»   » ಜನಪ್ರಿಯತೆಯಲ್ಲಿ ರಜನಿಕಾಂತ್ ರನ್ನು ಹಿಂದಿಕ್ಕಿದ ವಿಜಯ್

ಜನಪ್ರಿಯತೆಯಲ್ಲಿ ರಜನಿಕಾಂತ್ ರನ್ನು ಹಿಂದಿಕ್ಕಿದ ವಿಜಯ್

Posted By:
Subscribe to Filmibeat Kannada

ಕಾಲಿವುಡ್ ನ ಅತಿ ಹೆಚ್ಚು ಜನಪ್ರಿಯ ತಾರೆ ಯಾರು? ಈ ಪ್ರಶ್ನೆಗೆ ಮುಲಾಜಿಲ್ಲದೆ ಸಿಗುವ ಉತ್ತರ ''ಸೂಪರ್ ಸ್ಟಾರ್ ರಜನಿಕಾಂತ್''. ಆದ್ರೀಗ ಈ ಲೆಕ್ಕಾಚಾರ ತಲೆಕೆಳಗಾಗಿದೆ. ಕಾಲಿವುಡ್ ನ ಟಾಪ್ ನಟರ ಪಟ್ಟಿಯಲ್ಲಿ ರಜನಿಯನ್ನೂ ಮೀರಿಸುವ ಮಟ್ಟಕ್ಕೆ ಬೆಳೆದಿದ್ದಾರೆ ಇಳೆಯದಳಪತಿ ವಿಜಯ್.

'ಫೋರ್ಬ್ಸ್ ಇಂಡಿಯಾ' ಅನ್ನುವ ಮ್ಯಾಗಜೀನ್ ಹೊರತಂದಿರುವ ಈ ಸಾಲಿನ 'ಭಾರತದ ಟಾಪ್ 100 ಸೆಲೆಬ್ರಿಟಿ'ಗಳ ಪಟ್ಟಿಯಲ್ಲಿ ರಜನಿಕಾಂತ್ ರನ್ನ ಹಿಂದಿಕ್ಕುವ ಮೂಲಕ ಕಾಲಿವುಡ್ ನ ಜನಪ್ರಿಯ ತಾರೆಯಾಗಿದ್ದಾರೆ ವಿಜಯ್.

Vijay beats Rajinikanth in Forbes India Top 100 Celebrities list

ಟಾಪ್ 100 ರ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ವಿಜಯ್ 41ನೇ ಸ್ಥಾನ ಪಡೆದಿದ್ದರೆ, ಅದಕ್ಕಿಂತ 4 ಸ್ಥಾನಗಳು ಕೆಳಗೆ, ಅಂದ್ರೆ 45ನೇ ಸ್ಥಾನದಲ್ಲಿದ್ದಾರೆ ರಜನಿಕಾಂತ್. ಇನ್ನೂ ಕಾಲಿವುಡ್ ನಟ ಅಜಿತ್ 51ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. [ಸೂಪರ್ ಸ್ಟಾರ್ ರಜನಿಗೆ ವಿಕ್ರಂ, ಅಜಿತ್ ಚಾಲೆಂಜ್!]

ವಿಜಯ್, ಈ ಮಟ್ಟಕ್ಕೆ ಜನಪ್ರಿಯವಾಗುವುದಕ್ಕೆ ಈ ವರ್ಷ ತೆರೆಕಂಡ 'ಕತ್ತಿ' ಚಿತ್ರ ಕಾರಣ. ಬ್ಲಾಕ್ ಬಸ್ಟರ್ ಚಿತ್ರವಾದ 'ಕತ್ತಿ', ವಿಜಯ್ ಗೆ ಜನಪ್ರಿಯತೆ ಮತ್ತು ಗಳಿಕೆ ಎರಡನ್ನೂ ಡಬಲ್ ಮಾಡಿಕೊಟ್ಟಿದೆ. ಆದ್ರೆ ತಲೈವಾ ಅಭಿನಯದ 'ಕೊಚ್ಚಡಿಯನ್' ಮಕಾಡೆ ಮಲಗಿದ ಕಾರಣ ರಜನಿ ಸ್ಥಾನ ಏರುಪೇರಾಗಿದೆ. [ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್]

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಇದೇ ಪಟ್ಟಿಯಲ್ಲಿ 13 ನೇ ಸ್ಥಾನಗಳಿಸಿದ್ದಾರೆ. ಜನಪ್ರಿಯತೆ ಮತ್ತು ಗಳಿಕೆಯ ಆಧಾರದ ಮೇಲೆ 'ಫೋರ್ಬ್ಸ್ ಇಂಡಿಯಾ' ಈ ಪಟ್ಟಿ ತಯಾರಿಸಿದ್ದು, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಗ್ರಸ್ಥಾನ ಗಳಿಸಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಇದ್ದಾರೆ. (ಏಜೆನ್ಸೀಸ್)

English summary
'Kaththi' starrer Vijay has beat Super Star Rajinikanth and Thala Ajith in the Top 100 Celebrities list by Forbes India. Vijay is placed at 41st position, Rajinikanth occupies 45th place and Ajith is at 51st spot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada