»   » ಸಿಲ್ಕ್ ಸಖತ್ ಹಾಟ್ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ

ಸಿಲ್ಕ್ ಸಖತ್ ಹಾಟ್ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ

By: ನಿಲೋಫೆರ್ ಅನ್ಸಾರಿ
Subscribe to Filmibeat Kannada

ವೀಣಾ ಮಲಿಕ್ ಅಭಿನಯದ ಚೊಚ್ಚಲ ಕನ್ನಡ ಚಿತ್ರ ಸಿಲ್ಕ್ ಸಖತ್ ಹಾಟ್ ಚಿತ್ರಕ್ಕೆ ಮೊದಲ ದಿನ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ತೆರೆಕಂಡಿರುವ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ವಿಶೇಷ. ಸಿಲ್ಕ್ ಬಿಡುಗಡೆಯಾಗಿರುವ 140 ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.[ಸಿಲ್ಕ್ ಸಖತ್ ಗ್ಯಾಲರಿ]

ಚಿತ್ರ ಬಿಡುಗಡೆಯಾದ ಮೊದಲ ದಿನವೇ ನಾಯಕ ನಟ ಅಕ್ಷಯ್ ಜೊತೆ ವೀಣಾ ಮಲಿಕ್ ಅವರು ಅಭಿಮಾನಿಗಳೊಂದಿಗೆ ತಮ್ಮ ಚಿತ್ರವನ್ನು ವಿಕ್ಷಿಸಿ ಸಂತಸಪಟ್ಟರು. ಈ ಬಗ್ಗೆ ಟ್ವೀಟಿಸಿರುವ ವೀಣಾ ಮಲಿಕ್, ಮೊದಲ ದಿನ ಮೊದಲ ಶೋ ಏಷ್ಯಾದಲ್ಲೇ ಅತಿದೊಡ್ಡ 1480 ಆಸನಗಳ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿದೆ ಎಂದಿದ್ದಾರೆ.

ಇನ್ನೊಂದು ವಿಶೇಷ ಎಂದರೆ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯ ವ್ಯಕ್ತವಾಗುತ್ತಿರುವುದು. ಮಂಗಳೂರು, ಉಡುಪಿ, ಹೈದರಾಬಾದ್ ಕರ್ನಾಟಕ, ಮೈಸೂರಿನಲ್ಲಿ ಚಿತ್ರಮಂದಿರಗಳು ತುಂಬಿದ ಪ್ರದರ್ಶನ ಕಾಣುತ್ತಿವೆ ಎಂಬ ರಿಪೋರ್ಟ್ ಬರುತ್ತಿದೆ. [ಸಿಲ್ಕ್ ಸಖತ್ ಹಾಟ್ ಚಿತ್ರ ವಿಮರ್ಶೆ]

ಅಭಿಮಾನಿಗಳ ಜೊತೆ ತಮ್ಮ ಚಿತ್ರವನ್ನು ವೀಕ್ಷಿಸಿದ್ದಕ್ಕೆ ತುಂಬ ಸಂತಸ ವ್ಯಕ್ತಪಡಿಸಿದ್ದಾರೆ ವೀಣಾ ಮಲಿಕ್. ಹಳ್ಳಿಯ ಮುಗ್ಧ ಯುವತಿ ವಿಜಯಲಕ್ಷ್ಮಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ನಾಯಕ ನಟ ಅಕ್ಷಯ್ ಅವರು ಶಿವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಡುಕೆಂಪು ಸೀರೆಯಲ್ಲಿ ಮಿಂಚಿದ ವೀಣಾ

ಕಡುಕೆಂಪು ಸೀರೆಯಲ್ಲಿ ಮಿಂಚುತ್ತಿದ್ದ ವೀಣಾ ಮಲಿಕ್ ವಿಜಯ ಸಂಕೇತವನ್ನೂ ತೋರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು.

ಅಕ್ಷಯ್ ಜೊತೆ ವೀಣಾ ರೋಡ್ ಶೋ

ಚಿತ್ರದಲ್ಲಿ ಬಳಸಿರುವ ತೆರೆದ ಜೀಪಿನಲ್ಲಿ ವೀಣಾ ಮಲಿಕ್ ಹಾಗೂ ಅಕ್ಷಯ್ ರೋಡ್ ಶೋ ಮೂಲಕ ಕಪಾಲಿ ಚಿತ್ರಮಂದಿರಕ್ಕೆ ಆಗಮಿಸಿದರು.

ಗಾಂಧಿನಗರದಲ್ಲಿ ಟ್ರಾಫಿಕ್ ಜಾಮ್

ಟ್ರಾಫಿಕನ್ನೂ ಲೆಕ್ಕಿಸದೆ ವೀಣಾ ತೆರೆದ ವಾಹನದಲ್ಲಿ ಬಂದಿದ್ದು ನೋಡುಗರಿಗೆ ಅಚ್ಚರಿ ತರಿಸಿತು.

ತಣ್ಣನೆ ಹವಾಮಾನದಲ್ಲೂ ಸಖತ್ ಹಾಟ್

ಬೆಂಗಳೂರಿನ ತಣ್ಣನೆಯ ಹವಾಮಾನಕ್ಕೆ ವೀಣಾ ಮಲಿಕ್ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದರು.

ದ್ವಿಚಕ್ರ ವಾಹನಗಳನ್ನು ಹಿಂಬಾಲಿಸಿದ ಕ್ಷಣ

ಗಾಂಧಿನಗದಲ್ಲಿ ಅವರ ಜೀಪು ದ್ವಿಚಕ್ರ ವಾಹನಗಳನ್ನು ಹಿಂಬಾಲಿಸಿದಾಗಿನ ದೃಶ್ಯವಿದು.

ಚಿತ್ರಮಂದಿರದಲ್ಲಿ ವೀಣಾ ಮಲಿಕ್ ಜೊತೆ ಅಕ್ಷಯ್

ಚಿತ್ರಮಂದಿರದಲ್ಲಿ ವೀಣಾ ಮಲಿಕ್, ಅಕ್ಷಯ್ ಬಂದ ವೇಳೆ. ಇಬ್ಬರೂ ಕೆಲ ಸಮಯ ಅಭಿಮಾನಿಗಳ ಜೊತೆ ಚಿತ್ರವನ್ನು ವೀಕ್ಷಿಸಿದರು.

ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗೆ ವೀಣಾ ಎಕ್ಸೈಟ್

ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗೆ ವೀಣಾ ಮಲಿಕ್ ತುಂಬಾ ಎಕ್ಸೈಟ್ ಆಗಿದ್ದರು.

ಲೈಂಗಿಕ ಕಾರ್ಯಕರ್ತೆಯಾಗಿ ವೀಣಾ ಮಲಿಕ್

ಸಿಲ್ಕ್ ಚಿತ್ರದಲ್ಲಿ ವೀಣಾ ಮಲಿಕ್ ಅವರು ಲೈಂಗಿಕ ಕಾರ್ಯಕರ್ತೆಯಾಗಿ ಅಭಿನಯಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯೊಬ್ಬಳ ಬಾಳಿನಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

ನಟ ಅಕ್ಷಯ್ ಅವರದು ರೌಡಿ ಪಾತ್ರ

ಇನ್ನು ಚಿತ್ರದ ನಾಯಕ ನಟ ಅಕ್ಷಯ್ ಅವರದು ರೌಡಿ ಪಾತ್ರ. ಆದರೆ ಆತ ಚಿತ್ರದಲ್ಲಿ ಬದಲಾಗುತ್ತಾನೆ. ಲಾಂಗು ಮಚ್ಚು ಕೈಬಿಡುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ.

English summary
Bollywood actress Veena Malik most awaited Kannada movie Silk Sakkath hot Maga has just hit the silver screens all over and running successfully. The film has release in 140 screens among 50 theatres that usually doesn't screen Kannada films and has gained tremendous response from the audience.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada