»   » ತೆಲುಗು ಚಿತ್ರರಂಗಕ್ಕೆ ಹಾರಿದ ಚಿಟ್ಟೆ ವಸಿಷ್ಠ

ತೆಲುಗು ಚಿತ್ರರಂಗಕ್ಕೆ ಹಾರಿದ ಚಿಟ್ಟೆ ವಸಿಷ್ಠ

Posted By:
Subscribe to Filmibeat Kannada
ತೆಲುಗು ಚಿತ್ರರಂಗಕ್ಕೆ ಹಾರಿದ ಚಿಟ್ಟೆ ವಸಿಷ್ಠ | Filmibeat Kannada

ನಟ ವಸಿಷ್ಠ ಸಿಂಹ 'ಟಗರು' ಸಿನಿಮಾದಲ್ಲಿ ಚಿಟ್ಟೆ ಎಂಬ ಪಾತ್ರವನ್ನು ಮಾಡಿದ್ದಾರೆ. ಇಂದು 'ಟಗರು' ಸಿನಿಮಾ ರಿಲೀಸ್ ಆಗಿದ್ದು ವಸಿಷ್ಟ ಸಿಂಹ ಅವರ ಚಿಟ್ಟೆ ಪಾತ್ರಕ್ಕೂ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಜನರ ಪ್ರತಿಕ್ರಿಯೆ ಕಂಡು ಖುಷಿ ಆಗಿರುವ ವಸಿಷ್ಟ ಅದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಕನ್ನಡದ ಈ ಕಂಚಿನ ಕಂಠದ ಕಲಾವಿದ ಈಗ ಬೇರೆ ಭಾಷೆಯಲ್ಲಿ ಸಹ ಮೋಡಿ ಮಾಡಲು ಸಜ್ಜಾಗಿದ್ದಾರೆ. ಟಾಲಿವುಡ್ ಚಿತ್ರರಂಗಕ್ಕೆ ಈಗ ಚಿಟ್ಟೆಯಂತೆ ವಸಿಷ್ಟ ಹಾರಿದ್ದಾರೆ. ವಿಶೇಷ ಅಂದರೆ ವಸಿಷ್ಟ ನಟನಾಗಿ ತೆಲುಗು ಚಿತ್ರರಂಗಕ್ಕೆ ಹೋಗಿಲ್ಲ. ಬದಲಾಗಿ ಗಾಯಕನಾಗಿ ಹೋಗಿದ್ದಾರೆ.

Vasishta Simha singing a song for Kirrak Party telugu movie.

ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

ಈ ಹಿಂದೆ 'ಕಿರಿಕ್ ಪಾರ್ಟಿ' ಸಿನಿಮಾದ 'ನೀಚ ಸುಳ್ಳು..' ಎಂಬ ಹಾಡಿನ ಮೂಲಕ ವಸಿಷ್ಟ ಗಾಯಕನಾಗಿದ್ದರು. ಈಗ ಅದೇ ಹಾಡನ್ನು ಅವರು ತೆಲುಗಿನಲ್ಲಿ ಹಾಡಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ತೆಲುಗು ರಿಮೇಕ್ 'ಕಿರಾಕ್ ಪಾರ್ಟಿ' ಚಿತ್ರದಲ್ಲಿ ಅದೇ ಹಾಡನ್ನು ಅವರು ಹಾಡಲಿದ್ದಾರೆ. ಅಜನೀಶ್ ಲೋಕನಾಥ್ ಅವರೇ ತೆಲುಗು ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

English summary
Kannada actor Vasishta Simha singing a song for 'Kirrak Party' telugu movie. 'Kirrak Party' is a remake of kannada movie Kirik Party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada