»   » ಅಪ್ಪ-ಅಮ್ಮ-ಪ್ರೀತಿ ಹಿಂದೆ ಬಿದ್ದ ವಿನಯ್ ರಾಜ್ ಕುಮಾರ್

ಅಪ್ಪ-ಅಮ್ಮ-ಪ್ರೀತಿ ಹಿಂದೆ ಬಿದ್ದ ವಿನಯ್ ರಾಜ್ ಕುಮಾರ್

Posted By:
Subscribe to Filmibeat Kannada
ಹೊಸಾ ಸಿನಿಮಾದಲ್ಲಿ ಹೀರೋ ಆಗಿ ಮತ್ತೆ ಬಂದ ವಿನಯ್ ರಾಜ್ ಕುಮಾರ್ | Filmibeat Kannada

ಡಾ ರಾಜ್ ಕುಮಾರ್ ಮೊಮ್ಮಗ ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಅನಂತು ವರ್ಸಸ್ ನುಸ್ರತ್' ಸಿನಿಮಾದಲ್ಲಿ ಲಾಯರ್ ಪಾತ್ರವನ್ನ ನಿರ್ವಹಿಸುತ್ತಿರುವ ವಿನಯ್ ಈ ಬಾರಿ ಪಕ್ಕಾ ಲವ್ ಸ್ಟೋರಿ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಹೊಸ ನಿರ್ದೇಶಕ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ 'ಅಪ್ಪ-ಅಮ್ಮ-ಪ್ರೀತಿ' ಚಿತ್ರದಲ್ಲಿ ರಾಯಲ್ ಸ್ಟಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಟೈಟಲ್ ನೋಡುತ್ತಲೇ ವಿಭಿನ್ನವಾಗಿದೆ ಎನ್ನಿಸುವಂತೆ ಮಾಡಿರುವ ನಿರ್ದೇಶಕರು 'ಇದುವೇ ನನ್ನ ಪ್ರಪಂಚ' ಎಂದು ಟ್ಯಾಗ್ ಲೈನ್ ಇಟ್ಟುಕೊಂಡಿದ್ದಾರೆ. ಈ ಹಿಂದೆ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ್ ಅಪ್ಪ ಅಮ್ಮ ಪ್ರೀತಿ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಾಮಾನ್ಯವಾಗಿ ಮರ ಸುತ್ತುವ ಲವ್ ಸ್ಟೋರಿಗೆ ಬ್ರೇಕ್ ಹಾಕಿ ವಿಭಿನ್ನ ಕಥೆಯಿರುವ ಚಿತ್ರವನ್ನ ಪ್ರೇಕ್ಷಕರ ಮುಂದೆ ತರುವುದು ನಿರ್ದೇಶಕರ ಕನಸು.

Vinay RajKumar is acting in Appa Amma Preethi movie

ಫ್ಯಾಮಿಲಿ ಪವರ್ ನಲ್ಲಿ ದೇಶವೇ ಮೆಚ್ಚುವ ಅಥಿತಿಗಳು

ಇನ್ನು ಸಿನಿಮಾವನ್ನ ಮೂರ್ತಿ ನಿರ್ಮಾಣ ಮಾಡುತ್ತಿದ್ದು 'ರಾಮ ರಾಮ ರೇ' ಖ್ಯಾತಿಯ ಲವಿತ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನೂ ವಿಶೇಷ ಎಂದರೆ ಸಿನಿಮಾದಲ್ಲಿ ಶರತ್ ಕುಮಾರ್ ಹಾಗೂ ರಾಧಿಕಾ ಸಿನಿಮಾದಲ್ಲಿ ತಂದೆ ತಾಯಿಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

Vinay RajKumar is acting in Appa Amma Preethi movie

ಸದ್ಯ ಈ ಮೂರು ಜನರನ್ನ ಆಯ್ಕೆ ಮಾಡಿರುವ ನಿರ್ದೇಶಕರು ನಾಯಕಿಯ ಹುಡುಕಾಟ ಆರಂಭಿಸಿದ್ದಾರೆ. ಇನ್ನೆರೆಡು ದಿನಗಳಲ್ಲಿ ಸಿನಿಮಾದ ಇಡೀ ಚಿತ್ರತಂಡವನ್ನ ಫೈನಲ್ ಮಾಡಿ ಆದಷ್ಟು ಬೇಗ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

English summary
Kannada actor Vinay Raj Kumar is acting as a hero in his upcoming movie Appa Amma Preethi. Sridhar is directing Appa Amma Preethi movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X