twitter
    For Quick Alerts
    ALLOW NOTIFICATIONS  
    For Daily Alerts

    ಬೇರೆಯವರ ಜೊತೆ ನನ್ನನ್ನು ಹೋಲಿಸಬೇಡಿ: ಉಪೇಂದ್ರ ಬಹಿರಂಗ ಪತ್ರ

    |

    ನಟ ಉಪೇಂದ್ರ ಅವರು ಕೊರೊನಾ ಸಂಕಷ್ಟದಲ್ಲಿ ಜನರ ನೆರವಿಗೆ ಧಾವಿಸಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಸೂಕ್ತ ಬೆಲೆಗೆ ಖರೀದಿಸಿ ಅಗತ್ಯ ಇರುವವರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

    ಉಪೇಂದ್ರ ಅವರ ಈ ಸಮಯೋಚಿತ ನೆರವು ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಉಪೇಂದ್ರ ಅವರನ್ನು ವಿವಿಧ ಸಮಾಜ ಸೇವಕರಿಗೆ, ಮಹನೀಯರಿಗೆ ಹೋಲಿಸಿ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಜೊತೆಗೆ ರಾಜಕೀಯ ಲಾಭಕ್ಕಾಗಿ ಉಪೇಂದ್ರ ಹೀಗೆ ಸಮಾಜ ಸೇವೆಗಿಳಿದಿದ್ದಾರೆ ಎಂಬ ಕುಹುಕಗಳೂ ವ್ಯಕ್ತವಾಗಿವೆ. ಇದೇ ಕಾರಣಕ್ಕೆ ಉಪೇಂದ್ರ ಅವರು ಎಲ್ಲರಿಗೂ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಉಪೇಂದ್ರ ಅವರ ಪತ್ರ ಯಥಾವತ್ತು ಇಲ್ಲಿದೆ.

     Upendra Wrote Open Letter To People And Politicians

    ''ಎಲ್ಲಾ ರಾಜಕೀಯ (ವಿವಿದ ಪಕ್ಷ, ವಿವಿದ ನಾಯಕರು, ವಿವಿದ ಜಾತಿ, ಧರ್ಮ) ಬೆಂಬಲಿಗರಿಗೆ ಬಹಿರಂಗ ಪತ್ರ.

    1. ನನ್ನನ್ನು ಬೇರೆಯವರ ಜೊತೆ ಹೋಲಿಸ ಬೇಡಿ - ಎಂದೆಂದೂ ನಾನು ಉಪೇಂದ್ರ.

    2. ಆತಂಕ ಪಡಬೇಡಿ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು - ನಾನೆಂದೂ ನಾಯಕನಾಗುವುದಿಲ್ಲ.

    3. ಭಯ ಪಡಬೇಡಿ ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ ( split ) ಆಗುತ್ತದೆ ಎಂದು - ನಾಯಕನಾಗಬೇಕೆಂದು ಧೃಡ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ !

    4. ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ ರಾಜಕೀಯ ಭದ್ರತೆ, ಮತ್ತು ಆರ್ಥಿಕ (ಹಣ) ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ, ಅದು ಕಡಿಮೆಯಾಗಬಾರದು ಇಮ್ಮಡಿ ( double) ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.

    5. 20 % ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಭಲದ ಪ್ರಭಲ ಗುಂಪಿನಲ್ಲಿದ್ದೇನೆಂದು ಹೆಮ್ಮೆ ಪಡಬೇಡಿ, 80 % ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ.

    6. ನಾನು ಎಲೆಕ್ಷನ್ ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನ ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ ! ಇರಲಿ ಒಂದು ಸತ್ಯ ತಿಳಿಯಿರಿ ....

    7. 20% " ನಾನು " ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ, ನೀನು ಎನ್ನುವ 80% ಜನರ ಜೊತೆ ಅವನೇ (ದೇವರು) ಇರುತ್ತಾನೆ.''

    Recommended Video

    ಮಾರಾಟವಾಗದ ಈರುಳ್ಳಿಗೆ ಒಳ್ಳೆಯ ಬೆಲೆ ಕೊಟ್ಟು ಖರೀದಿಸಿದ Upendra | Filmibeat Kannada

    ಉಪೇಂದ್ರ ಅವರು ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದು ಪಕ್ಷದ ಭಿನ್ನವಾದ ಸಂಪೂರ್ಣ ಜನಪರವಾದ ಧ್ಯೇಯೋದ್ದೇಶಗಳಿಂದ ಹಲವರನ್ನು ಸೆಳೆದಿದ್ದಾರೆ. ಉಪೇಂದ್ರ ಅವರ ಪಕ್ಷದಿಂದ ಚುನಾವಣೆ ಸ್ಪರ್ಧಿಸಿದ್ದ ಯುವಕನೊಬ್ಬ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದು ಪಕ್ಷವು ಶುಭಾರಂಭ ಮಾಡಿದೆ.

    English summary
    Actor Upendra wrote open letter to all people, politicians and many others. He said please do not compare me to anyone.
    Tuesday, May 18, 2021, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X