»   » ಮತ್ತೆ ಒಂದಾದ ಭಟ್ಟರು - ಹರಿಕೃಷ್ಣ : 7ನೇ ಬಾರಿ ಒಟ್ಟಿಗೆ ಸಿನಿಮಾ

ಮತ್ತೆ ಒಂದಾದ ಭಟ್ಟರು - ಹರಿಕೃಷ್ಣ : 7ನೇ ಬಾರಿ ಒಟ್ಟಿಗೆ ಸಿನಿಮಾ

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ 'ಮುಗುಳುನಗೆ' ಸಿನಿಮಾದ ನಂತರ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ಸ್ಟಾರ್ ನಟರನ್ನು ಕೈ ಬಿಟ್ಟು ಹೊಸಬರ ಜೊತೆ ಭಟ್ಟರು ಸಿನಿಮಾ ಶುರು ಮಾಡಿದ್ದಾರೆ. ಈ ಚಿತ್ರದ ಸಾಂಗ್ ರೆಕಾರ್ಡಿಂಗ್ ಪೂಜೆ ಅಬ್ಬಯ್ಯನಾಯ್ಡು ಸ್ಟೂಡಿಯೊದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.?

ಯೋಗರಾಜ್ ಭಟ್ಟರ ಈ ಹೊಸ ಸಿನಿಮಾಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದರೆ ಸತತ 7ನೇ ಬಾರಿಗೆ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿದೆ. ಹರಿಕೃಷ್ಣ ಮೊದಲು ಭಟ್ಟರ 'ಗಾಳಿಪಟ' ಚಿತ್ರಕ್ಕೆ ಸಂಗೀತ ನೀಡಿದ್ದರು. ಆ ಬಳಿಕ ಮತ್ತೆ 'ಪರಮಾತ್ಮ' ಸಿನಿಮಾದ ಮೂಲಕ ಈ ಜೋಡಿ ಒಂದಾಗಿತ್ತು. ಆದರ ನಂತರ ಇಲ್ಲಿಯವರೆಗೆ ಭಟ್ಟರು ಬೇರೆಯ ಸಂಗೀತ ನಿರ್ದೇಶಕರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಭಟ್ಟರಿಗೆ ಏನು ಬೇಕು ಎನ್ನುವುದು ಹರಿಕೃಷ್ಣರಿಗೆ ಗೊತ್ತು. ಅದೇ ರೀತಿ ಹರಿಕೃಷ್ಣರಿಂದ ಹೇಗೆ ಮ್ಯೂಸಿಕ್ ತೆಗೆಸಬೇಕು ಎನ್ನುವುವುದು ಭಟ್ಟರಿಗೆ ಚೆನ್ನಾಗಿ ಗೊತ್ತು.

V Harikrishna to score music for Yogaraj Bhat next movie

ಈ ಹಿಂದೆ ಯೋಗರಾಜ್ ಭಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಫೇಸ್ ಬುಕ್ ನಲ್ಲಿ ಭಟ್ಟರ ಜೊತೆ ಫೋಟೋ ಹಾಕಿದ್ದ ಅರ್ಜುನ್ ಮುಂದೆ ಭಟ್ಟರ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಹುಟ್ಟಿಸಿತ್ತು. ಆದರೆ ಈಗ ಆ ಎಲ್ಲ ಗೊಂದಲಗಳಿಗೆ ಉತ್ತರ ಸಿಕ್ಕಿದೆ. ಮತ್ತೆ ಯೋಗರಾಜ್ ಭಟ್ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಮುಂದುವರೆದಿದೆ.

English summary
V Harikrishna to score music for Yogaraj Bhat next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada