»   » ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ'

ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ'

Posted By:
Subscribe to Filmibeat Kannada

'ಬಿಗ್ ಬಾಸ್' ಯಶಸ್ಸಿನ ನಂತರ ತಮ್ಮ 'ಕಿಸ್ಮತ್' ಪರೀಕ್ಷೆ ಮಾಡುತ್ತಿರುವ ನಟ ವಿಜಯ್ ರಾಘವೇಂದ್ರ. ನಿರ್ದೇಶನದ ಜೊತೆ ನಟನೆಯಲ್ಲೂ ಬಿಜಿಯಾಗಿರುವ ವಿಜಯ್ ರಾಘವೇಂದ್ರ ಅಭಿನಯದ 'ವಂಶೋದ್ಧಾರಕ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಓಂ ಶ್ರೀಕಾಳಿಕಾಮಾತಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ವಂಶೋದ್ಧಾರಕ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U ಸರ್ಟಿಫಿಕೇಟ್ ನೀಡಿದೆ. ಜೊತೆಗೆ ಚಿತ್ರದ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ.

Vijay Raghavendra starrer 'Vamshodharaka' is all set to release

'ವಂಶೋದ್ಧಾರಕ' ಹೆಸರೇ ಹೇಳುವ ಹಾಗೆ ಇದು ಅಪ್ಪಟ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ. ವಿಜಯ ರಾಘವೇಂದ್ರ ಜೊತೆಗೆ ಮೇಘನಾ ರಾಜ್ ಅಭಿನಯಿಸಿರುವ ಈ ಚಿತ್ರದಲ್ಲಿ (ಜ್ಯೂಲಿ) ಲಕ್ಷ್ಮೀ, ವಿನಯಾಪ್ರಸಾದ್, ವೀಣಾ ಸುಂದರ್, ಶ್ರೀನಿವಾಸ್ ಮೂರ್ತಿ ಸೇರಿದಂತೆ ಅನೇಕ ಕಲಾವಿದರು ಇದ್ದಾರೆ. ['ವಂಶೋದ್ಧಾರಕ'ನಿಗೆ ನಾಯಕಿ ಮೇಘನಾ ರಾಜ್]

Vijay Raghavendra starrer 'Vamshodharaka' is all set to release

ಕಾಮಿಡಿ ಕಚಗುಳಿ ಇಡುವುದಕ್ಕೆ ರಂಗಾಯಣ ರಘು, ಸಾಧು ಕೋಕಿಲ, ಸಂಕೇತ್ ಕಾಶಿ, ಬಿರಾದಾರ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್ ಇದ್ದಾರೆ.

ವಿ.ಮನೋಹರ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಆದಿತ್ಯ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದಿರುವ 'ವಂಶೋದ್ಧಾರಕ' ಸದ್ಯದಲ್ಲೇ ರಿಲೀಸ್ ಆಗಲಿದೆ.

English summary
Kannada Actor Vijay Raghavendra and Meghana Raj starrer Kannada Movie 'Vamshodharaka' has received U Certificate from the censor board and is all set to release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada