For Quick Alerts
  ALLOW NOTIFICATIONS  
  For Daily Alerts

  ಮನಕಲಕುವ ವೀಣಾ ಮಲಿಕ್ ತಿಳಿನೀಲಿ ಚಿತ್ರಗಳು

  By ರವಿಕಿಶೋರ್
  |

  ಸ್ಯಾಂಡಲ್ ವುಡ್ ಚಿತ್ರರಂಗದ ತೆರೆಯ ಮೇಲೆ ಇದೇ ಮೊಟ್ಟ ಮೊದಲ ಬಾರಿಗೆ ಚಿತ್ತಾರ ಬಿಡಿಸಲು ಬರುತ್ತಿದ್ದಾರೆ ಹಾಟ್ ಬೆಡಗಿ ವೀಣಾ ಮಲಿಕ್. ಅಪಾರ ವೆಚ್ಚದಿಂದ ತಯಾರಾಗುತ್ತಿರುವ ಈ ಚಿತ್ರ ಶೀಘ್ರದಲ್ಲೇ ತೆರೆಗೆ ದಾಂಗುಡಿ ಇಡಲಿದೆ.

  'ಸಿಲ್ಕ್ ಸಖತ್ ಹಾಟ್' ಚಿತ್ರದಲ್ಲಿ ವೀಣಾ ಅವರ ಭಾವ ಭಂಗಿಗಳು ಯಾವುದೇ ಬಾಲಿವುಡ್ ಚಿತ್ರಕ್ಕಿಂತಲೂ ಕಡಿಮೆ ಇಲ್ಲದಂತಿವೆ. ಹಂತಹಂತವಾಗಿ ಈ ಚಿತ್ರದ ಸ್ಟಿಲ್ಸ್ ಬಿಡುಗಡೆಯಾಗುತ್ತಿದ್ದು, ಕಲಾರಸಿಕರನ್ನು ಕೆಣಕುತ್ತಿವೆ. ಈಗ ಅಂತಹದ್ದೇ ಕೆಲವು ರೊಮ್ಯಾಂಟಿಕ್ ಸ್ಟಿಲ್ಸ್ ಬಿಡುಗಡೆಯಾಗಿವೆ.

  'ಸಿಲ್ಕ್' ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ವಯಸ್ಕರ ಸರ್ಟಿಫಿಕೇಟ್ ನೀಡಿದೆ. ಅಂದರೆ ಎ ಸರ್ಟಿಫಿಕೇಟ್ ನೀಡಿದೆ. ಅದಕ್ಕೆ ತಕ್ಕಂತೆ ಈ ಚಿತ್ರದ ಸನ್ನಿವೇಶಗಳು ಇರುವುದು ಇನ್ನೊಂದು ವಿಶೇಷ. ಇದು ವೀಣಾ ಮಲಿಕ್ ಅಭಿನಯದ ಚೊಚ್ಚಲ ಕನ್ನಡ ಚಿತ್ರ.

  ಈ ಚಿತ್ರದ ಮೂಲಕ ಅಕ್ಷಯ್ ನಾಯಕ ನಟರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಸಾಕಷ್ಟು ಬಂಡವಾಳ ಸುರಿದು ವೀಣಾರನ್ನು ಕನ್ನಡಕ್ಕೆ ಕರೆತಂದ ಸಾಹಸವನ್ನು ನಿರ್ಮಾಪಕ ವೆಂಕಟಪ್ಪ ಮಾಡಿದ್ದಾರೆ. ಸ್ಲೈಡ್ ಗಳಲ್ಲಿ ವೀಣಾರ ತಿಳಿನೀಲಿ ಚಿತ್ರಗಳನ್ನು ಸವಿಯಬಹುದು.

  ಸಮುದ್ರ ಕಿನಾರೆಯಲ್ಲಿ ಮೈಮರೆತ ಪ್ರೇಮಿಗಳು

  ಸಮುದ್ರ ಕಿನಾರೆಯಲ್ಲಿ ಮೈಮರೆತ ಪ್ರೇಮಿಗಳು

  ಬಹುಶಃ ಇಲ್ಲಿನ ಚಿತ್ರಗಳನ್ನು ನೋಡುತ್ತಿದ್ದರೆ ಇದು ರೊಮ್ಯಾಂಟಿಕ್ ಹಾಡಿನ ದೃಶ್ಯಗಳು ಅನ್ನಿಸದೆ ಇರದು. ಸಮುದ್ರ ಕಿನಾರೆಯಲ್ಲಿ ಒಬ್ಬರಿಗೊಬ್ಬರು ಮೈಮರೆತು ಸಂಭ್ರಮಿಸಿದ ಗಳಿಗೆ.

  ಡರ್ಟಿ ಪಿಕ್ಚರ್ ರೀಮೇಕ್ ಅಲ್ಲವೇ ಅಲ್ಲ

  ಡರ್ಟಿ ಪಿಕ್ಚರ್ ರೀಮೇಕ್ ಅಲ್ಲವೇ ಅಲ್ಲ

  ಈ ಚಿತ್ರ ಹಿಂದಿಯ ಡರ್ಟಿ ಪಿಕ್ಚರ್ ರೀಮೇಕ್ ಅಲ್ಲ. ಆದರೆ ಆ ಚಿತ್ರದಿಂದ ಸ್ಫೂರ್ತಿ ಪಡೆದು ಈ ಕಥೆಯನ್ನು ಹೆಣೆಯಲಾಗಿದೆ ಎನ್ನುತ್ತವೆ ಮೂಲಗಳು.

  ಚಿತ್ರದ ಶೀರ್ಷಿಕೆ 'ಸಿಲ್ಕ್: ಸಖತ್ ಹಾಟ್' ಅಷ್ಟೇ

  ಚಿತ್ರದ ಶೀರ್ಷಿಕೆ 'ಸಿಲ್ಕ್: ಸಖತ್ ಹಾಟ್' ಅಷ್ಟೇ

  ಶೀಘ್ರದಲ್ಲೇ ಈ ಚಿತ್ರದ ಆಡಿಯೋ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಈ ಚಿತ್ರಕ್ಕೆ ಮೊದಲು ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿತ್ತು. ಏಕಾಏಕಿ ತಮ್ಮ ಡರ್ಟಿ ಪಿಕ್ಚರ್ ಚಿತ್ರದ ಹೆಸರನ್ನಿಟ್ಟರೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸುಮ್ಮನಿರ್ತಾರಾ. ಆಕೆ ಕೋರ್ಟ್ ನಲ್ಲಿ ದಾವಾ ಹೂಡಿ ಗೆದ್ದರು. ಬಳಿಕ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

  ವೀಣಾ ಜೊತೆ ರೊಮ್ಯಾನ್ಸ್ ಮಾಡಿದ ನಟ ಅಕ್ಷಯ್

  ವೀಣಾ ಜೊತೆ ರೊಮ್ಯಾನ್ಸ್ ಮಾಡಿದ ನಟ ಅಕ್ಷಯ್

  ವೀಣಾ ಮಲಿಕ್ ಜೊತೆ ಅಕ್ಷಯ್ ರೋಮ್ಯಾನ್ಸ್ ತ್ರಿಶೂಲ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಪ್ಪ ನಿರ್ಮಿಸುತ್ತಿದ್ದಾರೆ. ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವವರು ನಟ ಅಕ್ಷಯ್. ಸನಾ ಖಾನ್, ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

  ಸಿಲ್ಕ್ ಸ್ಮಿತಾ ಅವರೇ ಚಿತ್ರಕ್ಕೆ ಸ್ಫೂರ್ತಿ

  ಸಿಲ್ಕ್ ಸ್ಮಿತಾ ಅವರೇ ಚಿತ್ರಕ್ಕೆ ಸ್ಫೂರ್ತಿ

  ಕಥೆಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿಯಂತೆ ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

  ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಾಟ್ ವೀಣಾ

  ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಾಟ್ ವೀಣಾ

  ಇತ್ತೀಚೆಗೆ ಥೈಲ್ಯಾಂಡ್ ನಲ್ಲಿ ಈ ಚಿತ್ರದ ಹಾಡೊಂದನ್ನು ಚಿತ್ರೀಕಸುವ ಸಂದರ್ಭದಲ್ಲಿ ವೀಣಾ ಕಾಲಿಗೆ ಪೆಟ್ಟಾಗಿತ್ತು. ಆ ನೋವಿನಲ್ಲೂ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಿದ್ದರು ವೀಣಾ.

  ಥೈಲ್ಯಾಂಡ್ ಹವಾಗುಣಕ್ಕೆ ಮೈಸೋತಿದ್ದ ತಾರೆ

  ಥೈಲ್ಯಾಂಡ್ ಹವಾಗುಣಕ್ಕೆ ಮೈಸೋತಿದ್ದ ತಾರೆ

  ಥೈಲ್ಯಾಂಡ್ ನಲ್ಲಿ ಒಳ್ಳೆಯ ಹವಾಗುಣ ಥೈಲ್ಯಾಂಡ್ ನಲ್ಲಿ ಒಳ್ಳೆಯ ಹವಾಗುಣವಿದೆ. ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣ ಇದು. ನನ್ನ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಥೈಲ್ಯಾಂಡ್ ಸಹ ಒಂದು ಎಂದು ವೀಣಾ ಮಲಿಕ್ ಹೇಳಿದ್ದಾರೆ.

  ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

  ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

  ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಜೆಸ್ಸಿ ಗಿಫ್ಟ್ ಸಂಗೀತ ಇರುವ ಈ ಚಿತ್ರವನ್ನು ತ್ರಿಶೂಲ್ ನಿರ್ದೇಶಿಸಿದ್ದಾರೆ. ವೀಣಾ ಮಲಿಕ್ ಜೊತೆ ಅಕ್ಷಯ್ ಅಭಿನಯಿಸುತ್ತಿರುವ ಚಿತ್ರವಿದು. ಆರ್.ವಿ.ವೆಂಕಟಪ್ಪ ಚಿತ್ರದ ನಿರ್ಮಾಪಕರು. ಈ ಚಿತ್ರ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಎನ್ನುತ್ತಿದೆ ಚಿತ್ರತಂಡ. ಸೆನ್ಸಾರ್ ಮಂಡಲಿ 'ಎ' ಸರ್ಟಿಫಿಕೇಟ್ ನೀಡಿದೆ.

  ಪಡ್ಡೆಗಳನ್ನು ಪಲ್ಟಿ ಹೊಡೆಸುವ ದೃಶ್ಯಗಳು

  ಪಡ್ಡೆಗಳನ್ನು ಪಲ್ಟಿ ಹೊಡೆಸುವ ದೃಶ್ಯಗಳು

  ಪಡ್ಡೆಗಳನ್ನು ಪಲ್ಟಿ ಹೊಡೆಸುತ್ತಿರುವ ದೃಶ್ಯಗಳು ಚಿತ್ರದಲ್ಲಿ ಪಡ್ಡೆಗಳ ಮೈ ಬೆಚ್ಚಗೆ, ಮನಸ್ಸನ್ನು ಹಗುರ ಮಾಡುವ ಹಲವಾರು ದೃಶ್ಯಗಳಿವೆ. ಅಕ್ಷಯ್ ಹಾಗೂ ವೀಣಾ ನಡುವಿನ ಚುಂಬನ ದೃಶ್ಯಗಳಂತೂ ಪಡ್ಡೆಗಳು ಪಲ್ಟಿ ಮೇಲೆ ಪಲ್ಟಿ ಹೊಡೆಯುವಂತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಜುಲೈನಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ.

  ಹಮಾರಾ ಸಾಮ್ನೆ ವಿದ್ಯಾ ಕುಚ್ ನಹಿ

  ಹಮಾರಾ ಸಾಮ್ನೆ ವಿದ್ಯಾ ಕುಚ್ ನಹಿ

  ವಿದ್ಯಾ ಬಾಲನ್ ಅಭಿನಯಕ್ಕಿಂತಲೂ ಸೂಪರ್ ಆದರೆ ವಿದ್ಯಾ ಬಾಲನ್ ಅವರ ಅಭಿನಯ ಹೇಗೋ ಏನೋ ತಮಗೆ ಗೊತ್ತಿಲ್ಲ. ಚಿತ್ರದಲ್ಲಿ ತಮ್ಮ ಅಭಿನಯವಂತೂ ಸೊಗಸಾಗಿರುತ್ತದೆ ಎಂದಿದ್ದಾರೆ.

  English summary
  Pakistani actress Veena Malik debut Kannada movie Silk Sakkath Hot films romantic scenes. The movie is suppose to release in July 2013. Recently, a song on Veena Malik and her co-star Akshay was shot in Pattaya, Thailand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X