Don't Miss!
- Automobiles
ಬಹುಬೇಡಿಕೆಯ ಹೋಂಡಾ ಆಕ್ಟಿವಾ ಸ್ಕೂಟರ್ ಮೇಲೆ ಭರ್ಜರಿ ಆಫರ್
- Sports
IND Vs NZ 2nd ODI: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ: 108 ರನ್ಗಳಿಗೆ ಆಲೌಟ್
- News
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ
- Finance
ಅನುಷ್ಕಾ, ಕೊಹ್ಲಿ ಬಾಡಿಗಾರ್ಡ್ ಸೋನು ವೇತನ ಎಷ್ಟಿದೆ ತಿಳಿಯಿರಿ
- Technology
ಇನ್ಸ್ಟಾಗ್ರಾಮ್ನಲ್ಲಿ ನೂತನ ಸೌಲಭ್ಯ!; ಟೀನೇಜರ್ಸ್ಗೆ ಸಖತ್ ಅನುಕೂಲ!
- Lifestyle
ದೇಹದಲ್ಲಿ ಮೆಗ್ನೇಸಿಯಂ ಕಡಿಮೆಯಾದ್ರೆ ಹೃದ್ರೋಗ ಖಚಿತ..! ಈ ಹತ್ತು ಆಹಾರಗಳು ನಿಮ್ಮ ಡಯಟ್ನಲ್ಲಿರಲಿ..
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Beast Movie Story: ಕನ್ನಡ ಸಿನಿಮಾದ ಕತೆಯನ್ನೇ ಕದ್ದು ಮಾಡಿದ ಸಿನಿಮಾ 'ಬೀಸ್ಟ್'!?
'ಕೆಜಿಎಫ್ 2' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದೆ. ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಬಿಡುಗಡೆಗೆ ಮುನ್ನವೇ ಕೋಟ್ಯಂತರ ಹಣ ಕಲೆಕ್ಷನ್ ಮಾಡಿದೆ.
ದೇಶದಾದ್ಯಂತ 'ಕೆಜಿಎಫ್ 2' ಹವಾ ಜೋರಾಗಿ ಎದ್ದಿದೆ. ಆದರೆ ಈ ಸಿನಿಮಾಕ್ಕೆ ತಮಿಳಿನ 'ಬೀಸ್ಟ್' ಸಿನಿಮಾ ಎದುರಾಳಿಯಾಗಿ ನಿಂತಿದೆ. 'ಕೆಜಿಎಫ್2' ಸಿನಿಮಾ ಏಪ್ರಿಲ್ 14 ಕ್ಕೆ ತೆರೆಗೆ ಬರುತ್ತಿದ್ದರೆ, ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 13 ಕ್ಕೆ ತೆರೆಗೆ ಬರುತ್ತಿದೆ.
'ಬೀಸ್ಟ್' ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ. ಮಾಲ್ ಒಂದನ್ನು ಭಯೊತ್ಪಾದಕರು ತಮ್ಮ ಸುಪರ್ಧಿಗೆ ತೆಗೆದುಕೊಂಡು, ಮಾಲ್‌ನಲ್ಲಿರುವವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅದೇ ಮಾಲ್‌ನಲ್ಲಿ ಇರುವ ಮಾಜಿ ಸೈನಿಕ ವಿಜಯ್ ಭಯೋತ್ಪಾದಕರ ವಿರುದ್ಧ ಹೋರಾಡಿ ಹೇಗೆ ಅವರನ್ನೆಲ್ಲ ಬಿಡಿಸುತ್ತಾನೆ ಎಂಬುದು ಸಿನಿಮಾದ ಕತೆ. ಆದರೆ ಇದೇ ಮಾದರಿಯ ಕತೆ ಈವರೆಗಿನ ಹಲವು ಸಿನಿಮಾಗಳಲ್ಲಿ ಬಂದಿದೆ. ಹಲವರು ಇದು ಹಾಲಿವುಡ್‌ನಿಂದ ಕದ್ದ ಕತೆ ಎನ್ನುತ್ತಿದ್ದಾರೆ. ಅಸಲಿಗೆ ಇದು ಕನ್ನಡದ ಸಿನಿಮಾದಿಂದಲೇ ಕದ್ದ ಕತೆ ಎನ್ನಲಾಗುತ್ತಿದೆ ಅದಕ್ಕೆ ಕಾರಣಗಳೂ ಇವೆ.

ಕನ್ನಡ ಸಿನಿಮಾ ಕತೆಯನ್ನು ಕದ್ದರೇ ವಿಜಯ್!
1993 ರಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ 'ನಿಷ್ಕರ್ಷ' ಸಿನಿಮಾದ ಕತೆಯನ್ನು ಕದ್ದು 'ಬೀಸ್ಟ್' ಸಿನಿಮಾ ಮಾಡಲಾಗಿದೆ ಎಂದು ಹಲವರು ಗುರುತಿಸಿದ್ದಾರೆ. 'ನಿಷ್ಕರ್ಷ' ಸಿನಿಮಾಕ್ಕೂ ತಮಿಳಿನ 'ಬೀಸ್ಟ್' ಸಿನಿಮಾಕ್ಕೂ ಸಾಕಷ್ಟು ಹೋಲಿಕೆಗಳೂ ಇರುವ ಕಾರಣ ಇದು ನಿಜವಾಗಿರುವ ಸಾಧ್ಯತೆಯೂ ಇದೆ.
Vijay
-
Rashmika
Movie:
ವಿಜಯ್-ರಶ್ಮಿಕಾ
ಸಿನಿಮಾಗೆ
ಮುಹೂರ್ತ,
ದಿಲ್
ರಾಜು-
ವಂಶಿ
ಪ್ರಾಜೆಕ್ಟ್
ಆರಂಭ

'ನಿಷ್ಕರ್ಷ' ಸಿನಿಮಾದ ಕತೆ ಏನು?
ವಿಷ್ಣುವರ್ಧನ್ ನಾಯಕ ನಟರಾಗಿ ನಟಿಸಿರುವ 'ನಿಷ್ಕರ್ಷ' ಸಿನಿಮಾದಲ್ಲಿ ಕಳ್ಳರ ಗ್ಯಾಂಗ್ ಒಂದು ಬ್ಯಾಂಕ್ ಒಂದರ ಮೇಲೆ ದಾಳಿ ಮಾಡಿ ಅಲ್ಲಿನ ಸಿಬ್ಬಂದಿ, ಗ್ರಾಹಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುತ್ತಾರೆ. ಆಗ ಸೈನ್ಯಾಧಿಕಾರಿ ಮೇಜರ್ ವಿಷ್ವನಾಥ್ ಅನ್ನು ಕಾರ್ಯಾಚರಣೆಗೆ ಕರೆಸಲಾಗುತ್ತದೆ. ಮೇಜರ್ ವಿಶ್ವನಾಥ್ ಪಾತ್ರ ನಿರ್ವಹಿಸಿರುವ ನಟ ವಿಷ್ಣುವರ್ಧನ್ ತನ್ನ ಶಕ್ತಿ, ಯುಕ್ತಿ ಉಪಯೋಗಿಸಿ ಬ್ಯಾಂಕ್ ಸಿಬ್ಬಂದಿಯನ್ನು, ಗ್ರಾಹಕರನ್ನು ರಕ್ಷಿಸುತ್ತಾರೆ. ಇಡೀ ಕಾರ್ಯಾಚರಣೆ ಬ್ಯಾಂಕ್ ಒಳಗೆ ನಡೆಯುತ್ತದೆ.

ಎರಡೂ ಸಿನಿಮಾದ ಕತೆಗೂ ಸಾಮ್ಯತೆ ಇದೆ
ತಮಿಳಿನ 'ಬೀಸ್ಟ್' ಸಿನಿಮಾದಲ್ಲಿ ಸಹ ಇದೇ ಮಾದರಿಯ ಕತೆ ಇದೆ. ಮಾಲ್ ಒಂದಕ್ಕೆ ನುಗ್ಗುವ ಭಯೋತ್ಪಾದಕರು ಅಲ್ಲಿನ ಗ್ರಾಹಕರನ್ನು ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುತ್ತಾರೆ. ಮಾಲ್ ಸೆಕ್ಯುರಿಟಿ ಆಗಿರುವ ವಿಜಯ್ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾನೆ. 'ನಿಷ್ಕರ್ಷ' ಸಿನಿಮಾದಂತೆ ಇಲ್ಲಿಯೂ ಸಹ ವಿಜಯ್ ಸೈನಿಕ ಆಗಿರುತ್ತಾರೆ. 'ನಿಷ್ಕರ್ಷ' ಸಿನಿಮಾದಲ್ಲಿ ಅನಂತ್‌ನಾಗ್ ಪಾತ್ರ ವಿಷ್ಣುವರ್ಧನ್ ಪಾತ್ರದ ಪರಿಚಯ ಮಾಡುವಂತೆ, ಇಲ್ಲಿಯೂ ಬೇರೊಂದು ಪಾತ್ರ ವಿಜಯ್ ಪರಿಚಯ ಮಾಡುತ್ತದೆ. ಇನ್ನೂ ಹಲವು ಹೋಲಿಕೆಗಳು ಈ ಎರಡೂ ಸಿನಿಮಾಕ್ಕೆ ಇವೆ.

ಹಾಲಿವುಡ್ ಸಿನಿಮಾದೊಂದಿಗೆ ಹೋಲಿಕೆ
'ನಿಷ್ಕರ್ಷ' ಮಾತ್ರವೇ ಅಲ್ಲ ಹಾಲಿವುಡ್ ಸಿನಿಮಾ, 'ಪಾಲ್ ಬ್ರಾಟ್: ದಿ ಮಾಲ್ ಕಾಪ್' ಸಿನಿಮಾದ ಜೊತೆಗೂ 'ಬೀಸ್ಟ್' ಕತೆಯನ್ನು ಹೋಲಿಸಲಾಗುತ್ತಿದೆ. ಆ ಸಿನಿಮಾದಲ್ಲಿ ನಾಯಕ ಪಾಲ್ ಬ್ರಾಟ್ ಮಾಲ್ ಒಂದರ ಸೆಕ್ಯುರಿಟಿ ಆಗಿರುತ್ತಾನೆ. ಮಾಲ್ ಗೆ ನುಗ್ಗಿ ಅಲ್ಲಿನ ಗ್ರಾಹಕರನ್ನು ಒತ್ತೆಯಾಳಾಗಿ ಇರಿಸಿಕೊಂಡ ದುಷ್ಟರ ತಂಡದ ವಿರುದ್ಧ ಹೋರಾಡಿ ಅವರನ್ನು ಬಿಡಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. 'ಬೀಸ್ಟ್' ಸಿನಿಮಾವನ್ನು ಕೆಲವರು 'ಮನಿಹೈಸ್ಟ್'ಗೆ ಸಹ ಹೋಲಿಸಿದ್ದಾರೆ. ಆ ವೆಬ್ ಸರಣಿಯ ಗಾಂಡಿಯಾದ ಪಾತ್ರಕ್ಕೂ ಬೀಸ್ಟ್ ಸಿನಿಮಾದ ವಿಜಯ್ ಪಾತ್ರಕ್ಕೂ ಹೋಲಿಕೆ ಇದೆ ಎಂದಿದ್ದಾರೆ.