For Quick Alerts
  ALLOW NOTIFICATIONS  
  For Daily Alerts

  ವಿಜಯ್ ರಾಘವೇಂದ್ರ ಮುಂದಿನ ಸಿನಿಮಾಗೆ ಭಾವನಾ ಮೆನನ್ ನಾಯಕಿ; ಖಡಕ್ ಪಾತ್ರದಲ್ಲಿ ನಟನೆ

  |

  ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಕಳೆದ ವರ್ಷ ಸೀತಾರಾಂ ಬಿನೋಯ್ ಕೇಸ್ ನಂಬರ್ 18 ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ತುಸು ಸದ್ದು ಮಾಡಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದ ಈ ಚಿತ್ರದಲ್ಲಿ ವಿಜಯರಾಘವೇಂದ್ರ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ವಿಜಯ್ ರಾಘವೇಂದ್ರ ಅಭಿನಯಕ್ಕೆ ವೀಕ್ಷಕರಿಂದ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿತ್ತು. ಅದರಲ್ಲಿಯೂ ಒಟಿಟಿಯಲ್ಲಿ ಉತ್ತಮ ವಿಮರ್ಶೆಗಳನ್ನು ಕೂಡ ಕೆಲ ಪ್ರೇಕ್ಷಕರಿಂದ ಪಡೆದುಕೊಂಡ ಈ ಚಿತ್ರ ಚೆನ್ನಾಗಿಯೇ ರೀಚ್ ಆಗಿತ್ತು.

  ಹೀಗೆ ಸೀತಾರಾಂ ಬಿನೋಯ್ ಕೇಸ್ ನಂ 18 ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ನಂತರ ಇದೀಗ ಆ ಚಿತ್ರದ ನಾಯಕ ಮತ್ತು ನಿರ್ದೇಶಕನ ಜೋಡಿ ಮತ್ತೊಮ್ಮೆ ಕೈ ಜೋಡಿಸುತ್ತಿದ್ದು, ಈ ಬಾರಿಯೂ ಪೊಲೀಸ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಪ್ರೇಕ್ಷಕರ ಮುಂದಿಡಲು ಬರುತ್ತಿದೆ. ಇಂದು ( ಸೆಪ್ಟೆಂಬರ್ 8 ) ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ವೀಕ್ಷಕರ ಗಮನ ಸೆಳೆದಿದೆ.

  ಅವಮಾನ ಮಾಯ ಮಾಡಿದ ಅಣ್ಣಾವ್ರ ಕಥೆ ಹೇಳಿದ ಟಿ.ಎನ್ ಸೀತಾರಾಂಅವಮಾನ ಮಾಯ ಮಾಡಿದ ಅಣ್ಣಾವ್ರ ಕಥೆ ಹೇಳಿದ ಟಿ.ಎನ್ ಸೀತಾರಾಂ

  ಇನ್ನು ವಿಜಯ್ ರಾಘವೇಂದ್ರ ವೃತ್ತಿಜೀವನದ ಐವತ್ತನೇ ಚಿತ್ರವಾದ ಸೀತಾರಾಂ ಬಿನೋಯ್ ಕೇಸ್ ನಂಬರ್ 18ಗೆ ಆ್ಯಕ್ಷನ್ ಕಟ್ ಹೇಳಿದ್ದ ದೇವಿ ಪ್ರಕಾಶ್ ಶೆಟ್ಟಿ ಈ ಚಿತ್ರಕ್ಕೆ ಕೇಸ್ ಆಫ್ ಕೊಂಡಾಣ ಎಂದು ಶೀರ್ಷಿಕೆಯನ್ನು ಇಟ್ಟಿದ್ದಾರೆ. ಶೀರ್ಷಿಕೆಯ ಕೆಳಗೆ 09/2018 ಎಂಬ ಅಡಿಬರಹವಿದ್ದು ಇದು ಆ ಕಾಲಮಾನದಲ್ಲಿ ನಡೆಯುವ ಕತೆ ಎಂಬುದನ್ನು ಚಿತ್ರತಂಡ ಬಿಚ್ಚಿಟ್ಟಿದೆ. ಹಾಗೂ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಳ್ಳುತ್ತಿದ್ದು, ಚೌಕ ನಂತರ ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಲಿದ್ದಾರೆ. ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಪೊಲೀಸ್ ಪಾತ್ರ ನಿರ್ವಹಿಸಿದ್ದ ಭಾವನಾ ಮೆನನ್ ಈ ಚಿತ್ರದಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ಇನ್ನು ಈ ಚಿತ್ರಕ್ಕೆ ಸ್ವತಃ ನಿರ್ದೇಶಕ ದೇವಿ ಪ್ರಕಾಶ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಬಂಡವಾಳ ಹೂಡುತ್ತಿದ್ದು, ಅರವಿಂದ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ವಿಜಯ ರಾಘವೇಂದ್ರ "ಈ ಬಾರಿ ರಾತ್ರಿ ತುಂಬಾ ವಿಶಾಲವಾಗಿರುತ್ತದೆ ಹಾಗೂ ಕರಾಳವಾಗಿರುತ್ತದೆ" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಮೂಲಕ ಇದೊಂದು ರಾತ್ರಿ ವೇಳೆ ನಡೆಯಲಿರುವ ಸಸ್ಪೆನ್ಸ್ ಥ್ರಿಲ್ಲರ್ ಎಂಬ ಸುಳಿವನ್ನು ಚಿನ್ನಾರಿ ಮುತ್ತ ಬಿಟ್ಟುಕೊಟ್ಟಿದ್ದಾರೆ.

  English summary
  Vijay Raghavendra and Devi Prasad Shetty are joining hands again for a new movie after Seetharam Binoy. Read on
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X