»   » ಡೈಲಾಗ್ ಕಿಂಗ್ ಸಾಯಿ ಕುಮಾರ್ ಗೆ ಪಿತೃ ವಿಯೋಗ

ಡೈಲಾಗ್ ಕಿಂಗ್ ಸಾಯಿ ಕುಮಾರ್ ಗೆ ಪಿತೃ ವಿಯೋಗ

Posted By:
Subscribe to Filmibeat Kannada

ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತು ರವಿಶಂಕರ್ ತಂದೆ, ಖ್ಯಾತ ಡಬ್ಬಿಂಗ್ ಕಲಾವಿದ ಮತ್ತು ನಟ ಪಿ.ಜೆ.ಶರ್ಮಾ (ಪುಡಿಪ್ಪೇದ್ದಿ ಜೋಗೇಶ್ವರ ಶರ್ಮಾ) ಭಾನುವಾರ (ಡಿಸೆಂಬರ್ 14) ಬೆಳ್ಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 70 ವರ್ಷ ವಯಸ್ಸಿನ ಶರ್ಮಾ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ವಿಜಿಯನಗರಂ ನಲ್ಲಿ ಜನಿಸಿದ ಪಿ.ಜೆ.ಶರ್ಮಾ, ಡಬ್ಬಿಂಗ್ ಕಲಾವಿದನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದೊಡ್ಡ ದೊಡ್ಡ ತಾರೆಯರಿಗೆ ಕಂಠದಾನ ಮಾಡಿರುವ ಪಿ.ಜೆ.ಶರ್ಮಾ, ಕನ್ನಡ ಮತ್ತು ತೆಲುಗಿನಲ್ಲಿ 150ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Veteran Actor-Dubbing Artist P.J.Sharma dead1

'ಅಥನು', 'ರಾಮ್ ರಾಬರ್ಟ್ ರಹೀಮ್', 'ಕಲೆಕ್ಟರ್ ಜಾನಕಿ' ಚಿತ್ರಗಳ ಮೂಲಕ ಜನಪ್ರಿಯ ನಟರಾದ ಶರ್ಮಾ, ಐವರು ಮಕ್ಕಳನ್ನು ಅಗಲಿದ್ದಾರೆ. ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಶರ್ಮಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ವಿಪರ್ಯಾಸ ಅಂದ್ರೆ, ನಟ ಸಾಯಿಕುಮಾರ್ ಪುತ್ರ ಆದಿಯ ವಿವಾಹ ಮಹೋತ್ಸವ ಶನಿವಾರವಷ್ಟೇ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಸಂಭ್ರಮದ ಬೆನ್ನಲ್ಲೇ ಸಾಯಿಕುಮಾರ್ ಕುಟುಂಬದಲ್ಲಿ ಸೂತಕದ ಛಾಯೆ ಮೂಡಿದೆ. [ಸಾಯಿಕುಮಾರ್ ಪುತ್ರ ಆದಿ ಮದುವೆ ಚಿತ್ರಗಳು ]

Veteran Actor-Dubbing Artist P.J.Sharma dead3

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ರಾಜ್ಯಸಭಾ ಸದಸ್ಯ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಇಡೀ ತೆಲುಗು ಚಿತ್ರರಂಗ ಪಿ.ಜೆ.ಶರ್ಮಾ ಸಾವಿಗೆ ಕಂಬನಿ ಮಿಡಿದಿದೆ.

English summary
Veteran Actor-Dubbing Artist P.J.Sharma (Pudipeddi Jogeswara Sharma) dead breathed his last at his residence on Sunday (December 14). P.J.Sharma was 70 years old, was unwell for a while and heart-attack brought the end. P.J.Sharma is survived by three sons and two daughters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada