For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ 'ಟೋಪಿವಾಲ' ಬಿಡುಗಡೆ ಮುಂದಕ್ಕೆ

  By Rajendra
  |
  ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ತೆರೆಗೆ ಬರಲು ಕೊಂಚ ತಡವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ಮಾರ್ಚ್ 8ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು.

  ಆದರೆ ಸೆನ್ಸಾರ್ ಮಂಡಳಿಯೊಂದಿಗೆ ಒಂದು ಸಣ್ಣ ಸಮಸ್ಯೆಯ ಕಾರಣ ಚಿತ್ರವನ್ನು ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳು, ಮುಂಬರುವ ವಿಧಾನಸಭೆ ಚುನಾವಣೆಗಳ ಕಾರಣ ಸೆನ್ಸಾರ್ ಮಂಡಳಿ ಕೆಲವೊಂದು ಕಡೆ ಕತ್ತರಿ ಹಾಕಲು ಸೂಚಿಸಿದೆ.

  ಹಾಗಾಗಿ ಚಿತ್ರ ಮಾರ್ಚ್ 8ಕ್ಕೆ ತೆರೆಕಾಣುವುದು ಅನುಮಾನ ಎನ್ನಲಾಗಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿನ ಕೆಲವು ರಾಜಕೀಯ ಸನ್ನಿವೇಶಗಳು ಸೂಕ್ಷ್ಮವಾಗಿದ್ದು ಸೆನ್ಸಾರ್ ಮಂಡಳಿ ಸದಸ್ಯರನ್ನು ಆಲೋಚನೆಗೆ ಹಚ್ಚಿದೆಯಂತೆ. ಈ ಸನ್ನಿವೇಶಗಳನ್ನು ತೆಗೆಯಬೇಕೆ ಬೇಡವೆ ಎಂಬ ಬಗ್ಗೆ ಅವರವರಲ್ಲೇ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

  ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೆನ್ಸಾರ್ ಚಿತ್ರತಂಡಕ್ಕೆ ಸೂಚಿಸಿದೆ. ಚಿತ್ರದ ಕಥೆಯ ಓಟಕ್ಕೆ ಯಾವುದೇ ತೊಂದರೆಯಾಗದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ತೆರೆಗೆ ಬರುವುದು ಒಂದು ವಾರ ತಡವಾಗಲಿದೆ.

  'ಟೋಪಿವಾಲ' ಕಥೆ, ಚಿತ್ರಕಥೆ ಉಪೇಂದ್ರ ಅವರೇ ಹೆಣೆದಿದ್ದರೂ ಆಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ್ (ಶ್ರೀನಿ). ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ ಚಿತ್ರ ಇದಾಗಿದೆ. ಭಾವನಾ ನಾಯಕಿಯಾಗಿರುವ ಚಿತ್ರದ ಅಡಿಬರಹವು ಕ್ಯಾಚಿಯಾಗಿದ್ದು, 'ತಲೆ ಇಲ್ಲದವರಿಗಲ್ಲ' ಎಂದಿಡಲಾಗಿದೆ. (ಏಜೆನ್ಸೀಸ್)

  English summary
  Due to some problem with regional censor board Real Star Upendra's upcoming film Topiwala film has to be postponed to March 15. The film, which is said to deal with the current political situation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X