For Quick Alerts
  ALLOW NOTIFICATIONS  
  For Daily Alerts

  ಮೋಡಿ ಮಾಡಿದೆ 'ಆ ಒಂದು ದಿನ'ದ ವಿಜಯ್ ಪ್ರಕಾಶ್ ಹಾಡು

  By Naveen
  |

  ಗಾಯಕ ವಿಜಯ ಪ್ರಕಾಶ್ ಸದ್ಯ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಅವರ ಹಾಡಿದ ಬಹುತೇಕ ಹಾಡುಗಳು ಈಗ ಸೂಪರ್ ಹಿಟ್ ಆಗಿವೆ. 'ಆ ಒಂದು ದಿನ' ಎಂಬ ಹೊಸ ಕನ್ನಡ ಸಿನಿಮಾದಲ್ಲಿಯೂ ವಿಜಯ್ ಪ್ರಕಾಶ್ ಒಂದು ಹಾಡನ್ನು ಹಾಡಿದ್ದಾರೆ.

  'ಆ ಒಂದು ದಿನ' ಸಿನಿಮಾ ಮುಖ್ಯವಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಇದೆ. ಸಿನಿಮಾದ ಒಂದು ಪ್ರಮುಖ ಹಂತದಲ್ಲಿ ಈ ಹಾಡು ಬರುತ್ತದೆ. ದೇಶಭಕ್ತಿಯ ಬಗ್ಗೆ ಇರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಹಾಡು ಕೇಳಿದರೆ ಮೈ ಜುಮ್ ಎನ್ನುತ್ತದೆ. ವಿಜಯ್ ಪ್ರಕಾಶ್ ಧ್ವನಿ ನಮ್ಮ ದೇಶಪ್ರೇಮವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಶ್ರೀ ಹರ್ಷ ಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

  'ಆ ಒಂದು ದಿನ'ದ ನಂತರ ದೇಶ ಬದಲಾಗಬಹುದು.?

  'ಆ ಒಂದು ದಿನ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಕೂಡ ಹೊಸಬರೇ. ಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದು, ಆ ಹಳ್ಳಿಯ ಜನರೇ ಚಿತ್ರದಲ್ಲಿ ನಟಿಸಿದ್ದಾರೆ. ಸಿಮ್ರಾನ್ ಚಿತ್ರದ ನಾಯಕಿ ಆಗಿದ್ದಾರೆ. ರವೀಂದ್ರ ಗೌಡ ಪಾಟೀಲ್ ಚಿತ್ರಕ್ಕೆ ಬಂಡವಾಳದ ಜೊತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ಆ ಒಂದು ದಿನ' ಚಿತ್ರ ಇದೇ ಫೆಬ್ರವರಿ 2ಕ್ಕೆ ತೆರೆಗೆ ಬರಲಿದೆ.

  English summary
  Popular singer Vijay Prakash sang a song in 'Aa Ondu Dina' movie. The movie is producing by Uttara Kannada farmar Ravindra Gowda Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X