For Quick Alerts
  ALLOW NOTIFICATIONS  
  For Daily Alerts

  1200 ಸ್ಕ್ರೀನ್‌ಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ವಿಜಯಾನಂದ' ರಿಲೀಸ್: ಕನ್ನಡದ ಮೊದಲ ಬಯೋಪಿಕ್ ಗೆಲ್ಲುತ್ತಾ?

  |

  ನಾಳೆ (ಡಿಸೆಂಬರ್ 9) ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ವಿಶ್ವ ಮಟ್ಟದಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಸೌಂಡ್ ಮಾಡಿವೆ. 'ಕೆಜಿಎಫ್ 2', '777 ಚಾರ್ಲಿ, 'ವಿಕ್ರಾಂತ್ ರೋಣ', 'ಕಾಂತಾರ' ಬಳಿಕ 'ವಿಜಯಾನಂದ' ರಿಲೀಸ್ ಆಗುತ್ತಿದೆ.

  'ವಿಜಯಾನಂದ' ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ. ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ವಿಜಯ್ ಸಂಕೇಶ್ವರ್ ಅವರ ಜೀವನ ಚರಿತ್ರೆಯನ್ನು ಆಧರಿಸಿ ನಿರ್ಮಾಣ ಆಗಿರುವ ಸಿನಿಮಾವಿದು. ಈ ಸಿನಿಮಾ ನಾಳೆ (ಡಿಸೆಂಬರ್ 9) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು,ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

  1200 ಸ್ಕ್ರೀನ್‌ಗಳಲ್ಲಿ 'ವಿಜಯಾನಂದ' ರಿಲೀಸ್

  ಹಾಗಂತ ಈ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗುತ್ತಿರುವ ಸ್ಕ್ರೀನ್‌ಗಳ ಸಂಖ್ಯೆ ಕೂಡ ದೊಡ್ಡದಿದೆ. ಚಿತ್ರತಂಡದ ಮಾಹಿತಿ ಪ್ರಕಾರ ಈ ಸಿನಿಮಾ ಸುಮಾರು 1200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಿಗೆ ಚಮತ್ಕಾರ ಮಾಡುತ್ತೆ ಅನ್ನೋದನ್ನು ನೋಡುವುದಕ್ಕೆ ಟ್ರೇಡ್ ಎಕ್ಸ್‌ಪರ್ಟ್‌ಗಳು ತುದಿಗಾಲಲ್ಲಿ ನಿಂತಿದ್ದಾರೆ.

  ಹೆಚ್ಚು ಕಡಿಮೆ 5 ದಶಕಗಳ ಅವಧಿಯಲ್ಲಿ ವಿಆರ್‌ಎಲ್ ಸಂಸ್ಥೆಯನ್ನು ಬೆಳೆಸಿದ ಸಾಧನೆ ಕಮ್ಮಿಯೇನಲ್ಲ. 1976ರಲ್ಲಿ ಒಂದು ಟ್ರಕ್‌ನಿಂದ ಆರಂಭ ಆಗಿದ್ದ ವಿಆರ್‌ಎಲ್ ಸಂಸ್ಥೆ ಇಂದು ದೇಶದ ಅತೀ ದೊಡ್ಡ ಲಾಜಿಸ್ಟಿಕ್ ಕಂಪನಿಯಾಗಿದೆ. ಇಷ್ಟು ಮಟ್ಟಕ್ಕೆ ಕಂಪನಿಯನ್ನು ತೆಗೆದುಕೊಂಡು ಬಂದಿದ್ದು, ಡಾ.ವಿಜಯ್ ಸಂಕೇಶ್ವರ್ ಹಾಗೂ ಅವರ ಪುತ್ರ ಆನಂದ್ ಸಂಕೇಶ್ವರ್. ಈ ಮಟ್ಟಕ್ಕೆ ಬೆಳೆಯಲು ಇವರ ಪಟ್ಟ ಪಾಡು ಹಾಗೂ ಸಾಹಸವನ್ನೇ ತೆರೆಮೇಲೆ ತರುತ್ತಿದ್ದಾರೆ.

  Vijay Sankeshwar Bio Pic Movie Vijayananda Releasing 1200 Screens

  ವಿಜಯಾನಂದ ಸಿನಿಮಾದಲ್ಲಿದೆ ದಿಗ್ಗಜರ ದರ್ಬಾರ್

  'ವಿಜಯಾನಂದ' ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಈಗಾಗಲೇ ಜನಪ್ರಿಯತೆಯನ್ನು ಗಳಿಸಿವೆ. ಅದರಲ್ಲೂ ಟ್ರೈಲರ್ ನೋಡಿದ ಮೇಲೆ ಸಿನಿಪ್ರಿಯರ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಅದೆಲ್ಲದಕ್ಕೂ ನಾಳೆ (ಡಿಸೆಂಬರ್ 9) ತೆರೆಬೀಳಲಿದೆ. ಈ ಹಿಂದೆ 'ಟ್ರಂಕ್' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದ ರಿಷಿಕಾ ಶರ್ಮಾ 'ವಿಜಯಾನಂದ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

  ಡಾ. ವಿಜಯ್ ಸಂಕೇಶ್ವರ್ ಅವರ ಪಾತ್ರದಲ್ಲಿ ನಿಹಾಲ್ ರಜಪೂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸಂಕೇಶ್ವರ್ ಅವರ ಬದುಕಿನ ಮೂರು ಪ್ರಮುಖ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಸೇರಿದಂತೆ ಸ್ಯಾಂಡಲ್‌ವುಡ್‌ನ ದೊಡ್ಡ ಕಲಾವಿದರ ದಂಡೇ 'ವಿಜಯಾನಂದ' ಸಿನಿಮಾದಲ್ಲಿದೆ.

  ಈ ಸಿನಿಮಾ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದರು. ವಿಜಯ್ ಸಂಕೇಶ್ವರ್ ಅವರ ಸಾಹಸವನ್ನು ಹತ್ತಿರದಿಂದ ನೋಡಿದ್ದಾರೆ. ಹೀಗಾಗಿ ವಿಜಯ ಸಂಕೇಶ್ವರ್ ಅವರ ಜೀವನವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಪಠ್ಯವನ್ನಾಗಿ ಅಳವಡಿಸಬೇಕು ಎಂದು ಹೇಳಿದ್ದರು. ಈಗ ನಾಳೆ (ಡಿಸೆಂಬರ್ 9)ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕುತೂಹಲವಿದೆ.

  English summary
  Vijay Sankeshwar Bio Pic Movie Vijayananda Releasing 1200 Screens, Know More.
  Thursday, December 8, 2022, 23:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X