»   » ತ್ರಿಷಾ ಮುಂದಿನ ಚಿತ್ರಕ್ಕೆ ಭಾವಿಪತಿಯೇ ಪ್ರೊಡ್ಯೂಸರ್!

ತ್ರಿಷಾ ಮುಂದಿನ ಚಿತ್ರಕ್ಕೆ ಭಾವಿಪತಿಯೇ ಪ್ರೊಡ್ಯೂಸರ್!

Posted By:
Subscribe to Filmibeat Kannada

ಮದುವೆಯಾದ ಮೇಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳೋಲ್ಲ ಅಂತ ತಮ್ಮ ಅಭಿಮಾನಿಗಳಿಗೆ ಹೇಳಿದ್ದ ತ್ರಿಷಾ ಕೃಷ್ಣನ್ ಮರಳಿ ಬಣ್ಣ ಹಚ್ಚಿದ್ದಾಗಿದೆ. ಒಟ್ಟೊಟ್ಟಿಗೆ ನಾಲ್ಕೈದು ಚಿತ್ರಗಳಲ್ಲಿ ಬಿಜಿಯಾಗಿರುವ ತ್ರಿಷಾ ಹೊಸ ಚಿತ್ರವೊಂದಕ್ಕೆ ಮೊನ್ನೆಯಷ್ಟೇ ಸಹಿ ಹಾಕಿದ್ದಾರೆ.

ಹಾಗೆ, ತ್ರಿಷಾ ಸಹಿ ಮಾಡಿರುವ ಹೊಸ ಚಿತ್ರದ ನಿರ್ಮಾಪಕ ಆಕೆಯ ಭಾವಿ ಪತಿ ವರುಣ್ ಮಣಿಯನ್. ತಮ್ಮ ಹೋಮ್ ಬ್ಯಾನರ್ 'ರೇಡಿಯನ್ಸ್ ಮೀಡಿಯಾ'ದಡಿ ವರುಣ್ ತ್ರಿಷಾಗಾಗಿ ಚಿತ್ರವೊಂದನ್ನ ನಿರ್ಮಿಸುತ್ತಿದ್ದಾರೆ.

Varun Manian to produce movie for Trisha Krishnan

ಬಹುದಿನಗಳಿಂದ ತ್ರಿಷಾ ಎದುರುನೋಡುತ್ತಿದ್ದ ಪಾತ್ರ ಈ ಚಿತ್ರದಲ್ಲಿದೆಯಂತೆ. ಹೀಗಾಗಿ ತ್ರಿಷಾ ಈ ಪ್ರಾಜೆಕ್ಟ್ ನ ಕಣ್ಮುಚ್ಚಿಕೊಂಡು ಒಪ್ಪಿಕೊಂಡರಂತೆ. ಸ್ಕ್ರಿಪ್ಟ್ ವರ್ಕ್ ಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. [ಚೆನ್ನೈ ಸೂಪರ್ ಕಿಂಗ್ಸ್ ಒಡತಿಯಾಗುತ್ತಿದ್ದಾರೆ ತ್ರಿಷಾ]

ತ್ರಿಷಾ ಒಬ್ಬರನ್ನ ಬಿಟ್ಟರೆ, ಚಿತ್ರದ ಇನ್ನಿತರ ತಾರಾಬಳಗ ಇನ್ನೂ ಸೆಲೆಕ್ಟ್ ಆಗಿಲ್ಲ. ತ್ರಿಷಾಗಾಗಿ ಒಂದು ಸೂಪರ್ ಹಿಟ್ ಸಿನಿಮಾ ಮಾಡಬೇಕು ಅಂತ ತಯಾರಾಗಿರುವ ವರುಣ್, ಹಿಟ್ ನಿರ್ದೇಶಕ ತಿರು ಕೃಷ್ಣಮೂರ್ತಿಯನ್ನ ಫೈನಲ್ ಮಾಡಿದ್ದಾರೆ. ತ್ರಿಷಾಗೆ 'ಸಮರ್' ಚಿತ್ರದಲ್ಲಿ ಆಕ್ಷನ್ ಕಟ್ ಹೇಳಿದ್ದ ತಿರು, ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]

Varun Manian to produce movie for Trisha Krishnan

ಸದ್ಯಕ್ಕೆ ತ್ರಿಷಾ 'ಲಯನ್', 'ಅಪ್ಪ ಟಕ್ಕರು' ಮತ್ತು 'ಭೋಗಿ' ಚಿತ್ರಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ ವರುಣ್ ಮಣಿಯನ್ ಪ್ರಾಜೆಕ್ಟ್ ಸೆಟ್ಟೇರಲಿದೆ. ಅಂತೂ ಭಾವಿ ಪತ್ನಿಯ ಸಿನಿಮಾಗೆ ದುಡ್ಡು ಸುರಿಯೋಕೆ ವರುಣ್ ಸಿದ್ದರಾಗಿದ್ದಾರೆ. ಹೆಂಡತಿಗೆ ತಕ್ಕ ಗಂಡ ವರುಣ್ ಅನ್ನಬಹುದಲ್ಲವೇ? (ಏಜೆನ್ಸೀಸ್)

English summary
Actress Trisha Krishnan has signed film-maker Thiru Krishnamoorthy's Tamil project, to be produced by her Fiance Varun Manian under his home banner Radiance Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X