»   » ಉಪೇಂದ್ರ 'ಟೋಪಿವಾಲ' ತಲೆ ಇಲ್ಲದವರಿಗಲ್ಲ ಕಾಂತಾ

ಉಪೇಂದ್ರ 'ಟೋಪಿವಾಲ' ತಲೆ ಇಲ್ಲದವರಿಗಲ್ಲ ಕಾಂತಾ

Posted By:
Subscribe to Filmibeat Kannada
2013ನೇ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರಗಳಲ್ಲಿ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರವೂ ಒಂದು. ಈ ಚಿತ್ರದ ಧ್ವನಿಸುರುಳಿ ಹಾಗೂ ಧ್ವನಿಮುದ್ರಿಕೆಗಳು ಬುಧವಾರದಿಂದ (ಫೆ.13) ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ.

ಉಪ್ಪಿ ಅಭಿನಯದ ಬಹುತೇಕ ಚಿತ್ರಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಆದರೆ 'ಟೋಪಿವಾಲ' ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಉಪ್ಪಿ ಅಭಿಮಾನಿಗಳು ಹಾಡುಗಳನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಆನಂದ್ ಆಡಿಯೋ ಮೂಲಕ ಟೋಪಿವಾಲ ಹಾಡುಗಳು ಇಂದು ಲೋಕಾರ್ಪಣೆಯಾಗುತ್ತಿವೆ.

ಚಿತ್ರದ ನಾಯಕ ನಟ ಉಪೇಂದ್ರ, ನಾಯಕಿ ಭಾವನಾ (ಜಾಕಿ) ಹಾಗೂ ಟೋಪಿವಾಲ ಚಿತ್ರತಂಡದ ಉಪಸ್ಥಿತಿಯಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿರುವ ಅಣ್ಣಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದ ಅಡಿಬರಹವು ಕ್ಯಾಚಿಯಾಗಿದ್ದು, 'ತಲೆ ಇಲ್ಲದವರಿಗಲ್ಲ' ಎಂದಿಡಲಾಗಿದೆ.

'ಟೋಪಿವಾಲ' ಕಥೆ, ಚಿತ್ರಕಥೆ ಉಪೇಂದ್ರ ಅವರೇ ಹೆಣೆದಿದ್ದರೂ ಆಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ್ (ಶ್ರೀನಿ). ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ ಚಿತ್ರ ಇದಾಗಿದೆ.

ಈ ಚಿತ್ರದ ಐಟಂ ಹಾಡಿನಲ್ಲಿ ಮುಕ್ತಿ ಮೋಹನ್ ತಮ್ಮ ಸೊಂಟ ಬಳುಕಿಸಿದ್ದಾರೆ. ರೋಮ್ಯಾಂಟಿಕ್ ಚಿತ್ರವಾಗಿರುವ ಇದರಲ್ಲಿ ಸಾಕಷ್ಟು ಹಾಸ್ಯ, ಚಲ್ಲಾಟ, ಮಸಾಲೆ ಅಂಶಗಳು ಇವೆ. ವಿ ಹರಿಕೃಷ್ಣ ಸಂಗೀತವಿರುವ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ರವಿಶಂಕರ್, ರಾಜು ತಾಳಿಕೋಟೆ, ರಾಕ್ ಲೈನ್ ಸುಧಾಕರ್ ಮುಂತಾದ ಕಲಾವಿದರಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಶ್ರೀನಿವಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು. ಅವರ ಕಿರುಚಿತ್ರ Simply KailAwesome ಗಂಭೀರ ಪ್ರಯತ್ನಕ್ಕೆ ಭಾರಿ ಮನ್ನಣೆ ಸಿಕ್ಕಿದೆ. ಈಗ ಇದೇ ಮೊದಲ ಬಾರಿಗೆ ಉಪೇಂದ್ರ ಚಿತ್ರ ನಿರ್ದೇಶಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Real Star Upendra and Bhavana lead Kannada film Topiwala audio songs released on 13th Februay in Bangalore. K. P. Srikanth and Kanakapura Sreenivas jointly produce this venture under R. S. Productions banner. V. Harikrishna is the music composer. The film is directed by Srinivas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada