ಪವಾಡ ಆಗಲಿ, ಆ ದೇವರು ವಿಜಿನಾ ನಮಗೆ ಕೊಟ್ಬಿಡ್ಲಿ: ವಿಜಯಲಕ್ಷ್ಮಿ ಭಾವುಕ
ಸಂಚಾರಿ ವಿಜಯ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ವಿಜಯಲಕ್ಷ್ಮಿ 'ಪವಾಡ ಏನಾದರೂ ಆಗಲಿ, ಉಳಿಸಿಕೊಳ್ಳಲು ಸಾಧ್ಯವಾದರೆ ದಯವಿಟ್ಟು ನಮ್ಮ ವಿಜಿ ಬ್ರೋನ ವಾಪಸ್ ಕೊಟ್ಬಿಡು ದೇವರೇ' ಎಂದು ಕೇಳಿಕೊಂಡಿದ್ದಾರೆ.
Recommended Video
ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ವಿಜಯಲಕ್ಷ್ಮಿ 'ಕಳೆದ ವರ್ಷ ನಾನು ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿ ಸಂಚಾರಿ ವಿಜಯ್ ಮತ್ತು ಕಾರುಣ್ಯ ರಾಮ್ ನನ್ನ ಯೋಗಕ್ಷೇಮ ವಿಚಾರಿಸಿದವರಲ್ಲಿ ಮೊದಲಿಗರು. ತುಂಬಾ ಪ್ರೀತಿಯಿಂದ, ತುಂಬಾ ಆತ್ಮೀಯತೆಯಿಂದ ನನ್ನ ಭೇಟಿ ಮಾಡಿದರು. ವಿಜಯ್ ಭೇಟಿ ಬಳಿಕ ನನಗೊಬ್ಬ ಸಹೋದರ ಸಿಕ್ಕಿದ್ದರು. ವಿಜಯ್ ಬ್ರೋ ಎಂದು ಕರೆಯುತ್ತಿದ್ದೆ. ಈ ಸುದ್ದಿ ಕೇಳಿದಾಗನಿಂದಲೂ ಇದು ನಿಜ ಆಗಿರಬಾರದು ಅನಿಸುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ವಿಜಿಗೆ ಹೀಗಾಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಿ ಬ್ರೋ ನಮ್ಮನ್ನು ಬಿಟ್ಟು ಹೋಗ್ಬೇಕು ಅಂತ ಏಕೆ ಅನಿಸಿತು. ಬಹಳ ಶೋಕದಲ್ಲಿದ್ದೇವೆ. ಪ್ರತಿಭಾನ್ವಿತ ನಟ ಜೊತೆಗೆ ಒಳ್ಳೆಯ ಮನುಷ್ಯ. ಕಲಾವಿದರು ಈ ರೀತಿ ದುರಂತ ಎದುರಿಸುವುದು ಬಹಳ ನೋವು ಉಂಟು ಮಾಡುತ್ತಿದೆ' ಎಂದು ಭಾವುಕರಾದರು.

'ದಯವಿಟ್ಟು ವಿಜಿ ಅವರಿಗೆ ಏನಾದರು ಪವಾಡ ಆಗಬಾರದೇ? ದೇವರೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ವಿಜಿನಾ ಕೊಟ್ಬಿಡು. ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಈ ಸುದ್ದಿ ನೋಡಲು ಸಹ ಸಾಧ್ಯವಾಗ್ತಿಲ್ಲ' ಎಂದು ನಟಿ ವಿಜಯಲಕ್ಷ್ಮಿ ವಿನಂತಿಸಿದರು.
ಅಂದ್ಹಾಗೆ, ವಿಜಯಲಕ್ಷ್ಮಿ ಇತ್ತೀಚಿಗಷ್ಟೆ ತಮ್ಮ ಸಹೋದರಿಗೆ ಸಹಾಯ ಕೋರಿ ವಿಡಿಯೋ ಮಾಡಿದ್ದರು. ಅದಕ್ಕೂ ಮುಂಚೆ ತಮಗೆ ಆರೋಗ್ಯ ಸರಿಯಿಲ್ಲ ಆರ್ಥಿಕ ಸಹಾಯ ಮಾಡಿದ್ದರು ಎಂದು ಅಂಗಲಾಚಿದ್ದರು. ಆ ಸಮಯದಲ್ಲಿ ಸಂಚಾರಿ ವಿಜಯ್, ಕಾರುಣ್ಯ ರಾಮ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.


Click it and Unblock the Notifications











