For Quick Alerts
  ALLOW NOTIFICATIONS  
  For Daily Alerts

  10ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಉಪೇಂದ್ರ ಅತಿಥಿ

  By Bharath Kumar
  |
  ಇದ್ದಕ್ಕಿದ್ದ ಹಾಗೇ ಉಪ್ಪಿ ಅಮೆರಿಕಕ್ಕೆ ಹೋಗ್ತಿರೋದು ಯಾಕೆ..? | Filmibeat Kannada

  ಅಮೇರಿಕಾದಲ್ಲಿ ನಡೆಯಲಿರುವ 10ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅತಿಥಿಗಳಾಗಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕುಟುಂಬ ಭಾಗಿಯಾಗಲಿದ್ದಾರೆ.

  ಈ ವಿಷ್ಯವನ್ನ ಖುದ್ದು ನಟ ಉಪೇಂದ್ರ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಉಪೇಂದ್ರ ''ಈ ಸಮ್ಮೇಳನದಲ್ಲಿ ಭಾಗಿಯಾಗಲು ತುಂಬಾ ಸಂತೋಷವಾಗುತ್ತಿದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನ ಆಹ್ವಾನ ಮಾಡಿದ್ದಕ್ಕೆ ಧನ್ಯವಾದಗಳು'' ಎಂದಿದ್ದಾರೆ.

  ಯುವ ನಿರ್ದೇಶಕನಿಗೆ ಸಿಕ್ತು ರಿಯಲ್ ಸ್ಟಾರ್ ಉಪೇಂದ್ರ ಕಾಲ್ ಶೀಟ್.!ಯುವ ನಿರ್ದೇಶಕನಿಗೆ ಸಿಕ್ತು ರಿಯಲ್ ಸ್ಟಾರ್ ಉಪೇಂದ್ರ ಕಾಲ್ ಶೀಟ್.!

  ''ಬಹಳ ವರ್ಷಗಳ ಹಿಂದೆ ನಿಮ್ಮೆನ್ನಲ್ಲ ಭೇಟಿ ಮಾಡಿದ್ದೆ, ನನ್ನ ಜೀವನದಲ್ಲಿ ಮತ್ತೊಂದು ಸುವರ್ಣಾವಕಾಶ ಸಿಕ್ಕಿದೆ. ಸಾಕಷ್ಟು ವಿಷ್ಯಗಳಿದೆ ನಿಮ್ಮ ಬಳಿ ಮಾತನಾಡಲು. ತುಂಬಾ ಉತ್ಸುಕನಾಗಿದ್ದೇನೆ ಭೇಟಿಯಾಗಲು, ಎಲ್ಲರು ಬನ್ನಿ ಎಲ್ಲರು ಸೇರೋಣ'' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, ಆಗಸ್ಟ್ 31ರಿಂದ ಸೆಪ್ಟಂಬರ್ 1 ಮತ್ತು 2 ರಂದು ಅಮೇರಿಕಾದ ಡಲ್ಲಾಸ್ ನಗರದ ಶೆರಟನ್ ಕನ್ವೆನ್ಷನ್ ಸೆಂಟರ್‍ನಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಇಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಿಂದ ಕಲಾ ತಂಡಗಳು ಹಾಗೂ ದೇಶದ ವಿವಿಧೆಡೆಗಳಿಂದ ಪ್ರತಿನಿಧಿಗಳು ಕೂಡ ಆಗಮಿಸಲಿದ್ದಾರೆ.

  English summary
  kannada actor upendra will participate in 10th vishwa kannada sammelana at america. vishwa kannada sammelana will held on august 31 to september 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X