For Quick Alerts
  ALLOW NOTIFICATIONS  
  For Daily Alerts

  ಡರ್ಟಿಯಾಗಲು ವೀಣಾ ಮಲಿಕ್ ಪಡೆದ ಸಂಭಾವನೆ ಎಷ್ಟು?

  |

  ಕಂಡು ಕೇಳರಿಯದ ಬಿಸಿಬಿಸಿ ದೃಶ್ಯಗಳಿಗೆ ಮೈಯೊಡ್ಡಿ ಪಡ್ಡೆಗಳಿಗೆ ಏನೋ ಒಂಥರಾ ಬಿಸಿ ಮಾಡಿರುವ ಪಾಕಿಸ್ಥಾನದ ಬ್ಯೂಟಿ ವೀಣಾ ಮಲಿಕ್ ಸಂಭಾವನೆಯಲ್ಲಿ ಹೊಸ ದಾಖಲೆ ಬರೆದಿದ್ದಾಳೆ ಎನ್ನುವ ಸುದ್ದಿ ಹರಿದಾಡುತಿದೆ.

  ನಂಬಲರ್ಹ ಮೂಲಗಳ ವರದಿಯನ್ನು 'ನಂಬುವುದಾದರೆ' ವೀಣಾ ಮಲಿಕ್ ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರಕ್ಕೆ ಪಡೆದಿರುವ ಸಂಭಾವನೆ ಇದುವರೆಗೆ ಕನ್ನಡದ ಯಾವ ನಟಿಯೂ ಪಡೆದಿಲ್ಲವಂತೆ. ಅಲ್ಲದೇ ಸದ್ಯ ಯಾವ ನಟಿಯೂ ಪಡೆಯುವ ಸಾಧ್ಯತೆಯೂ ಇಲ್ಲ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಡರ್ಟಿ ಪಿಚ್ಚರ್ ಸಿಲ್ಕ್ ಸಖತ್ ಹಾಟ್ ಎಂದು ಈ ಹಿಂದೆ ಹೆಸರಿಡಲಾಗಿತ್ತು.

  ಮೂಲಗಳ ಪ್ರಕಾರ ವೀಣಾ ಮಲಿಕ್ ಸಿಲ್ಕ್ ಸಕತ್ ಹಾಟ್ ಮಗಾ ಚಿತ್ರಕ್ಕೆ ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯಿದೆ. ಸ್ಯಾಂಡಲ್ ವುಡ್ ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಮ್ಯಾ ಮಂಚೂಣಿಯಲ್ಲಿದ್ದರು.

  ಕೋಡಿ ರಾಮಕೃಷ್ಣ ಅವರ ನಿರ್ದೇಶನದ ಮುಂಬರುವ ಚಿತ್ರಕ್ಕೆ ರಮ್ಯಾ 54 ಲಕ್ಷ ಸಂಭಾವನೆ ಪಡೆದಿದ್ದರು ಎನ್ನುವ ಸುದ್ದಿಯಿದೆ.

  ಕೋಟಿ ಸಂಭಾವನೆಯ ವೀಣಾ ಮಲಿಕ್

  ಕೋಟಿ ಸಂಭಾವನೆಯ ವೀಣಾ ಮಲಿಕ್

  ಮೂಲಗಳ ಪ್ರಕಾರ ವೀಣಾ ಮಲಿಕ್ ಪಡೆದ ಸಂಭಾವನೆಯ ಮೊತ್ತವಾದ ಒಂದು ಕೋಟಿ ರೂಪಾಯಿಯನ್ನು ಕಂತಿನಲ್ಲಿ ನೀಡಲಾಗಿದೆ. ದುಬಾರಿ ಸಂಭಾವನೆ ಪಡೆದಿರುವುದರಿಂದ ನಿರ್ದೇಶಕರು ಹೇಳುವ ಎಲ್ಲಾ ಪಾತ್ರಕ್ಕೂ ವೀಣಾ ಸೈ ಎಂದಿದ್ದಾರೆ.

  ಟ್ರೈಲರ್, ಪೋಸ್ಟರ್ ಸಕತ್ ಹಾಟ್ ಮಗಾ..

  ಟ್ರೈಲರ್, ಪೋಸ್ಟರ್ ಸಕತ್ ಹಾಟ್ ಮಗಾ..

  ಚಿತ್ರತಂಡ ಇದುವರೆಗೆ ಬಿಡುಗಡೆ ಮಾಡಿರುವ ಟ್ರೈಲರ್ ಮತ್ತು ಪೋಸ್ಟರ್ ನಲ್ಲಿ ವೀಣಾ ಮುಲಿಕ್ ಮಡಿ ಬಿಟ್ಟು ನಟಿಸಿದ್ದಾರೆ, ಲಿಪ್ ಲಾಕ್ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರಕ್ಕೆ ಬಿ ಮತ್ತು ಸಿ ಸೆಂಟರ್ ನಲ್ಲಿ ಭರ್ಜರಿ ಓಪನಿಂಗ್ ಸಿಗಬಹುದು.

  ಬಿಕನಿಯಲ್ಲಿ ವೀಣಾ

  ಬಿಕನಿಯಲ್ಲಿ ವೀಣಾ

  ಚಿತ್ರದ ಎರಡು ದೃಶ್ಯಗಳಲ್ಲಿ ವೀಣಾ ಬಿಕನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಹೀರೋ ಅಕ್ಷಯ್ ಜೊತೆ ಲಿಪ್ ಲಾಕ್ ಸನ್ನಿವೇಶಕ್ಕೂ ಜೈ ಅಂದಿದ್ದಾರೆ.

  ಚಿತ್ರದ ಒಂದು ಹಾಡು ಈಗಾಗಲೇ ಹಿಟ್

  ಚಿತ್ರದ ಒಂದು ಹಾಡು ಈಗಾಗಲೇ ಹಿಟ್

  ಮುತ್ತು ಸಿಹಿ ಮುತ್ತು ಕೊಡು ನಲ್ಲನೇ..ಸುಖವ ಕೊಡು ಸುಖವ ನಲ್ಲನೇ.. ಈಗಾಗಲೇ ಹಿಟ್ ಆಗಿದೆ.

  ಚಿತ್ರಕ್ಕೆ ’A’ ಸರ್ಟಿಫಿಕೇಟ್

  ಚಿತ್ರಕ್ಕೆ ’A’ ಸರ್ಟಿಫಿಕೇಟ್

  ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ 'A' ಸರ್ಟಿಫಿಕೇಟ್ ದಯಪಾಲಿಸಿದೆ. ಸಿಲ್ಕ್ ಸ್ಮಿತಾ ಕಥೆಯಾದಾರಿತ ಚಿತ್ರ ಇದಾಗಿದ್ದು ವಿದ್ಯಾ ಬಾಲನ್ ನಟಿಸಿದ ದಿ ಡರ್ಟಿ ಪಿಚ್ಚರ್ ಚಿತ್ರದ ರಿಮೇಕ್ ಅಲ್ಲ.

  English summary
  Glamorous Veena Malik seems to have set a new record in Sandalwood, sources says she has charges One Crore for her upcoming Kannada movie Silk Sakkath Hot Maga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X