For Quick Alerts
  ALLOW NOTIFICATIONS  
  For Daily Alerts

  ಬಸವನಗುಡಿ ಗಣೇಶೋತ್ಸವಕ್ಕೆ ಶಾರೂಖ್ ಖಾನ್

  |

  ರಾಜಧಾನಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಸಂಘ ಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಹೆಸರು ಬಸವನಗುಡಿಯ ವಿದ್ಯಾರಣ್ಯ ಯುವಕ ಸಂಘ.

  ಎನ್ ಆರ್ ಕಾಲೋನಿಯ ಆಚಾರ್ಯ ಪಾಠಶಾಲೆಗೆ ಹೊಂದಿಕೊಂಡಿರುವ ಮೈದಾನದಲ್ಲಿ ವರ್ಷದಿಂದ ವರ್ಷಕ್ಕೆ ವೈಭವೋಪಿತವಾಗಿ, ವಿಶಿಷ್ಟವಾಗಿ ಸಾರ್ವಜನಿಕ ಗಣೇಶ ಹಬ್ಬ ನಡೆಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಯುವಕ ಸಂಘ ಈ ಬಾರಿ ಸೆಲೆಬ್ರಿಟಿ ಜಗತ್ತಿನ ಘಟಾನುಘಟಿಗಳನ್ನು ಬೆಂಗಳೂರಿಗೆ ಕರೆತರಲಿದೆ.

  ಬೆಂಗಳೂರಿನ ಹಳೆಯಸಂಘಗಳಲ್ಲಿ ಒಂದಾದ ವಿದ್ಯಾರಣ್ಯ ಯುವಕ ಸಂಘ ಈ ಬಾರಿಯ ಅಂದರೆ ತನ್ನ ಐವತ್ತನೇ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದಶಾ ಶಾರೂಖ್ ಖಾನ್, ವಿ ಹರಿಕೃಷ್ಣ, ಇಳಯರಾಜ, ಯೇಸುದಾಸ್,ಸೋನು ನಿಗಮ್, ಶಿವಮಣಿ ಮುಂತಾದವರಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ.

  ಕೆಲವೊಂದು ಕಾರ್ಯಕ್ರಮಗಳು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

  ಸೆಪ್ಟಂಬರ್ 19 ರಿಂದ 28ರ ವರೆಗೆ ನಡೆಯುವ ಕಾರ್ಯಕ್ರಮದ ಪಟ್ಟಿ ಇಂತಿದೆ ( ಸಮಯ ಸಂಜೆ):

  19.09.12

  7 ಗಂಟೆಯಿಂದ - ಕೆ ಜೆ ಯೇಸುದಾಸ್ ಅವರಿಂದ ಶಾಸ್ತ್ರೀಯ ಸಂಗೀತ

  20 .09 .12 (ನ್ಯಾಷನಲ್ ಕಾಲೇಜ್ ಮೈದಾನ)
  6 ರಿಂದ 7 - ಕಸ್ತೂರಿ ಶಂಕರ್ ಮತ್ತು ತಂಡವರಿಂದ ಸಂಗೀತ ಸಂಜೆ
  7 ರಿಂದ - ವಿ ಹರಿಕೃಷ್ಣ ಮತ್ತು ತಂಡವರಿಂದ ಸಂಗೀತ ಸಂಜೆ

  21 .09 .12 (ನ್ಯಾಷನಲ್ ಕಾಲೇಜ್ ಮೈದಾನ)
  6 ರಿಂದ 7 - ಸಂಗೀತ ಕಟ್ಟಿ ಮತ್ತು ತಂಡದವರಿಂದ ಸಂಗೀತ ಸಂಜೆ
  7 ರಿಂದ - ದೇವಿಶ್ರೀ ಪ್ರಸಾದ್ ಮತ್ತು ತಂಡದವರಿಂದ ಸಂಗೀತ ಸಂಜೆ ( ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಹಾಡುಗಳು)

  22.09.12
  6 ರಿಂದ 7 - ಎಂ ಡಿ ಪಲ್ಲವಿ ಮತ್ತು ತಂಡವರಿಂದ ಭಕ್ತಿಗೀತೆ, ಚಿತ್ರಗೀತೆ
  7ರಿಂದ - ಅರುಣ್ ಕುಮಾರ್, ಗಿರಿಧರ್ ಉಡುಪ ಮುಂತಾದವರಿಂದ ಇನ್ಸ್ಟ್ರುಮೆಂಟ್

  23 .09.12 (ನ್ಯಾಷನಲ್ ಕಾಲೇಜ್ ಮೈದಾನ)
  6 ರಿಂದ 7 - ರಾಜನ್ ಬ್ರದರ್ಸ್ (visually blind) ಅವರಿಂದ ಚಿತ್ರಗೀತೆ
  7 ರಿಂದ - ಇಳಯರಾಜ ಮತ್ತು ತಂಡವರಿಂದ ಸಂಗೀತ ಸಂಜೆ ( ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಹಾಡುಗಳು)

  24 .09.12
  6 ರಿಂದ 7 - ಮಿಮಿಕ್ರಿ ದಯಾನಂದ್ ಅವರಿಂದ ಮಿಮಿಕ್ರಿ, ಹಾಸ್ಯ
  7 ರಿಂದ - ಸೋನು ನಿಗಮ್ ಮತ್ತು ತಂಡವರಿಂದ ಸಂಗೀತ ಸಂಜೆ (ಕನ್ನಡ, ಹಿಂದಿ ಭಾಷೆಯ ಹಾಡುಗಳು)
  ಮುಖ್ಯ ಆಕರ್ಷಣೆ: ಹೆಸರಾಂತ ಬಾಲಿವುಡ್ ನಟ ಶಾರೂಖ್ ಖಾನ್

  25 .09.12
  6 ರಿಂದ 7 - ಆರ್ ಕೆ ಪದ್ಮನಾಭ ಅವರಿಂದ ಬಸವ, ಗಣೇಶ ಕೀರ್ತನೆ
  7 ರಿಂದ - ನಿರುಪಮಾ ರಾಜೇಂದ್ರ ಅವರಿಂದ 'ರಾಮಕಥಾ ವಿಸ್ಮಯ' ನೃತ್ಯರೂಪಕ

  26 .09.12
  6 ರಿಂದ 7 - ಬ್ಲೂ ಬಾಯ್ಸ್ ತಂಡವರಿಂದ ಸಂಗೀತ ಸಂಜೆ
  7 ಗಂಟೆಯಿಂದ ಶಂಕರ್ ಮಹಾದೇವನ್ ಮತ್ತು ತಂಡವರಿಂದ ಸಂಗೀತ ಸಂಜೆ

  27 .09.12
  6 ರಿಂದ 7 - ಪ್ರವೀಣ್ ಡಿ ರಾವ್ ಅವರಿಂದ ಕಾರ್ಯಕ್ರಮ
  7 ರಿಂದ - ಶಿವಮಣಿ, ಸ್ಟೀಫನ್ ದೇವಾಸಿ, ರಾಜೇಶ್ ವೈದ್ಯ, ಸೆಲ್ವ ಗಣೇಶ್, ವಿಕ್ಕು ಅವರಿಂದ ಫಿಯಾನೋ

  28 .09 .12
  6 ರಿಂದ 7 - ಅರ್ಚನಾ ಉಡುಪ ಮತ್ತು ತಂಡದವರಿಂದ ಲಘು ಸಂಗೀತ
  7 ರಿಂದ - ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್ ಮತ್ತು ತಂಡವರಿಂದ ಸಂಗೀತ ಸಂಜೆ

  English summary
  Vidyaranya Yuvaka Sangha is celebrating their 50th Public Ganesha Festival from September 19 to September 28, 2012. Bollywood badshaa Shahrukh Khan is the main attraction during this 10 days Ganesha festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X