For Quick Alerts
  ALLOW NOTIFICATIONS  
  For Daily Alerts

  ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ತಮಿಳು ನಟ ವಿಕ್ರಮ್ ಪುತ್ರ: 3 ಆಟೋ ಜಖಂ

  By Harshitha
  |

  ತಮಿಳಿನ ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ್ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಚೆನ್ನೈನಲ್ಲಿ ಇಂದು ಮುಂಜಾನೆ ನಡೆದಿದೆ.

  ಇಂದು ಬೆಳ್ಳಂಬೆಳಗ್ಗೆ ಸ್ನೇಹಿತರ ಜೊತೆಗೆ ಧ್ರುವ್ ಕಾರಲ್ಲಿ ಪ್ರಯಾಣಿಸುತ್ತಿದ್ದರು. ಚೆನ್ನೈನ ತೇನಂಪೇಟೆಯ ರಸ್ತೆ ಬದಿ ಮೂರು ಆಟೋಗಳು ನಿಂತಿದ್ದವು. ಸಿಕ್ಕಾಪಟ್ಟೆ ಸ್ಪೀಡ್ ಆಗಿ ಡ್ರೈವ್ ಮಾಡುತ್ತಿದ್ದ ಧ್ರುವ್, ನಿಂತಿದ್ದ ಮೂರು ಆಟೋಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಮೂರು ಆಟೋಗಳು ಸಂಪೂರ್ಣ ಜಖಂ ಆಗಿದ್ದು, ಓರ್ವ ಗಾಯಗೊಂಡಿದ್ದಾನೆ.

  ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ

  ಅಪಘಾತ ಸಂಭವಿಸಿದ ಕೂಡಲೆ, ಪಾಂಡಿ ಬಝಾರ್ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಳಿಕ ಆದ್ಯಾರ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. Rash ಡ್ರೈವಿಂಗ್ ಮಾಡಿದ ಧ್ರುವ್ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 337 ರ ಅಡಿಯಲ್ಲಿ ಕೇಸ್ ಫೈಲ್ ಮಾಡಲಾಗಿದೆ.

  ಇದು ಡ್ರಂಕ್ ಅಂಡ್ ಡ್ರೈವ್ (ಮದ್ಯಪಾನ ಮಾಡಿ ಚಾಲನೆ) ಕೇಸ್ ಅಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಗಾಯಗೊಂಡ ಕಾಮೇಶ್ ಎಂಬಾತನನ್ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಧ್ರುವ್ ಗೆ ಸದ್ಯ ಜಾಮೀನು ನೀಡಲಾಗಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  English summary
  Tamil Actor Vikram's son Dhruv's car rams into 3 Autos in Chennai today morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X