»   » ಸುದೀಪ್ ಬಗ್ಗೆ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸುರಿಸಿದ ಮಾತಿನ ಮುತ್ತು

ಸುದೀಪ್ ಬಗ್ಗೆ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸುರಿಸಿದ ಮಾತಿನ ಮುತ್ತು

Posted By:
Subscribe to Filmibeat Kannada

ಕಿಚ್ಚ ಸುದೀಪ್ ಕನ್ನಡದ ಗಡಿ ದಾಟಿ ಎತ್ತರಕ್ಕೆ ಬೆಳೆದಿರುವ ನಟ. ಸುದೀಪ್ ಜನಪ್ರಿಯತೆ, ಅವರ ಸ್ಟಾರ್ ಗಿರಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದರೆ ಸುದೀಪ್ ಅವರ ಒಳ್ಳೆಯ ಗುಣ ಮಾತ್ರ ಇಂದಿಗೂ ಬದಲಾಗಿಲ್ಲ.

ಸದ್ಯ ದೊಡ್ಡ ಸ್ಟಾರ್ ನಟನಾಗಿರುವ ಸುದೀಪ್ ಒಂದು ಕಾಲದಲ್ಲಿ ''ನನ್ನ ಹೆಸರು ಸುದೀಪ್ ಅಂತ.. ಮುಂದೆ ನಾನು ಸಿನಿಮಾ ಮಾಡಿದರೆ ನೀವು ಹಾಡಬೇಕು..'' ಅಂತ ಒಬ್ಬ ಗಾಯಕನಿಗೆ ಕೇಳಿದ್ದರಂತೆ.

ನಟ ಸುದೀಪ್ ಸಾಧನೆ ಕಂಡು ಪತ್ನಿ ಪ್ರಿಯಾ ಆಡಿದ ಮಾತುಗಳು ಹೀಗಿವೆ..

ಅಂದಹಾಗೆ, ಸುದೀಪ್ ಅವರ ಬಗ್ಗೆ ಇರುವ ಈ ಕುತೂಹಲಕಾರಿ ವಿಷಯವೊಂದು ಇತ್ತೀಚಿಗಷ್ಟೆ ನಡೆದ 'ಕಲರ್ಸ್ ಕನ್ನಡ' ವಾಹಿನಿಯ ಕಾರ್ಯಕ್ರಮವೊಂದರ ಮೂಲಕ ಬಹಿರಂಗವಾಗಿದೆ. ಮುಂದೆ ಓದಿ...

ಸುದೀಪ್ ಅವರ ಗುಣಗಾನ

ಸುದೀಪ್ ಪ್ರತಿಭೆ ಬಗ್ಗೆ.. ಅವರ ಗುಣದ ಬಗ್ಗೆ ಈಗಾಗಲೇ ಅನೇಕರು ಹಾಡಿ ಹೊಗಳಿದ್ದಾರೆ. ಸದ್ಯ ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಕೂಡ ಸುದೀಪ್ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಕಾರ್ಯಕ್ರಮದಲ್ಲಿ

'ಕಲರ್ಸ್ ಕನ್ನಡ' ವಾಹಿನಿಯ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಭಾಗಿಯಾಗಿದ್ದರು. ಈ ವೇಳೆ ಈ ಇಬ್ಬರು ಗಾಯಕರು ಸುದೀಪ್ ತಮ್ಮನ್ನು ಭೇಟಿ ಮಾಡಿದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!

ರಾಜೇಶ್ ಕೃಷ್ಣನ್ ಮಾತು

''ನನಗೆ ಸುದೀಪ್ ಅವರು 20 ವರ್ಷಗಳಿಂದ ಸ್ನೇಹಿತ. ಒಮ್ಮೆ ನಾನು ಒಂದು ಸ್ಟುಡಿಯೋದಲ್ಲಿ ಹಾಡುವಾಗ ಸುದೀಪ್ ಅಲ್ಲಿಗೆ ಬಂದಿದ್ದರು. ಆಗ ಸುದೀಪ್ ಕಾಲೇಜು ಓದುತ್ತಿದ್ದರು. ಅದೇ ಮೊದಲ ಬಾರಿಗೆ ನಾನು ಸುದೀಪ್ ಭೇಟಿಯಾಗಿದ್ದು'' - ರಾಜೇಶ್ ಕೃಷ್ಣನ್, ಗಾಯಕ

'ನನ್ನ ಹೆಸರು ಸುದೀಪ್ ಅಂತ...'

''ಆಗ ಅವರು 'ನನ್ನ ಹೆಸರು ಸುದೀಪ್ ಅಂತ.. ಮುಂದೆ ನಾನು ಸಿನಿಮಾ ಮಾಡಿದರೆ ನೀವು ಹಾಡಬೇಕು..' ಅಂತ ಹೇಳಿದ್ದರು. ಅಲ್ಲಿಂದ ಶುರುವಾಗಿ 'ಹೆಬ್ಬುಲಿ' ಚಿತ್ರದವರಗೆ ನಾವು ಜೊತೆಗಿದ್ದೇವೆ'' - ರಾಜೇಶ್ ಕೃಷ್ಣನ್, ಗಾಯಕ

ಸುದೀಪ್ ಹುಟ್ಟುಹಬ್ಬಕ್ಕೆ 'ದಿ ವಿಲನ್' ತಂಡ ಕೊಡ್ತಿರುವ ಗಿಫ್ಟ್ ಏನು?

ಕಿಚ್ಚನ ನೆನೆದ ವಿಜಯ್ ಪ್ರಕಾಶ್

ಅದೇ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಕೂಡ ಸುದೀಪ್ ಬಗ್ಗೆ ಮಾತನಾಡಿದ್ದಾರೆ. ''ಮೊದಲ ಬಾರಿ ಸುದೀಪ್ ನನ್ನನ್ನು ನೋಡಿದಾಗ ಅವರಿಗೆ ನನ್ನ ಪರಿಚಯ ಇರಲಿಲ್ಲ. ನನ್ನ ಹಾಡು ಕೇಳಿ 'ರೀ ಚೆನ್ನಾಗಿದೆ ರೀ.. ನಿಮ್ಮ ವಾಯ್ಸ್' ಅಂತ ಅವರು ಹೇಳಿದ್ದರು'' ಎಂದು ವಿಜಯ್ ಪ್ರಕಾಶ್ ಹೇಳಿಕೊಂಡಿದ್ದಾರೆ.

ಸುದೀಪ್ ಒಬ್ಬ ಸೆನ್ಸಿಬಲ್ ಆಕ್ಟರ್

''ಸುದೀಪ್ ಒಬ್ಬ ಸೆನ್ಸಿಬಲ್ ಆಕ್ಟರ್. ಸಿಂಗಿಂಗ್ ಬಗ್ಗೆ ಸುದೀಪ್ ಅವರಿಗೆ ಒಳ್ಳೆಯ ಐಡಿಯ ಇದೆ. ಅದಕ್ಕೆ ಅವರು ಅಷ್ಟು ಅದ್ಭುತವಾಗಿ ಹಾಡುತ್ತಾರೆ'' - ವಿಜಯ ಪ್ರಕಾಶ್, ಗಾಯಕ

Darshan V/S Sudeep in Kurukshetra | Filmibeat Kannada

ಸುದೀಪ್ ಫೇವರಿಟ್ ಗಾಯಕರು

ಸುದೀಪ್ ಅವರಿಗೆ ವಿಜಯ ಪ್ರಕಾಶ್ 'ಕೆಂಪೇಗೌಡ', 'ರನ್ನ', 'ಕೋಟಿಗೊಬ್ಬ 2', 'ಹೆಬ್ಬುಲಿ' ಸೇರಿದಂತೆ ಸಾಕಷ್ಟು ಚಿತ್ರಗಳ ಹಾಡನ್ನು ಹಾಡಿದ್ದಾರೆ. ರಾಜೇಶ್ ಕೃಷ್ಣನ್ 'ಹುಚ್ಚ', 'ಚಂದು' ಸೇರಿದಂತೆ ಸುದೀಪ್ ಅವರ ಅನೇಕ ಹಾಡುಗಳಿಗೆ ಧ್ವನಿಯಾಗಿದ್ದಾರೆ.

English summary
Popular Kannada Singers Vijay Prakash and Rajesh Krishnan spoke about Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada