Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರವಿಚಂದ್ರನ್ ಮಗ ವಿಕ್ರಮ್ ಮೊದಲ ಸಿನಿಮಾದ ನಿರೀಕ್ಷೆ ಕಂಡು ಭಯ ಆಗ್ತಿದೆ
ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್. ಕನ್ನಡ ಚಿತ್ರರಂಗಕ್ಕೆ ವಿಕ್ರಮ್ ಅದ್ಧೂರಿ ಎಂಟ್ರಿ ಕೊಡಲು ವೇದಿಕೆ ಸಿದ್ಧವಾಗಿದೆ. ಮೊದಲ ಸಿನಿಮಾ 'ತ್ರಿವಿಕ್ರಮ್' ಸಿನಿಮಾ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸಿನಿಮಾಗಳು 2021ರಲ್ಲಿ ಅತೀ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದ ಹಾಡುಗಳು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮೊದಲ ಸಿನಿಮಾದ ಮೊದಲ ಹಾಡಿನಲ್ಲಿ ವಿಕ್ರಮ್ ಹಲ್‌ಚಲ್ ಎಬ್ಬಿಸಿದ್ದಾರೆ.
ವಿಕ್ರಮ್ ಅಭಿನಯದ 'ತ್ರಿವಿಕ್ರಮ್' ಸಿನಿಮಾದ ಹಾಡು ಕ್ರೇಜಿಯಾಗಿ ಹಿಟ್ ಆಗಿದೆ. ಹೀಗಾಗಿ ಕ್ರೇಜಿಸ್ಟಾರ್ ಎರಡನೇ ಪುತ್ರನ ಸ್ಯಾಂಡಲ್‌ವುಡ್ ಎಂಟ್ರಿ ಹೇಗಿರುತ್ತೋ ಅನ್ನುವ ಕುತೂಹಲ ದುಪ್ಪಟ್ಟಾಗಿದೆ. ಹೀಗಾಗಿ ವಿಕ್ರಮ್ ಲಾಂಚ್ ಆಗುತ್ತಿರುವ ಸಿನಿಮಾದ ನಿರೀಕ್ಷೆ ಕಂಡು ನಿರ್ದೇಶಕ ಸಹನಾ ಮೂರ್ತಿ ಗಾಬರಿಯಾಗಿದ್ದಾರೆ. ಕೊರೊನಾ ಕಾಟ ನಿಧಾನವಾಗಿ ಕಡಿಮೆ ಆಗುತ್ತಿರುವ ಬೆನ್ನಲ್ಲೇ ಸಿನಿಮಾ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಫಿಲ್ಮಿ ಬೀಟ್ ಕನ್ನಡ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

2021ರಲ್ಲಿ ಟ್ರೆಂಡಿಂಗ್‌ನಲ್ಲಿತ್ತು ಸಾಂಗ್
ಕ್ರೇಜಿಸ್ಟಾರ್ ಅಭಿಮಾನಿಗಳು ಹಾಡಿಗಳಿಗೆ ಫಿದಾ ಆದ ಅದೆಷ್ಟೋ ಉದಾಹರಣೆಗಳಿವೆ. ಅಪ್ಪನ ಸಿನಿಮಾದ ಹಾಡುಗಳು ಇಂದಿಗೂ ಸದ್ದು ಮಾಡುತ್ತಿರುವಾಗ, ಇನ್ನು ಮಗನ ಹಾಡು ಹೇಗಿರಬೇಕು. ಅದಕ್ಕೆ ಎರಡನೇ ಪುತ್ರ ವಿಕ್ರಮ್ ಲಾಂಚ್ ಆಗುತ್ತಿರುವ 'ತ್ರಿವಿಕ್ರಮ್' ಸಿನಿಮಾದ ಹಾಡುಗಳ ಹಿಟ್ ಆಗಲೇಬೇಕು ಅನ್ನುವ ಒತ್ತಡವಿತ್ತು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡೇ ಅರ್ಜುನ್ ಜನ್ಯ ಸಖತ್ತಾಗಿರುವ ಟ್ಯೂನ್ ಹಾಕಿದ್ದರು. ವಿಜಯ್ ಪ್ರಕಾಶ್ ಈ ಸುಂದರವಾದ ಹಾಡನ್ನು ಹಾಡಿದ್ದರು. ಮಮ್ಮಿ ಪ್ಲೀಸ್ ಮಮ್ಮಿ ಹಾಡು 2021ರಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಟಾಪ್ 3 ಹಾಡುಗಳ ಪಟ್ಟಿಯಲ್ಲಿದೆ.

ವಿಕ್ರಮ್ ಸಿನಿಮಾ ಬಗ್ಗೆ ನಿರ್ದೇಶಕರಿಗೆ ಭಯ
ರವಿಚಂದ್ರನ್ ಕನ್ನಡ ಚಿತ್ರರಂಗದ ಶೋ ಮ್ಯಾನ್. ಇವರ ಈಶ್ವರಿ ಸಂಸ್ಥೆಯಲ್ಲಿ ವಿಷ್ಣುವರ್ಧನ್, ಅಂಬರೀಶ್ ಅಂತ ಮೇರು ನಟರನ್ನು ಲಾಂಚ್ ಮಾಡಲಾಗಿದೆ. ಇನ್ನು ರವಿಚಂದ್ರನ್ ಎರಡನೇ ಪುತ್ರನ ಸಿನಿಮಾವನ್ನು ಲಾಂಚ್ ಮಾಡುವುದು ಅಷ್ಟು ಸುಲಭ ಮಾತಲ್ಲ ಅಂತಾರೆ ನಿರ್ದೇಶಕ ಸಹನಾ ಮೂರ್ತಿ. "ರವಿ ಸರ್ ನಮ್ಮ ಕನ್ನಡ ಚಿತ್ರರಂಗಕ್ಕೆ ಶೋ ಮ್ಯಾನ್. ಅವರ ಮಗನನ್ನು ನಾವು ಲಾಂಚ್ ಮಾಡುತ್ತಿದ್ದೇವೆ. ಅವರ ಈಶ್ವರಿ ಸಂಸ್ಥೆಯಲ್ಲಿ ವಿಷ್ಣು ಸರ್, ಅಂಬರೀಷ್ ಸರ್ ಸೇರಿದಂತೆ ಎಷ್ಟೋ ಮಂದಿ ಟೆಕ್ನಿಷಿಯನ್ಸ್ ಅನ್ನು ಲಾಂಚ್ ಮಾಡಿದ್ದಾರೆ. ಅಂತ ದೊಡ್ಡ ಸಂಸ್ಥೆಯಲ್ಲಿ ಬಂದ ರವಿ ಸರ್ ಮಗನನ್ನು ಲಾಂಚ್ ಮಾಡುವಾಗ ದೊಡ್ಡ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ ನಮಗೆ ಭಯ ಹೆಚ್ಚಿದೆ. ವಿಕ್ರಮ್ ಮೊದಲ ಸಿನಿಮಾ ಹೇಗಿರುತ್ತೆ? ಅನ್ನುವ ನಿರೀಕ್ಷೆಯಿದೆ. ಇದು ತುಂಬಾ ಹೈ ಬಜೆಟ್ ಸಿನಿಮಾ. ಹಾಗಂತ ದುಡ್ಡಿದೆ ಅಂತ ಖರ್ಚು ಮಾಡಿಲ್ಲ." ಅಂತಾರೆ ನಿರ್ದೇಶಕ ಸಹನಾ ಮೂರ್ತಿ.

ಮೊದಲ ಹಾಡಿಗೆ ಸಿಕ್ಕಿದ್ದು 69 ಲಕ್ಷ ವೀವ್ಸ್
"ನವೆಂಬರ್ 2021ನಲ್ಲಿ ರಿಲೀಸ್ ಮಾಡಿದ ಸಾಂಗ್ ಇದು. ನಾವು ಯಾವುದೇ ರೀತಿಯ ಪುಶ್ ಮಾಡಿಲ್ಲ. ನಮಗೆ ನಮ್ಮ ಆಡಿಯನ್ಸ್ ಹೇಗಿದ್ದಾರೆ ಅಂತ ಗೊತ್ತಾಗಬೇಕಿತ್ತು. ಅದಕ್ಕೆ ನಾವು ಯಾವುದೇ ರೀತಿಯ ಪೇಯ್ಡ್ ವೀವ್ಸ್ ಪಡೆದಿಲ್ಲ. ಆರ್ಗಾನಿಕ್ ಆಗಿ ವೀವ್ಸ್ ಪಡೆದಿದ್ದೇವೆ. ಹೀರೋ ಇಂಟ್ರಡಕ್ಷನ್‌ಗೆ ಅಂತಲೇ ಸುಮ್ಮನೆ ದುಡ್ಡು ಖರ್ಚು ಮಾಡುತ್ತಾರೆ. ಆದರೆ, ಇದರಲ್ಲಿ ಕಥೆಗೆ ಹಾಡು ಎಷ್ಟು ಮುಖ್ಯ ಎಂದು ತಿಳಿದುಕೊಂಡು ಖರ್ಚು ಮಾಡಿದ್ದೇವೆ. ಹೀಗಾಗಿ ತಾಯಿ ಮಗನ ಬಾಂಧವ್ಯವನ್ನು ಕ್ರಿಯೇಟ್ ಮಾಡಿ ಹಾಡನ್ನು ಕ್ರಿಯೇಟ್ ಮಾಡಿದ್ದೇವೆ." ಎನ್ನುತ್ತಾರೆ ನಿರ್ದೇಶಕ ಸಹನಾ ಮೂರ್ತಿ.

ಪ್ರೀತಿನೇ ಶತ್ರುನಾ..? ಪೋಷಕರೇ ಶತ್ರುನಾ?
'ತ್ರಿವಿಕ್ರಮ್' ಸಿನಿಮಾ ಕಾನ್ಸೆಪ್ಟ್ ವಿಶಿಷ್ಟವಾಗಿದೆ. ಇಲ್ಲಿ ಪ್ರೀತಿನೇ ಶತ್ರುನಾ..? ಪೋಷಕರೇ ಶತ್ರುನಾ? ಅನ್ನುವುದೇ ಕಾನ್ಸೆಪ್ಟ್. ಇದು ಮಧ್ಯಮ ವರ್ಗದ ಒಬ್ಬ ಹುಡುಗನ ಕಥೆಯನ್ನು ನೀಟ್ ಆಗಿ ಹೇಳಿರುವ ಸಿನಿಮಾವಿದು. "8500 ರಿಂದ 9 ಸಾವಿರದ ವರೆಗೆ ರೀಲ್ಸ್ ಮಾಡಿದ್ದಾರೆ. ಇದು ನಮಗೆ ಸಿಕ್ಕ ದೊಡ್ಡ ಸಕ್ಸಸ್. ಇದೇ ನಮಗೆ ಮೊದಲ ಮುನ್ನುಡಿ. ಕರ್ನಾಟಕದ ಎಲ್ಲಾ ತಾಯಿ ಮಕ್ಕಳಿಗೆ ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ. 69 ಲಕ್ಷ ವೀವ್ಸ್ ಪಡೆದಿದೆ. ತುಳಸಿ ಮೇಡಂ ಮತ್ತು ವಿಕ್ರಮ್ ಸಖತ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಸಾಂಗ್ ಅಷ್ಟೇ ಸಿನಿಮಾ ಕೂಡ ಇಷ್ಟ ಆಗುತ್ತೆ" ಎನ್ನುತ್ತಾರೆ ಸಹನಾಮೂರ್ತಿ.