For Quick Alerts
  ALLOW NOTIFICATIONS  
  For Daily Alerts

  'ನೀನಂದ್ರೆ ನನಗೆ ಇಷ್ಟ': ದೇವರಕೊಂಡ ಜೊತೆ ಪ್ರಿಯಾ ವಾರಿಯರ್.!

  |

  ಒಂದೇ ಒಂದು ಕಣ್ಸನ್ನೆ ಮೂಲಕ ಇಂಟರ್ ನೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ.

  'ಡಿಯರ್ ಕಾಮ್ರೇಡ್' ಸಿನಿಮಾ ಮುಗಿಸಿರುವ ವಿಜಯ್ ದೇವರಕೊಂಡ ಮೇಲೆ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಲವ್ವಾಗಿದೆಯಂತೆ. ಇದಕ್ಕೆ ಸಾಕ್ಷಿ ಎಂಬಂತೆ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿ ''ನೀನಂದ್ರೆ ನನಗೆ ತುಂಬಾ ಇಷ್ಟ'' ಎಂದು ಬರೆದುಕೊಂಡಿದ್ದಾರೆ.

  ಸಿನಿಮಾಟೋಗ್ರಫರ್ ಜೊತೆ ಪ್ರಿಯಾ ವಾರಿಯರ್ 'ಮುತ್ತಿನ ಆಟ'

  ಈ ಪೋಟೋ ಮತ್ತು ಸ್ಟೇಟಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲೂ ಭೇಟಿ ಮಾಡಿಲ್ಲ, ಯಾವ ಸಿನಿಮಾನೂ ಒಟ್ಟಿಗೆ ಮಾಡುತ್ತಿಲ್ಲ. ಆದರೂ ಇಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

  ಅಂತೂ ಕನ್ನಡಕ್ಕೆ ಬಂದೇ ಬಿಟ್ಟಳು ಕಣ್ಸನ್ನೆಯ ಸುಂದರಿ ಪ್ರಿಯಾ ವಾರಿಯರ್

  ಈ ಫೋಟೋ ಎಲ್ಲಿ ಕ್ಲಿಕ್ಕಿಸಿಕೊಂಡಿದ್ದು, ಯಾವಾಗ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, 'ಡಿಯರ್ ಕಾಮ್ರೇಡ್' ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ಫೋಟೋ ಎನ್ನಲಾಗಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು, 2 ಸಾವಿರಕ್ಕೂ ಅಧಿಕ ಕಾಮೆಂಟ್ ಬಂದಿದೆ.

  ಸದ್ಯ, ಪ್ರಿಯಾ ಪ್ರಕಾಶ್ ವಾರಿಯರ್ 'ಶ್ರೀದೇವಿ ಬಂಗಲೆ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಡೆ ಡಿಯರ್ ಕಾಮ್ರೇಡ್ ಮುಗಿಸಿರುವ ದೇವರಕೊಂಡ ಅಧಿಕೃತವಾಗಿ ಹೊಸ ಸಿನಿಮಾವನ್ನ ಘೋಷಿಸಿಲ್ಲ.

  English summary
  Malayalam actress priya prakash varrier has meet vijay devarakonda. This photo went viral in internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X