For Quick Alerts
  ALLOW NOTIFICATIONS  
  For Daily Alerts

  "ಟ್ಯಾಲೆಂಟ್ ಕೇವಲ ಪ್ರಶಾಂತ್ ನೀಲ್ ಕೈಲೇ ಇರಬೇಕು ಅಂತ ರೂಲ್ಸ್ ಇದೆಯಾ?" - ಶಿವರಾಜ್‌ ಕುಮಾರ್

  By ಫಿಲ್ಮಿಬೀಟ್ ಡೆಸ್ಕ್
  |

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ವೇದ' ಸಿನಿಮಾ ನಾಳೆ (ಡಿಸೆಂಬರ್ 23)ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ ಅನ್ನೋದು ವಿಶೇಷ. ಹೀಗಾಗಿ ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ನೀಡುವುದಕ್ಕೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.

  ಶಿವಣ್ಣ ಕೂಡ ಕಳೆದೊಂದು ತಿಂಗಳಿಂದ 'ವೇದ' ಸಿನಿಮಾದ ಬಗ್ಗೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ವೇದ' ಗೆಟಪ್ ನೋಡಿ ಥ್ರಿಲ್ ಆಗಿರೋ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಮಾತುಗಳು ಮತ್ತಷ್ಟು ಕ್ಯೂರಿಯಾರಿಟಿಯನ್ನು ಹುಟ್ಟಿಸಿದೆ.

  'ವೇದ' ಶಿವಣ್ಣ ಆರ್ಭಟಕ್ಕೆ ಕ್ಷಣಗಣನೆ: ರಾಜ್ಯಾದ್ಯಂತ ಭರ್ಜರಿ ಸಂಭ್ರಮಾಚರಣೆಗೆ ಶಿವ ಸೈನ್ಯ ಸಿದ್ಧ!'ವೇದ' ಶಿವಣ್ಣ ಆರ್ಭಟಕ್ಕೆ ಕ್ಷಣಗಣನೆ: ರಾಜ್ಯಾದ್ಯಂತ ಭರ್ಜರಿ ಸಂಭ್ರಮಾಚರಣೆಗೆ ಶಿವ ಸೈನ್ಯ ಸಿದ್ಧ!

  ಶಿವರಾಜ್‌ಕುಮಾರ್ 'ವೇದ' ಬಗ್ಗೆ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ನ್ಯೂಸ್ 18 ಕನ್ನಡ ಜೊತೆ ಮಾತಾಡುವಾಗ ಟ್ಯಾಲೆಂಟ್ ಅನ್ನೋದು ಕೇವಲ ಪ್ರಶಾಂತ್ ನೀಲ್ ಕೈಯಲ್ಲೇ ಇರಬೇಕು ಅಂತ ರೂಲ್ಸ್ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಶಿವರಾಜ್‌ಕುಮಾರ್ ಯಾಕೆ ಹೀಗಂದ್ರು ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಟ್ಯಾಲೆಂಟ್ ಪ್ರಶಾಂತ್ ನೀಲ್ ಕೈಯಲ್ಲೇ ಇರಬೇಕಾ?

  ಟ್ಯಾಲೆಂಟ್ ಪ್ರಶಾಂತ್ ನೀಲ್ ಕೈಯಲ್ಲೇ ಇರಬೇಕಾ?

  'ವೇದ' ಶಿವರಾಜ್‌ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‌ನಲ್ಲಿ ಬರ್ತಿರೋ 4ನೇ ಸಿನಿಮಾ. ಹೀಗಾಗಿ ಇಬ್ಬರ ಕೆಮಿಸ್ಟ್ರಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಶಿವಣ್ಣ ಹೀಗೆ ಪ್ರತಿಕ್ರಿಯೆ ನೀಡಿದ್ದರು. "ಟ್ಯಾಲೆಂಟ್ ಅನ್ನೋದು ಇವರ ಕೈಯಲ್ಲೇ ಇರಬೇಕು. ಅವರ ಕೈಯಲ್ಲೇ ಇರಬೇಕು ಅಂತ ಹೇಳುವುದಕ್ಕೆ ಆಗುವುದಿಲ್ಲ. ಪ್ರಶಾಂತ್ ನೀಲ್ ಕೈಯಲ್ಲೇ ಇರಬೇಕು ಅಂತ ಏನಾದರೂ ರೂಲ್ಸ್ ಇದೆಯಾ? ಇಲ್ಲಾ ಅಂದ್ರೆ, ಸೂರಿ ಕೈಯಲ್ಲೇ ಇರಬೇಕು. ಯೋಗರಾಜ್ ಭಟ್ ಕೈಯಲ್ಲೇ ಇರಬೇಕು. ಈಗ ರಿಷಬ್ ಶೆಟ್ಟಿ ಅವರ ಒಬ್ಬರ ಕೈಯಲ್ಲೇ ಇರಬೇಕು ಅಂತ ಇದೆಯಾ? ಪ್ರತಿಯೊಬ್ಬರಲ್ಲೂ ಒಂದು ಟ್ಯಾಲೆಂಟ್ ಇದೆ. ಪ್ರತಿಯೊಬ್ಬರಲ್ಲೂ ಅವರದ್ದೇ ಮೇಕಿಂಗ್ ಸ್ಟೈಲ್ ಇದೆ. ಕೆಲವೊಮ್ಮೆ ಅದು ಮುಟ್ಟುತ್ತೆ. ಅವರು ಸ್ಟಾರ್ ಆಗುತ್ತಾರೆ." ಎಂದು ಶಿವಣ್ಣ ಹೇಳಿದ್ದಾರೆ.

  ನಾನು ಬಂದ ಹಾಗೆ ಸಿನಿಮಾ ಮಾಡುತ್ತೇನೆ.

  ನಾನು ಬಂದ ಹಾಗೆ ಸಿನಿಮಾ ಮಾಡುತ್ತೇನೆ.

  "ನಾನು ಇವರೊಂದಿಗೆ ಸಿನಿಮಾ ಮಾಡ್ಬೇಕು. ಅವರೊಂದಿಗೆ ಸಿನಿಮಾ ಮಾಡಬೇಕು ಅಂತ ಯಾವಾಗಲೂ ಮಾಡಿದವನಲ್ಲ. ಸಿಂಗೀತಂ ಶ್ರೀನಿವಾಸ ರಾವ್ ಅವರೊಂದಿಗೆ ಒಂದೇ ಸಿನಿಮಾ ಮಾಡಿದ್ದು, ಅದಾದ ಮೇಲೆ ಸಿನಿಮಾ ಮಾಡೋಕೆ ಆಗಿಲ್ಲ. ಎಂಎಸ್ ರಾಜಶೇಖರ್ ಜೊತೆ 9 ರಿಂದ 10 ಸಿನಿಮಾ ಮಾಡಿದೆ. ಸಾಯಿ ಪ್ರಕಾಶ್ ಜೊತೆ ಹಲವು ಸಿನಿಮಾ ಮಾಡಿದೆ. ಸೂರಿ ಜೊತೆ ಎರಡು ಸಿನಿಮಾ ಮಾಡಿದೆ. ಹಾಗೆ ಬಂದ ಹಾಗೆ ಸಿನಿಮಾ ಮಾಡುತ್ತೇನೆ. ಒಂದೇ ಕಡೆಗೆ ನಿಲ್ಲೋಕೆ ಆಗಲ್ಲ." ಎಂದು ಶಿವಣ್ಣ ನಿರೂಪಕರಿಗೆ ಹೇಳಿದ್ದಾರೆ.

  'ವೇದ' ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿದ್ದೇಗೆ?

  'ವೇದ' ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿದ್ದೇಗೆ?

  "ವೇದ ಸಿನಿಮಾವನ್ನೂ ಬೇರೆ ಯಾರೋ ಪ್ರಡ್ಯೂಸರ್ ಮಾಡಬೇಕಿತ್ತು. ಅವರು ಆಗದೆ ಇನ್ನೊಬ್ಬರು ನಿರ್ಮಾಪಕರಿಗೆ ಹೋಯ್ತು. ಅದು ಬೇರೆ ಬೇರೆ ಕಾರಣವಿರುತ್ತೆ. ಇನ್ನೊಬ್ಬರು ನಿರ್ಮಾಪಕರು ಕೂಡ ಐದಾರು ತಿಂಗಳು ಆಗಲ್ಲ ಅಂದರು. ಹರ್ಷ ಕೂಡ ಸ್ಟೇಲ್ ಆಗಿಬಿಡುತ್ತೆ ಅಂತ ಹೇಳಿದ್ದರು. ಅಷ್ಟೋತ್ತಿಗೆ 125ನೇ ಸಿನಿಮಾ ಬಂದಿತ್ತು. ಯಾವೇ ಯಾಕೆ ಮಾಡಬಾರದು ಅಂತ ನಿರ್ಮಾಪಕರಿಗೆ ಕೇಳಿದ್ವಿ. ಇಲ್ಲಾ ನೀವು ಮಾಡಿ ನನಗೆ ಬೇರೆ ಯಾವುದಾದರೂ ಮಾಡಿಕೊಡಿ ಅಂತ ಆ ನಿರ್ಮಾಪಕರು ಹೇಳಿದ್ರು" ಎಂದು ವೇದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರ ಬಗ್ಗೆ ಶಿವಣ್ಣ ಮಾತಾಡಿದ್ದಾರೆ.

  ವೇದ ಟೈಟಲ್ ಸಿಕ್ಕಿದ್ದು ಹೇಗೆ?

  ವೇದ ಟೈಟಲ್ ಸಿಕ್ಕಿದ್ದು ಹೇಗೆ?

  "ವೇದ ಟೈಟಲ್‌ ನಮ್ಮ ಕೈಯಲ್ಲಿ ಇರಲಿಲ್ಲ. ವೇದ ಟೈಟಲ್ ಹೇಗೆ ಬಂತು ಅಂದ್ರೆ, ಕಥೆ ಹೇಳುವಾಗಲೆಲ್ಲಾ, ವೇದ ಇವನೊಂದು ಎಮೋಷನ್. ಅವನ ಬಾಳಲ್ಲಿ ಎಮೋಷನ್. ಅವನ ದಾರಿನೇ ಬೇರೆ. ವೇದಗೆ ನಾಲ್ಕು ಅಂಶ ಇರುತ್ತೆ. ಪ್ರೀತಿ, ಬಾಳು, ಸಂತೋಷ, ನಂಬಿಕೆ ಇದೆ. ಈ ನಾಲ್ಕು ಪ್ರತಿಯೊಬ್ಬ ಮನುಷ್ಯನಲ್ಲೂ ಇದೆ. ಹೀಗೆ ಬರೀ ವೇದ.. ವೇದ.. ಆಗ ವೇದ ಟೈಟಲ್ ಯಾಕೆ ಇರಬಾರದು ಚೆನ್ನಾಗಿ ಇದೆಯಲ್ಲ ಅಂತ ಪುರಾಣದಲ್ಲೂ ನಾಲ್ಕು ವೇದ ಹೇಗೆ ಹೇಳುತ್ತೇವೋ.. ಇವನ ಬಾಳಲ್ಲೂ ನಾಲ್ಕು ಅಂಶ ಬರುತ್ತೆ. ಆಗ ಟೈಟಲ್ ಇರಲಿಲ್ಲ. ಆಗ ರಮೇಶ್ ಯಾದವ್ ಅಂತ ನಿರ್ಮಾಪಕರು 'ಡಾನ್' ಮತ್ತು 'ಅಶೋಕ' ಅಂತ ಸಿನಿಮಾ ಪ್ರಡ್ಯೂಸ್ ಮಾಡಿದ್ದರು. ಅವರ ಕೈಯಲ್ಲಿ ಇತ್ತು. ಅವರು ತುಂಬಾ ಪ್ರೀತಿಯಿಂದ ಕೊಟ್ರು." ಎಂದು ಟೈಟಲ್ ಬಗ್ಗೆನೂ ನ್ಯೂಸ್ 18 ಕನ್ನಡ ಜೊತೆ ಶಿವಣ್ಣ ಹೇಳಿಕೊಂಡಿದ್ದಾರೆ.

  English summary
  Vedha Star Shivarajkumar Questions Only Prashanth Neel And Suri Has Talent, Know More.
  Thursday, December 22, 2022, 23:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X