»   » 'ವಾಸ್ತು ಪ್ರಕಾರ' ಮೇನಕಾ ಚಿತ್ರಮಂದಿರ ಭಟ್ರಿಗೆ ಲಕ್ಕಿ?

'ವಾಸ್ತು ಪ್ರಕಾರ' ಮೇನಕಾ ಚಿತ್ರಮಂದಿರ ಭಟ್ರಿಗೆ ಲಕ್ಕಿ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅಕ್ಷಯ ತದಿಗೆ ದಿನ ಸೆಟ್ಟೇರಿದ ಚಿತ್ರ ವಾಸ್ತು ಪ್ರಕಾರ ಗ್ರಹಣ ಮೂರು ದಿನ ಮುಂಚಿತವಾಗಿ ರಾಜ್ಯದೆಲ್ಲೆಡೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾಯಕಿ ಪರುಲ್ ಯಾದವ್ ಅವರು ಸ್ವತಃ ಮೇನಕಾ ಚಿತ್ರಮಂದಿರಕ್ಕೆ ತೆರಳಿ ಜನರ ಕ್ರೇಜ್ ಹೇಗಿದೆ ಎಂದು ನೋಡಿ ಟ್ವೀಟ್ ಮಾಡುತ್ತಿದ್ದಾರೆ. 'ವಾಸ್ತು ಪ್ರಕಾರ' ವಾಗಿ ಹೇಳುವುದಾದರೆ ಮೇನಕಾ ಚಿತ್ರಮಂದಿರ ಭಟ್ರಿಗೆ ಲಕ್ಕಿಯಾಗುತ್ತಾ ಕಾದು ನೋಡೋಣ

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಾಯಕನಾಗಿ ಉಳಿದವರು ಕಂಡಂತೆ ಖ್ಯಾತಿಯ ರಕ್ಷಿತ್ ಶೆಟ್ಟಿ ಇದ್ದಾರೆ, ಮಂಗಳೂರಿನ ಬಾಲೆ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ ಉಳಿದಂತೆ ಜಗ್ಗೇಶ್ ಮತ್ತು ಪರುಲ್ ಯಾದವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಷಕ ಪಾತ್ರದಲ್ಲಿ ಸುಧಾರಾಣಿ, ಅನಂತ್ ನಾಗ್, ಟಿ.ಎನ್ ಸೀತಾರಾಮ್ ಕಾಣಿಸಿಕೊಂಡಿದ್ದಾರೆ. [ಪರುಲ್ 'ವಾಸ್ತು ಪ್ರಕಾರ' ಪ್ರಾಣಾಪಾಯದಿಂದ ಪಾರು]

ಮಾತಿನ ಹೂರಣ, ಹಾಡುಗಳ ರಸಾಯನ, ಸುಂದರ ಲೋಕೇಷನ್ ಗಳಲ್ಲಿ ಚಿತ್ರಣ ಭಟ್ರ ಎಂದಿನ ಸ್ಟೈಲಿಗಿಂತ ಕೊಂಚ ಭಿನ್ನವಾದ ಈ ಚಿತ್ರ ಮೊದಲ ನೋಟಕ್ಕೆ ಜನ ಮೆಚ್ಚುಗೆ ಗಳಿಸುವ ಎಲ್ಲಾ ಅರ್ಹತೆ ಹೊಂದಿದೆ.ಜನರ ಕ್ರೇಜ್ ಹೇಗಿದೆ.. ಎಲ್ಲೆಲ್ಲಿ ಚಿತ್ರ ರಿಲೀಸ್ ಆಗಿದೆ? ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಯಾರೆಲ್ಲ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಬನ್ನಿ ನೋಡೋಣ... ಚಿತ್ರಕೃಪೆ: @TheParulYadav

ಯೋಗರಾಜ್ ಭಟ್ ನಿರ್ದೇಶನ ಜೊತೆಗೆ ಪ್ರೊಡೆಕ್ಷನ್

ಯೋಗರಾಜ್ ಭಟ್ ಅವರು ನಿರ್ದೇಶನ ಜೊತೆಗೆ ಪ್ರೊಡೆಕ್ಷನ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಮೇನಕಾ ಚಿತ್ರಮಂದಿರದಲ್ಲಿ ನಟಿ ಪರುಲ್ ಯಾದವ್, ಸುಧಾರಾಣಿ ಹಾಗೂ ಮಿಸ್ಸೆಸ್ ಭಟ್ರು ಬೆಳಗ್ಗೆ ಕಾಣಿಸಿಕೊಂಡು ಚಿತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಭಟ್ಟರ ಡೈಲಾಗ್ ಜಗ್ಗೇಶ್ ಬಾಯಲ್ಲಿ ಕೇಳೋದೇ ಮಜಾ

ಭಟ್ಟರ ಡೈಲಾಗ್ ಜಗ್ಗೇಶ್ ಬಾಯಲ್ಲಿ ಕೇಳೋದೇ ಮಜಾ, ರಕ್ಷಿತ್ ಶೆಟ್ಟಿ ಹಾಗೂ ಐಶಾನಿ ಜೋಡಿ ಕಿತ್ತಾಟ ನೋಡಲು ಕಾತುರನಾಗಿದ್ದೇನೆ ಎಂದು ಅಭಿಮಾನಿಗಳ ಟ್ವೀಟ್

ಮೇನಕಾ ಥೇಟರ್ ಯಾಕ್ ಗುರೂ

ಮೇನಕಾ ಥೇಟರ್ ಯಾಕ್ ಗುರೂ ಎಂದು ಮೂಗು ಮುರಿದವರೇ ಹೆಚ್ಚು, ಅದರೆ, ಕೆಂಪೇಗೌಡ ರಸ್ತೆಯಲ್ಲಿ ಒಳ್ಳೆ ಚಿತ್ರಮಂದಿರ ಸಿಕ್ಕರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಎಸಿ ಬೇಕಿದ್ದವರು ಪಿವಿಆರ್ ಗೆ ಹೋಗಿ ತೊಂದರೆ ಏನಿಲ್ಲ. ಮೇನಕಾ ಸೌಂಡ್ ಸಿಸ್ಟಮ್ ಕೂಡಾ ಸಕತ್ತಾಗೇ ಇದೆ

ಯಶ್ ಅಭಿಮಾನಿ ಸಂಘದಿಂದಲೂ ಶುಭ ಹಾರೈಕೆ

ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾಶೀಲವಾಗಿರುವ ಕನ್ನಡ ಸಿನಿಮಾ ಪ್ರೇಮಿಗಳ ಸಂಘಳು ಭಟ್ಟರ ಚಿತ್ರ ವಾಸ್ತು ಪ್ರಕಾರಕ್ಕೆ ಶುಭ ಹಾರೈಸಿದ್ದಾರೆ.

ಐಶಾನಿಗೆ ಇದು ಮೊದಲ ಅನುಭವ

ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಸಿಕ್ಕಿರುವ ಖುಷಿಯಲ್ಲಿರುವ ಮಂಗಳೂರು ಬಾಲೆ ಐಶಾನಿಗೆ ಚಿತ್ರ ರಿಲೀಸ್ ಆದಾಗ ಜನ ನೀಡುವ ಪ್ರತಿಕ್ರಿಯೆ ತಮ್ಮದೇ ಚಿತ್ರ ದೊಡ್ಡ ಪರದೆ ಮೇಲೆ ಆನಂದಿಸುವ ಕ್ಷಣ ಬಂದಿದೆ.

ಚಿತ್ರದ ಮೊದಲ ಭಾಗ ಅಷ್ಟೇನು ಖುಷಿ ಕೊಡಲಿಲ್ಲ

ಚಿತ್ರದ ಮೊದಲ ಭಾಗ ಅಷ್ಟೇನು ಖುಷಿ ಕೊಡಲಿಲ್ಲ ಎಂದು ಮೊದಲ ಶೋ ನೋಡುತ್ತಿರುವವರ ಟ್ವೀಟ್ [ವಾಸ್ತು ಪ್ರಕಾರ ಚಿತ್ರದ ಹಾಡುಗಳು]

English summary
Vaastu prakaara a romantic satirical comedy movie directed by Yograj Bhat released today (Apr.2) and got good opening. starring Rakshit Shetty, Jaggesh, Aishani Shetty and Parul Yadav in pivotal roles. The supporting cast features Anant Nag, Sudha Rani, T. N. Seetharam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada