»   » 'ಹೆಬ್ಬುಲಿ' ಸುದೀಪ್ ಬಗ್ಗೆ ರವಿಚಂದ್ರನ್ ಬಾಯಿಂದ ಉದುರಿದ ಮುತ್ತುಗಳಿವು..

'ಹೆಬ್ಬುಲಿ' ಸುದೀಪ್ ಬಗ್ಗೆ ರವಿಚಂದ್ರನ್ ಬಾಯಿಂದ ಉದುರಿದ ಮುತ್ತುಗಳಿವು..

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ನಡುವಿನ ಆತ್ಮೀಯ ಅನುಬಂಧ ಇಂದು ನಿನ್ನೆಯದ್ದಲ್ಲ. 'ಕನಸುಗಾರ' ರವಿಚಂದ್ರನ್ ತೆರೆಮೇಲೆ ಇನ್ನೂ ಹೀರೋ ಆಗಿ ನಟಿಸುತ್ತಿರುವಾಗಲೇ, 'ಮಾಣಿಕ್ಯ' ಸಿನಿಮಾದಲ್ಲಿ ಸುದೀಪ್ ಗೆ ಅಪ್ಪನ ಪಾತ್ರ ಮಾಡಲು ಒಪ್ಪಿಕೊಂಡಿದ್ದು ಕಿಚ್ಚನ ಮೇಲಿನ ಪ್ರೀತಿಗಾಗಿ.

''ಸುದೀಪ್.. ನನ್ನ ಮಗನಿದ್ದಂತೆಯೇ'' ಅಂತ ಮನತುಂಬಿ ಹೇಳುವ ರವಿಮಾಮ, ಅದೇ ಸುದೀಪ್ ಗಾಗಿ 'ಹೆಬ್ಬುಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಗೆ ಅಣ್ಣನಾಗಿ 'ರಣಧೀರ' ಕಾಣಿಸಿಕೊಂಡಿದ್ದಾರೆ.['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]


ಮೊನ್ನೆಯಷ್ಟೇ ನಡೆದ 'ಹೆಬ್ಬುಲಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಹಾಗೂ ಚಿತ್ರತಂಡದ ಬಗ್ಗೆ ನಟ ರವಿಚಂದ್ರನ್ ಉದುರಿಸಿದ ಮಾತಿನ ಮುತ್ತುಗಳಿವು....


'ಹೆಬ್ಬುಲಿ' ಜೊತೆ ಯಾವಾಗಲೂ ಇರುವೆ.!

''ಹೆಬ್ಬುಲಿ' ಶುರು ಆಗಿ 8 ತಿಂಗಳು ಆಯ್ತು. ಕೃಷ್ಣ ಮುಖದಲ್ಲಿ ನಗು ನೋಡಿರುವುದು ಇವತ್ತೇ ನಾನು. 'ಹೆಬ್ಬುಲಿ' ಜೊತೆ ಆಗಲೂ ಇದ್ದೆ... ಈಗಲೂ ಇದ್ದೀನಿ... ಆಮೇಲೂ ಇರ್ತೀನಿ... ಯಾವಾಗಲೂ ಇರ್ತೀನಿ...'' - ವಿ.ರವಿಚಂದ್ರನ್, ನಟ [ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]


ಸುದೀಪ್-ರವಿಚಂದ್ರನ್ ಕೆಮಿಸ್ಟ್ರಿ

''ಪ್ರತಿಯೊಂದು ಸಿನಿಮಾದಲ್ಲೂ ಹೀರೋ-ಹೀರೋಯಿನ್ ಕೆಮಿಸ್ಟ್ರಿ ಹೇಗಿತ್ತು ಅಂತ ಕೇಳ್ತಾರೆ. ಆದ್ರೆ, ಈ ಸಿನಿಮಾದಲ್ಲಿ ಹೀರೋ-ಹೀರೋಯಿನ್ ಕೆಮಿಸ್ಟ್ರಿ ಅಲ್ಲ ಮುಖ್ಯ ಆಗುವುದು... ನನ್ನ-ಸುದೀಪ್ ಕೆಮಿಸ್ಟ್ರಿ ಚೆನ್ನಾಗಿದ್ರೆ ಇನ್ನೊಂದು 'ಮಾಣಿಕ್ಯ' ಆಗುವುದು'' - ವಿ.ರವಿಚಂದ್ರನ್, ನಟ ['ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!]


ಓವರ್ ಬಜೆಟ್ ಸಿನಿಮಾ

''ಎಲ್ಲರೂ ಹೇಳ್ತಾರೆ ಇದು ಹೈ ಬಜೆಟ್ ಸಿನಿಮಾ ಅಂತ. ಇದು ಖಂಡಿತ ಸುಳ್ಳು... 'ಹೆಬ್ಬುಲಿ' ಹೈ ಬಜೆಟ್ ಸಿನಿಮಾ ಅಲ್ಲ. ಓವರ್ ಬಜೆಟ್ ಸಿನಿಮಾ'' - ವಿ.ರವಿಚಂದ್ರನ್, ನಟ


ಸಿಕ್ಕಾಪಟ್ಟೆ ದುಡ್ಡು ಸುರಿದಿದ್ದಾರೆ

''ಒಂದು ಸಿನಿಮಾಗಾಗಿ ಖರ್ಚು ಮಾಡಬೇಕಾದರೆ, ನಿರ್ಮಾಪಕರು ಯೋಚನೆ ಮಾಡಬೇಕು. ಆದ್ರೆ, ಇಲ್ಲಿ ನಿರ್ಮಾಪಕರಿಗೆ 'ಹೆಬ್ಬುಲಿ' ಮೇಲೆ ನಂಬಿಕೆ. ಸುದೀಪ್ ಮೇಲೆ ಪ್ರೀತಿ ಇದೆ. ಹೀಗಾಗಿ ಸಿಕ್ಕಾಪಟ್ಟೆ ದುಡ್ಡು ಸುರಿದಿದ್ದಾರೆ. ಈ ಸಿನಿಮಾ 'ಮಾಣಿಕ್ಯ'ಗಿಂತ ಯಶಸ್ಸು ಕಾಣಲಿ ಅಂತ ಹಾರೈಸುತ್ತೇನೆ'' - ವಿ.ರವಿಚಂದ್ರನ್, ನಟ


ಸುದೀಪ್ ನನ್ನ ಮಗ ಇದ್ದ ಹಾಗೆ

''ಸುದೀಪ್ ನನ್ನ ಮಗ ಇದ್ದ ಹಾಗೆ. 'ಅಪೂರ್ವ' ಸಿನಿಮಾದಲ್ಲಿ ನಾನು ಸುದೀಪ್ ಕೈಲಿ ಅಕ್ಟಿಂಗ್ ಹಾಗೂ ಡಬ್ಬಿಂಗ್ ಮಾಡಿಸಿದ್ದೆ. ಸುದೀಪ್ ಡಬ್ಬಿಂಗ್ ಮಾಡಬೇಕಾದ್ರೆ, ನಾನು ಸುಮ್ಮನೆ ಕೂತುಬಿಟ್ಟಿದ್ದೆ. ಯಾಕಂದ್ರೆ, 'ಹೀಗೆಲ್ಲ ಡಬ್ಬಿಂಗ್ ಮಾಡಬಹುದಾ' ಅಂತ ನನಗೆ ಅನಿಸಿದ್ದು ಅವಾಗ್ಲೇ'' - ವಿ.ರವಿಚಂದ್ರನ್, ನಟ


English summary
Kannada Actor V.Ravichandran spoke about Kiccha Sudeep during 'Hebbuli' Press Meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada