ತಿರುಪತಿಯಲ್ಲಿ ಹರಕೆ ತೀರಿಸಿಕೊಂಡ ಉಪೇಂದ್ರ

ತಿರುಪತಿಯಲ್ಲಿ ತೆಲುಗು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಉಪೇಂದ್ರ ಅವರು ತೆಲುಗಿನಲ್ಲೇ ಮಾತನಾಡಿದರು. ತಮ್ಮ ಪತ್ನಿಯ ಹರಕೆಯನ್ನು ತೀರಿಸುವ ಸಲುವಾಗಿ ತಾವು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು.
ಅವರ ಅಭಿನಯದ ಟೋಪಿವಾಲಾ ಚಿತ್ರವೂ ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರವನ್ನೂ ತೆಲುಗು ಭಾಷೆಗೆ ಡಬ್ ಮಾಡಲಾಗುತ್ತದೆಯೇ ಎಂದು ಕೇಳಲಾಗಿ. ಅವರು ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.
ಆರಕ್ಷಕ, ಕಲ್ಪನ, ಕಠಾರಿವೀರ ಸುರಸುಂದರಾಂಗಿ ಹಾಗೂ ಗಾಡ್ ಫಾದರ್ ಚಿತ್ರಗಳ ಬಳಿಕ ಟೋಪಿವಾಲಾ ಚಿತ್ರ ಬರುತ್ತಿದೆ. ಆದರೆ ಈ ಹಿಂದಿನ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಟೋಪಿವಾಲಾ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ.
ಉಪ್ಪಿ ಹೋಂ ಬ್ಯಾನರ್ ನಲ್ಲಿ 'ಉಪೇಂದ್ರ 2' ಚಿತ್ರದ ಸಿದ್ಧತೆಗಳೂ ನಡೆಯುತ್ತಿವೆ. ಈ ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳುವುದರೆ ಜೊತೆಗೆ ಅಭಿನಯಿಸಲಿದ್ದಾರೆ. ಟೋಪಿವಾಲಾ ಚಿತ್ರದ ನಾಯಕಿ ಭಾವನಾ ಮೆನನ್. ಸಂಗೀತ ಹರಿಕೃಷ್ಣ. ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ನಿರ್ದೇಶನ ಶ್ರೀನಿವಾಸ್. (ಏಜೆನ್ಸೀಸ್)


Click it and Unblock the Notifications











