For Quick Alerts
  ALLOW NOTIFICATIONS  
  For Daily Alerts

  ಗಂಡು ಮಗುವಿಗೆ ಜನ್ಮ ನೀಡಿದ ವಿಜಯ್ ಸೂರ್ಯ ದಂಪತಿ

  |

  ಪ್ರೇಮಿಗಳ ದಿನದಂದು ಎಲ್ಲರೂ ತಮ್ಮ ಪ್ರೀತಿ ಬಗ್ಗೆ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಆದರೆ ಕನ್ನಡ ನಟ ವಿಜಯ್ ಸೂರ್ಯ ಮಾತ್ರ ತಮ್ಮ ವೈವಾಹಿಕ ಜೀವನದ ಅತಿ ವಿಶೇಷವಾದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  ಗಾಯಕ ವಿಜಯ್ ಪ್ರಕಾಶ್ ಗೆ ಗಂಗಾವತಿಯಲ್ಲಿ ಅವಮಾನ | VIJAY PRAKASH | FILMIBEAT KANNADA

  ವಿಜಯ್ ಸೂರ್ಯ ತಂದೆಯಾಗಿದ್ದಾರೆ. ವಿಜಯ್ ಸೂರ್ಯ ಅವರ ಪತ್ನಿ ಚೈತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ವ್ಯಾಲೆಂಟೈನ್ ಡೇ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಖಚಿತ ಪಡಿಸಿದ್ದಾರೆ. ಈ ಮೂಲಕ ಪ್ರೇಮಿಗಳ ದಿನವನ್ನು ವಿಜಯ್ ಸೂರ್ಯ ಮತ್ತಷ್ಟು ವಿಶೇಷವಾಗಿಸಿಕೊಂಡಿದ್ದಾರೆ. ಮುಂದೆ ಓದಿ...

  ಗಂಡು ಮಗುವಿಗೆ ಅಪ್ಪನಾದ ಸೂರ್ಯ

  ಗಂಡು ಮಗುವಿಗೆ ಅಪ್ಪನಾದ ಸೂರ್ಯ

  ವಿಜಯ್ ಸೂರ್ಯ ಮತ್ತು ಚೈತ್ರಾ ದಂಪತಿಗೆ ಗಂಡು ಮಗು ಆಗಿದೆ. ಜನವರಿ 1 ರಂದು ಮಗು ಜನನವಾಗಿದ್ದು, ಆ ಸುದ್ದಿಯನ್ನು ಪ್ರೇಮಿಗಳ ದಿನದ ಪ್ರಯುಕ್ತ ಇಂದು ಅಧಿಕೃತವಾಗಿ ಅಭಿಮಾನಿಗಳ ಮುಂದಿಟ್ಟಿದ್ದಾರೆ.

  ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿ ಸಾಕ್ಷಿ' ನಟ ವಿಜಯ್ ಸೂರ್ಯ

  ಪ್ರೇಮಿಗಳ ದಿನದಂದೇ ವಿವಾಹವಾಗಿದ್ದ ಜೋಡಿ!

  ಪ್ರೇಮಿಗಳ ದಿನದಂದೇ ವಿವಾಹವಾಗಿದ್ದ ಜೋಡಿ!

  ವಿಜಯ್ ಸೂರ್ಯ ಮತ್ತು ಚೈತ್ರಾ ಜೋಡಿ ಕಳೆದ ವರ್ಷ (14-2-2019) ವಿವಾಹವಾಗಿದ್ದರು. ಈಗ ಸರಿಯಾಗಿ ಒಂದು ವರ್ಷ ತುಂಬಿದೆ. ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಸಂಭ್ರಮದಲ್ಲಿರುವ ವಿಜಯ್ ಸೂರ್ಯ ದಂಪತಿ ಇದೇ ದಿನ ತಾವು ತಂದೆ-ತಾಯಿ ಆಗಿರುವ ವಿಷಯದ ಸಂತಸದ ಸುದ್ದಿ ಬಹಿರಂಗಪಡಿಸಿದ್ದಾರೆ.

  ಮಗುವಿನ ಹೆಸರೇನು?

  ಮಗುವಿನ ಹೆಸರೇನು?

  ವಿಜಯ್ ಸೂರ್ಯ ಅವರ ಮಗುವಿಗೆ ಸೋಹನ್ ಸೂರ್ಯ ಎಂದು ಹೆಸರಿಡಲಾಗಿದೆ. ಜನವರಿ 1 ರಂದು ಮಗು ಹುಟ್ಟಿದ್ದು, ಹಬ್ಬದ ದಿನ ವಿಷಯ ಹಂಚಿಕೊಳ್ಳಲು ನಿರ್ಧರಿಸಿದ್ದರು. ಅಂದು ಸಾಧ್ಯವಾಗಿರಲಿಲ್ಲ, ಪ್ರೇಮಿಗಳ ದಿನದಂದು ಮದುವೆ ವಾರ್ಷಿಕೋತ್ಸವ ಇತ್ತು. ಈ ವಿಶೇಷ ದಿನದಲ್ಲಿ ಈ ಸುದ್ದಿ ಹಂಚಿಕೊಂಡಿದ್ದು ಸಂಭ್ರಮಕ್ಕೆ ಮೆರುಗು ತಂದಿದ್ದಾರೆ.

  ವಿಜಯ್ ಸೂರ್ಯ ಸಿನಿಮಾಗಳು

  ವಿಜಯ್ ಸೂರ್ಯ ಸಿನಿಮಾಗಳು

  'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿಕೊಂಡ ನಟ ವಿಜಯ್ ಸೂರ್ಯ, 'ಕ್ರೇಜಿಲೋಕ', 'ಇಷ್ಟಕಾಮ್ಯ', 'ಸ', ಕದ್ದುಮುಚ್ಚಿ ಎಂಬ ಚಿತ್ರಗಳಲ್ಲಿ ನಟಿಸಿದರು. ಸದ್ಯ ಲಕ್ನೌ ಟು ಮುಂಬೈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಬಿಡುಗಡೆ ಸಜ್ಜಾಗಿದೆ.

  English summary
  Kannada actor Vijay Surya and chaitra welcomed baby boy on january 1st. but, they announced this news today in officially.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X