Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- News
Karnataka Budget 2021 Live Updates; ಬಜೆಟ್ ಮಂಡಿಸಲಿದ್ದಾರೆ ಯಡಿಯೂರಪ್ಪ
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಮಾಣ ಮಾಡಿ ಹೇಳುತ್ತೇನೆ ಆಡಿಯೋ ಕ್ಲಿಪ್ ಲೀಕ್ ಮಾಡಿದ್ದು ನಾನಲ್ಲ: ನಿರ್ಮಾಪಕ ವಿಖ್ಯಾತ್ ಪ್ರತಿಕ್ರಿಯೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮತ್ತು ನವರಸನಾಯಕ ಜಗ್ಗೇಶ್ ನಡುವಿನ ವಾಗ್ವಾದ ತಾರಕಕ್ಕೇರಿದೆ. ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರ ವಿರುದ್ಧ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಘಟನೆ ನಂತರ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆಲ್ಲ ಕಾರಣವಾಗಿದ್ದು ಒಂದು ಆಡಿಯೋ ಕ್ಲಿಪ್. ಹೌದು, ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾ ನಿರ್ಮಾಪಕ ವಿಖ್ಯಾತ್ ಜೊತೆ ಜಗ್ಗೇಶ್ ಮಾತಾಡಿರುವ ಆಡಿಯೋ ಲೀಕ್ ಆಗಿದ್ದೇ ಈ ವಿವಾದಕ್ಕೆ ಕಾರಣವಾಗಿದೆ. ಈ ಆಡಿಯೋದಲ್ಲಿ ಜಗ್ಗೇಶ್, ದರ್ಶನ್ ಬಗ್ಗೆ ಅವಹೇಳಕಾರಿ ಪದ ಬಳಸಿದ್ದಾರೆ ಎನ್ನುವುದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ವಿವಾದ ದೊಡ್ಡ ಮಟ್ಟದಲ್ಲಿ ಹೊತ್ತಿ ಉರಿಯುತ್ತಿದ್ದರೂ ಮೌನವಾಗಿದ್ದ ನಿರ್ಮಾಪಕ ವಿಖ್ಯಾತ್ ಈಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರೆಸ್ ನೋಟ್ ರಿಲೀಸ್ ಮಾಡಿರುವ ವಿಖ್ಯಾತ್, ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಆದರೆ ಆಡಿಯೋವನ್ನು ತಾನು ಲೀಕ್ ಮಾಡಿಲ್ಲ ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್ ಲೀಕ್ ಮಾಡಿದ್ದು ನಾನಲ್ಲ
'ದಿನಾಂಕ 9.2.2021ರಂದು ಜಗ್ಗೇಶ್ ರವರು 8.30ರ ಸುಮಾರಿಗೆ ನನಗೆ ಫೋನ್ ಕಾಲ್ ಮಾಡಿ ಮಾತನಾಡುತ್ತಾರೆ. ಆ ಪೋನ್ ಕಾಲ್ ಈಗ ಎಲ್ಲಡೆ ವೈರಲ್ ಆಗಿದ್ದು, ಆಡಿಯೋ ಕ್ಲಿಪ್ ನಲ್ಲಿರುವ ಧ್ವನಿ ಆ ಕಡೆ ಜಗ್ಗೇಶ್ ರವರದ್ದಾಗಿದ್ದು, ಈ ಕಡೆಯ ಧ್ವನಿ ನನ್ನದಾಗಿರುತ್ತದೆ. ಆ ಫೋನ್ ಕಾಲ್ ಅನ್ನು ನಾನು ರೇಕಾರ್ಡ್ ಮಾಡಿದ್ದಾಗಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾಗಲಿ ಮಾಡಿರುವುದಿಲ್ಲ ಎಂದು ಆ ದೇವರ ಮೇಲೆ ಪ್ರಮಾಣಿಕರಿಸುತ್ತೇನೆ.

ಈ ಬಗ್ಗೆ ಸಂಪೂರ್ಣ ತನಿಖೆ ಆಗಲಿ
'ಈ ಆಡಿಯೋ ಕ್ಲಿಪ್ ಹೇಗೆ ಹಂಚಿಕೆಯಾಯಿತು ಮತ್ತು ಯಾರಿಂದ ಆಯಿತು ಎನ್ನುವುದರ ಬಗ್ಗೆ ಪರಿಪೂರ್ಣ ಮಟ್ಟದ ತನಿಖೆ ಆಗಲಿ, ನನ್ನ ಸಂಪೂರ್ಣ ಸಹಕಾರವಿದೆ'

ಜಗ್ಗೇಶ್ ಅವರ ಮಾತುಗಳಿಗೆ ಅವರೇ ಜವಾಬ್ದಾರರು
'ಆಡಿಯೋ ಕ್ಲಿಪ್ ನಲ್ಲಿ ನಾನು ಮಾತನಾಡಿರುವುದರ ಬಗ್ಗೆ ನನಗೆ ತಿಳುವಳಿಕೆ ಇದೆ. ಜಗ್ಗೇಶ್ ಅವರ ಮಾತುಗಳಿಗೆ ಅವರೇ ಜವಾಬ್ದಾರರು. ಜಗ್ಗೇಶ್ ಅವರು ಟ್ವಿಟ್ಟರ್ ಮೂಲಕ ಸೂಚ್ಯವಾಗಿ ಆಪಾದಿಸಿದ್ದಂತೆ, ಈ ಆಡಿಯೋ ಕ್ಲಿಪ್ ಅನ್ನು, ನನ್ನ ಚಿತ್ರದ ಪ್ರಚಾರಕ್ಕಾಗಿ ಬಳಸಿದ್ದೇನೆ ಎಂಬ ಹೇಳಿಕೆಯನ್ನು, ನಾನು ಸ್ಪಷ್ಟವಾಗಿ ಈ ಪತ್ರದ ಮೂಲಕ ಅಲ್ಲಗಳೆಯುತ್ತೇನೆ'ಎಂದಿದ್ದಾರೆ.

ವಿಖ್ಯಾತ್ ನಿರ್ಮಾಣದ ರಂಗನಾಯಕ ಸಿನಿಮಾದಲ್ಲಿ ಜಗ್ಗೇಶ್ ನಾಯಕ
'ನವರಸ ನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ರಂಗನಾಯಕ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯ ಮುಗಿದಿದ್ದು, ಶೂಟಿಂಗ್ ಆರಂಭಿಸುವ ಪ್ರಕ್ರಿಯೆಯಲ್ಲಿ ಇದ್ದೇನೆ. ತಮ್ಮೆಲ್ಲರ ಬೆಂಬಲವಿರಲಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನನ್ನ ನಿರ್ಮಾಣದ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಮ್ಮ ಕರೆಗೆ ಓಗೊಟ್ಟು ಬಂದು ನಟಿಸಿ ಸಹಕರಿಸಿದ್ದಾರೆ. ಅವರ ಮತ್ತ ಅವರ ಅಭಿಮಾನಿಗಳ ಬಗ್ಗೆ ಯಾವತ್ತಿಗೂ ಗೌರವವಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿಯ ಆಡಿಯೋ ಕ್ಲಿಪ್ ಬಹಿರಂಗ ಗೊಳಿಸುವ ಚೀಪ್ ಪ್ರಚಾರ ತಂತ್ರಗಳನ್ನು ಬಳಸುವ ಹುನ್ನಾರ ನಾನು ಮಾಡಿಲ್ಲವೆಂದು ಪ್ರಮಾಣಿಕರಿಸುತ್ತೇನೆ' ಎಂದು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.