೂ ಬೇಡ'' ಎಂದು ಜಗ್ಗೇಶ್ ಕಲಾವಿದರಿಗೆ ಮನವಿ ಮಾಡಿದ್ದರು.

  ಜಗ್ಗೇಶ್ ಅವರ ಈ ಹೇಳಿಗೆ ರಿಯಲ್ ಸ್ಟಾರ್ ಉಪೇಂದ್ರ ಚಪ್ಪಾಳೆ ಹೊಡೆದಿದ್ದಾರೆ. ನವರಸ ನಾಯಕನ ಹೇಳಿಕೆಯನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಉಪ್ಪಿ, ಜಗ್ಗೇಶ್ ಅವರ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ.

  'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ

  ''ಸ್ಮಾರಕ ಬೇಕು ಅಂದ್ರೆ ನಮ್ಮದೇ ಜಾಗದಲ್ಲಿ ಮಾಡಿಕೊಳ್ಳಿ ಅಥವಾ ಅದಕ್ಕಾಗಿಯೇ ಒಂದು ಎಕರೆ ಜಾಗವನ್ನ ತಗೊಂಡು ಇಟ್ಕೊಳ್ಳಿ. ಅಲ್ಲಿ ಸ್ಮಾರಕ ಮಾಡಿಕೊಡಿ, ಇಲ್ಲಿ ಸ್ಮಾರಕ ಮಾಡಿಕೊಡಿ ಎಂದು ಸರ್ಕಾರದ ಮುಂದೆ ಕಲಾವಿದರು ಭಿಕ್ಷೆ ಬೇಡಬೇಡಿ ಎಂದಿದ್ದರು.

  ''ರಾಜ್-ವಿಷ್ಣು-ಅಂಬಿ ಅವರ ಕೊಡುಗೆ ನಿನ್ನೆಯ ಮೊನ್ನೆಯದಲ್ಲ. ನಾಲವತ್ತು, ಐವತ್ತು ವರ್ಷದ ಸಾಧನೆ ಅವರದ್ದು. ಅವರಿಗೆ ಸಿಗಬೇಕಾದ ಗೌರವ ಸಿಗುತ್ತೆ. ಸರ್ಕಾರ ಅದನ್ನ ಮಾಡುತ್ತೆ. ಆದ್ರೆ, ಮುಂದೆ ಯಾವ ಕಲಾವಿದರಿಗೂ ಸ್ಮಾರಕ ಬೇಡ'' ಎಂದಿರುವುದು ಈಗ ಚರ್ಚೆಗೆ ಕಾರಣವಾಗಿದೆ.

  ಇನ್ಮುಂದೆ ಡಬ್ಬಿಂಗ್ ವಿರೋಧದ ಹೋರಾಟ ಮಾಡಲ್ವಂತೆ ನಟ ಜಗ್ಗೇಶ್

  ಜಗ್ಗೇಶ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಸ್ಮಾರಕದ ಬದಲು ನಟರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನ ಮಾಡಿ, ಫಿಲಂ ಸಿಟಿ ನಿರ್ಮಾಣ ಮಾಡಿ, ರಂಗಶಂಕರಗಳನ್ನ ನಿರ್ಮಿಸಿ ಎಂದು ಸಲಹೆ ನೀಡುತ್ತಿದ್ದಾರೆ.

  English summary
  Kannada actor supports to Jaggesh statement on regarding film actors memorial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X