»   » ಡಿ ಬಾಸ್ ದರ್ಶನ್ ಗಾಗಿ ವಿ.ಹರಿಕೃಷ್ಣ ಮಾಡಿದ ತ್ಯಾಗ!

ಡಿ ಬಾಸ್ ದರ್ಶನ್ ಗಾಗಿ ವಿ.ಹರಿಕೃಷ್ಣ ಮಾಡಿದ ತ್ಯಾಗ!

Posted By:
Subscribe to Filmibeat Kannada
ಡಿ ಬಾಸ್ ದರ್ಶನ್ ಗಾಗಿ ವಿ.ಹರಿಕೃಷ್ಣ ಮಾಡಿದ ತ್ಯಾಗ | Filmibeat Kannada

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ನಟ ದರ್ಶನ್ ಅವರ ಬಹುಪಾಲು ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಖ್ಯಾತಿ ವಿ.ಹರಿಕೃಷ್ಣ ಅವರಿದ್ದು.

ದರ್ಶನ್ ಮತ್ತು ಹರಿಕೃಷ್ಣ ಕಾಂಬಿನೇಶನ್ ಸಿನಿಮಾಗಳ ಹಾಡುಗಳು ಸೋತ್ತಿದ್ದು ತೀರ ಕಡಿಮೆ. ದರ್ಶನ್ ಅವರ ತೂಗುದೀಪ ಬ್ಯಾನರ್ ನಲ್ಲಿ ಬಂದ 'ಜೊತೆ ಜೊತೆಯಲಿ' ಸಿನಿಮಾದ ಮೂಲಕ ಹರಿಕೃಷ್ಣ ಚಿತ್ರರಂಗಕ್ಕೆ ಬಂದರು. ಆ ಬಳಿಕ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದರು. ತಮ್ಮ ಆಡಿಯೋ ಕಂಪನಿಗೆ ಡಿ ಬೀಟ್ಸ್ ಎಂದು ಹೆಸರಿಟ್ಟರು.

ಇದೆಲ್ಲದರ ನಂತರ ಈಗ ವಿ.ಹರಿಕೃಷ್ಣ ತಮ್ಮ ಮೆಚ್ಚಿನ ನಟ ದರ್ಶನ್ ಅವರಿಗಾಗಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. 'ಕುರುಕ್ಷೇತ್ರ' ಸಿನಿಮಾಗಾಗಿ ತಮ್ಮನ್ನು ಸಂಪೂರ್ಣವಾಗಿ ಅವರು ತೋಡಗಿಸಿಕೊಂಡಿದ್ದು, ಬೇರೆ ಯಾವ ಸಿನಿಮಾಗೂ ಹೆಚ್ಚು ಗಮನ ನೀಡುತ್ತಿಲ್ಲ. ಮುಂದೆ ಓದಿ...

ಕುರುಕ್ಷೇತ್ರ

ದರ್ಶನ್ ಅವರ ಮಹತ್ವಾಕಾಂಕ್ಷೆಯ 50ನೇ ಸಿನಿಮಾ 'ಕುರುಕ್ಷೇತ್ರ' ಸಿನಿಮಾಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. 'ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ' ಚಿತ್ರದ ನಂತರ ಮತ್ತೆ ದರ್ಶನ್, ಹರಿಕೃಷ್ಣ, ನಿರ್ದೇಶಕ ನಾಗಣ್ಣ ಮೂರು ಜನ ಒಂದಾಗಿದ್ದಾರೆ.

ಹೆಚ್ಚು ಸಿನಿಮಾ ಮಾಡುತ್ತಿಲ್ಲ

ಹರಿಕೃಷ್ಣ ಯಾವಾಗಲೂ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಸದ್ಯ ಗಮನಿಸಿದರೆ 'ಕುರುಕ್ಷೇತ್ರ' ಚಿತ್ರಕ್ಕಾಗಿ ಅವರು ಬೇರೆ ಸಿನಿಮಾಗಳನ್ನು ಹೆಚ್ಚು ಒಪ್ಪಿಕೊಳ್ಳುತ್ತಿಲ್ಲ. 'ಬೃಹಸ್ಪತಿ' ನಂತರ ಅವರ ಬೇರೆ ಯಾವುದೇ ಸಿನಿಮಾದ ಆಡಿಯೋ ರಿಲೀಸ್ ಆಗಿಲ್ಲ.

ವಿಶೇಷ ಕಾಳಜಿ

ಹರಿಕೃಷ್ಣ 'ಕುರುಕ್ಷೇತ್ರ' ಸಿನಿಮಾಗಾಗಿ ವಿಶೇಷವಾದ ಕಾಳಜಿ ತೆಗೆದುಕೊಂಡಿದ್ದಾರೆ. ಈ ಸಿನಿಮಾ ಒಂದು ಐತಿಹಾಸಿಕ ಚಿತ್ರವಾಗಿರುವ ಕಾರಣ ಹೆಚ್ಚು ಸಮಯ ಸಿನಿಮಾದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇನ್ನು ಅದೇ ಕಾರಣದಿಂದ ಬೇರೆ ಸಿನಿಮಾಗಳನ್ನು ಅವರು ಹೆಚ್ಚಾಗಿ ಒಪ್ಪಿಕೊಳ್ಳುತ್ತಿಲ್ಲ.

'ಡಿ' ಬಾಸ್ ದರ್ಶನ್ ಮೇಲೆ ವಿ.ಹರಿಕೃಷ್ಣ ತೋರಿದ ಗೌರವದ ಪರಿ ಇದು!

ದರ್ಶನ್ 51ನೇ ಸಿನಿಮಾ

ವಿಶೇಷ ಅಂದರೆ 'ಕುರುಕ್ಷೇತ್ರ' ನಂತರದ ದರ್ಶನ್ ಅವರ 51ನೇ ಸಿನಿಮಾಗೆ ಸಹ ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಈ ಚಿತ್ರವನ್ನು ಬಿ.ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ.

ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!

ನೂರು ಸಿನಿಮಾ

ವಿ.ಹರಿಕೃಷ್ಣ 'ಮುಗುಳುನಗೆ' ಸಿನಿಮಾದ ಮೂಲಕ ನೂರು ಸಿನಿಮಾಗಳನ್ನು ಪೂರೈಸಿದ್ದಾರೆ. ಯೋಗರಾಜ್ ಭಟ್ ಹೊಸ ಸಿನಿಮಾಗೆ ಕೂಡ ಅವರೇ ಸಂಗೀತ ನೀಡಲಿದ್ದಾರೆ.

English summary
Kannada music director V Harikrishna dedication towards Darshan's Kurukshetra movie. Kurukshetra is challenging star darshan 50th movie. The movie is directed by Naganna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada