ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತ ದಾನ ಮಾಡಿದ ನಟ ವಸಿಷ್ಠ ಸಿಂಹ
ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣ ತಪ್ಪಿದೆ. ಸಾವಿರಾರು ಸಂಖ್ಯೆಯ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕೊರೊನಾ ಲಸಿಕೆ ಕೂಡ ಹಾಕಲಾಗುತ್ತಿದೆ.
ಕೊರೊನಾ ಲಸಿಕೆ ಪಡೆದ ಕೆಲವು ತಿಂಗಳು ರಕ್ತ ದಾನಮಾಡುವ ಹಾಗಿಲ್ಲ. ಹಾಗಾಗಿ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವ ಎದುರಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಎಂದು ಕರೆ ನೀಡಲಾಗಿದೆ. ಇದೀಗ ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಕೂಡ ರಕ್ತ ದಾನ ಮಾಡಿದ್ದಾರೆ.
ಮೂಲಕ ಯುವಕರಲ್ಲಿ ರಕ್ತದಾನ ಮಾಡುವಂತೆ ಜಾಗೃತಿ ಮೂಡಿಸಿದ್ದಾರೆ. ಈಗಾಗಲೇ ಅನೇಕ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ನಿನ್ನೆ (ಮೇ 9) ಬೆಂಗಳೂರಿನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ ಮಾಡಿದ ನಟ ವಸಿಷ್ಠ ಬಳಿಕ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

ಕೊರೊನಾ ಲಸಿಕೆ ಪಡೆದ ಬಳಿಕ 6 ತಿಂಗಳ ಕಾಲ ರಕ್ತದಾನ ಮಾಡುವ ಹಾಗಿಲ್ಲ. ವಿಸಿಷ್ಠ ಸಿಂಹ ರಕ್ತ ದಾನ ಮಾಡುವ ಜೊತೆಗೆ ಲಸಿಕೆ ಪಡೆಯುವ ಮುನ್ನ ಎಲ್ಲರೂ ರಕ್ತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











