twitter
    For Quick Alerts
    ALLOW NOTIFICATIONS  
    For Daily Alerts

    ಜಪಾನ್‌ ದೇಶಕ್ಕೆ 'ವಿಕ್ರಾಂತ್ ರೋಣ': ಸಿನಿಮಾ ನೋಡಲು 300 ಕಿ.ಮೀ ಪ್ರಯಾಣಿಸಿದ್ಯಾರು?

    |

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶೀಘ್ರದಲ್ಲೇ ಜಪಾನ್ ದೇಶದಲ್ಲೂ ಸಿನಿಮಾ ರಿಲೀಸ್ ಆಗುವ ಬಗ್ಗೆ ಮಾಹಿತಿ ಸಿಗುತ್ತಿದೆ.

    ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ 'ವಿಕ್ರಾಂತ್ ರೋಣ' ಚಿತ್ರವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಬಹಳ ಹಿಂದೆಯೇ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಸುಳಿವು ಸಿಕ್ಕಿತ್ತು. ಸದ್ಯ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಿಂದಿ ಬೆಲ್ಟ್ ಹಾಗೂ ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಬಾಕ್ಸಾಫೀಸ್‌ನಲ್ಲೂ ಈ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಧೂಳೆಬ್ಬಿಸಿದೆ. ಕೋಟಿ ಕೋಟಿ ರೂಪಾಯಿ ಕೊಳ್ಳೆ ಹೊಡೆದು ಸೌಂಡ್ ಮಾಡ್ತಿದೆ.

    VR vs Pushpa vs KGF 1: ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಆದ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಎಷ್ಟು?VR vs Pushpa vs KGF 1: ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಆದ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    'ವಿಕ್ರಾಂತ್ ರೋಣ' ಸಿನಿಮಾ ಈಗಾಗಲೇ ಹಲವು ದೇಶಗಳಲ್ಲಿ ರಿಲೀಸ್‌ ಆಗಿದೆ. ನಿಧಾನವಾಗಿ 'ವಿಕ್ರಾಂತ್ ರೋಣ' ಚಿತ್ರವನ್ನು ವಿದೇಶಿ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ಶುರುವಾಗುತ್ತಿದೆ. ಅದರಲ್ಲೂ ಜಪಾನಿ ಭಾಷೆಗೆ ಸಿನಿಮಾ ಡಬ್ ಆಗಿ ಆ ದೇಶದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಒಲವು ತೋರಿಸಿದ್ದು, ಶೀಘ್ರದಲ್ಲೇ ಜಪಾನ್ ಪ್ರೇಕ್ಷಕರು ಕಮರೊಟ್ಟಿನ 'ರೋಣ'ನ ಆರ್ಭಟವನ್ನು ಕಣ್ತುಂಬಿಕೊಳ್ಳಬಹುದು. ಇನ್ನು ಜಪಾನಿನ ಕನ್ನಡಿಗರೊಬ್ಬರು 300 ಕಿ.ಮೀ ಪ್ರಯಾಣಿಸಿ ಸಿನಿಮಾ ವೀಕ್ಷಿಸಿದ್ದಾರೆ.

    ಜಪಾನಿ ಭಾಷೆಯಲ್ಲಿ ಸಿನಿಮಾ ರಿಲೀಸ್

    ಅಕುರಿ ಎಂಬ ಜಪಾನಿನ ಸುದೀಪ್ ಅಭಿಮಾನಿಯೊಬ್ಬರು 'ವಿಕ್ರಾಂತ್ ರೋಣ' ಚಿತ್ರವನ್ನು ಜಪಾನ್‌ನಲ್ಲಿ ನೋಡಲು ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್‌ ಅನ್ನು ರೀ-ಟ್ವೀಟ್ ಮಾಡಿ 'ಶೀಘ್ರದಲ್ಲೇ' ಎಂದು ಲವ್ ಸಿಂಬಲ್ ಸಮೇತ ಬರೆದಿದ್ದಾರೆ. ಸುದೀಪ್ ಅಭಿಮಾನಿ ಅಕುರಿ ಕನ್ನಡದಲ್ಲೂ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿದ್ದಾರೆ.

     ಕಿಚ್ಚನಿಗೆ ಜಪಾನ್‌ನಲ್ಲೂ ಅಭಿಮಾನಿ ಬಳಗ

    ಕಿಚ್ಚನಿಗೆ ಜಪಾನ್‌ನಲ್ಲೂ ಅಭಿಮಾನಿ ಬಳಗ

    ಸುದೀಪ್‌ ನಟನೆಯ 'ಈಗ' ಸಿನಿಮಾ ಜಪಾನ್‌ ಭಾಷೆಗೆ ಡಬ್ ಆಗಿ ರಿಲೀಸ್ ಆಗಿತ್ತು. ಕಿಚ್ಚನ ಖಡಕ್ ನಟನೆ ನೋಡಿದವರು ಸುದೀಪ್ ಅಭಿಮಾನಿಗಳಾಗಿದ್ದರು. ಕೆಲ ವರ್ಷಗಳ ಹಿಂದೆ ಜಪಾನಿನ ಮಹಿಳಾ ಅಭಿಮಾನಿಯೊಬ್ಬರು ನೆಚ್ಚಿನ ನಟನನ್ನು ಹುಡುಕಿಕೊಂಡು ಸೀದಾ ಬೆಂಗಳೂರಿನ ಜೆ.ಪಿ ನಗರದ ಮನೆಗೆ ಬಂದಿದ್ದರು. ಇನ್ನು ಕೆಲ ಜಪಾನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಜಪಾನಿ ಭಾಷೆಗೆ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಾ ಅಥವಾ ಕನ್ನಡ ವರ್ಷನ್ ರಿಲೀಸ್ ಆಗುತ್ತಾ ನೋಡಬೇಕು.

    ಸಿನಿಮಾ ನೋಡಲು 300 ಕಿ.ಮೀ ಪ್ರಯಾಣ

    ಜರ್ಮನಿಯಲ್ಲಿ ಕನ್ನಡಿಗರೊಬ್ಬರು 300 ಕಿ.ಮೀ ದೂರ ಪ್ರಯಾಣ ಮಾಡಿ 'ವಿಕ್ರಾಂತ್ ರೋಣ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಪರೀಕ್ಷಿತ್ ಗೌಡ ಎಂಬುವವರು ಜರ್ಮನಿಯ ಸ್ಟಟ್‌ಗರ್ಟ್‌ನಲ್ಲಿ ಸಿನಿಮಾ ನೋಡದ್ದಾಗಿ ಟಿಕೆಟ್ ಫೋಟೊ ಸಮೇತ ಟ್ವೀಟ್ ಮಾಡಿದ್ದಾರೆ. 'ಅದ್ಭುತ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನ, ಸುದೀಪ್ ಆಕ್ಟಿಂಗ್ ಚಿಂದಿ. ಇಂತಹ ಮತ್ತಷ್ಟು ಪ್ರಯೋಗಾತ್ಮಕ ಸಿನಿಮಾಗಳು ಬೇಕು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟ ಸುದೀಪ್ ಸಹ ಪ್ರೀತಿಯ ಚಿಹ್ನೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

    Recommended Video

    Vikranth Rona Day 4 collection|ವಿಕ್ರಾಂತ್ ರೋಣ ಸಿನಿಮಾ ಕಲೆಕ್ಷನ್ ಬಗ್ಗೆ ಈ ಚರ್ಚೆ ಯಾಕೆ? | Filmibeat Kannada
     ವಿಶ್ವದಾದ್ಯಂತ ರೋಣನ ಅಬ್ಬರ

    ವಿಶ್ವದಾದ್ಯಂತ ರೋಣನ ಅಬ್ಬರ

    'ಕೆಜಿಎಫ್‌' ಸರಣಿ ನಂತರ ಅದೇ ರೀತಿಯಲ್ಲಿ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಮತ್ತೊಂದು ಕನ್ನಡ ಸಿನಿಮಾ 'ವಿಕ್ರಾಂತ್ ರೋಣ'. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸುತ್ತಿದ್ದು, ಪರಭಾಷಾ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ರಾಜಮೌಳಿ ಸೇರಿದಂತೆ ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಕೊಂಡಾಡಿದ್ದಾರೆ.

    English summary
    Vikrant Rona Will Soon Get A Theatrical Release In Japan. Know More.
    Wednesday, August 3, 2022, 10:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X