»   » ಮುಂಬೈನಲ್ಲಿ 'R The King' ಪ್ರೇಮ್ ಚಿತ್ರತಂಡ

ಮುಂಬೈನಲ್ಲಿ 'R The King' ಪ್ರೇಮ್ ಚಿತ್ರತಂಡ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅವರ ಎರಡನೇ ಪ್ರಕಟವಾಗಿರುವುದು ಗೊತ್ತಿರುವ ಸಂಗತಿ. ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'R The King' ಎಂದು ಹೆಸರಿಡಲಾಗಿದೆ. ಅಣ್ಣಾವ್ರ 87ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಏಪ್ರಿಲ್ 24ರಂದು ಟೈಟಲ್ ಲಾಂಚ್ ಮಾಡಲಾಗಿತ್ತು.

ಇದೀಗ ವಿನಯ್ ಅವರ ಹುಟ್ಟುಹಬ್ಬದ ದಿನ ಎಂದರೆ ಮೇ.7ರಂದು ಚಿತ್ರದ ಟೀಸರನ್ನು ಬಿಡುಗಡೆ ಮಾಡಲು ಪ್ರೇಮ್ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಮುಂಬೈನಲ್ಲಿ ಬೀಡು ಬಿಟ್ಟಿದೆ ಪ್ರೇಮ್ ಅಂಡ್ ಟೀಂ. ಚಿತ್ರದ ಟೀಸರ್ ನಲ್ಲಿ ವಿಶೇಷ ಗ್ರಾಫಿಕ್ಸ್ ಇದ್ದು, ಇದಕ್ಕಾಗಿ ಮುಂಬೈನಲ್ಲಿ ಗ್ರಾಫಿಕ್ಸ್ ವರ್ಕ್ ಮಾಡಿಸುತ್ತಿದ್ದಾರೆ ಪ್ರೇಮ್. [ವಿನಯ್ ರಾಜ್ ಹೊಸ ಚಿತ್ರ 'R The King' ಶುರು]


Vinay Rajkumar

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು "ವಜ್ರೇಶ್ವರಿ ಹಾಸ್ಪಿಟಾಲಿಟೀಸ್" ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.

ತಮ್ಮ ಚೊಚ್ಚಲ 'ಸಿದ್ದಾರ್ಥ' ಚಿತ್ರದ ಮೂಲಕವೇ ಬಹಳಷ್ಟು ನಿರೀಕ್ಷೆ ಮೂಡಿಸಿದವರು ವಿನಯ್, ಇದೀಗ ಅವರ ಎರಡನೇ ಚಿತ್ರ R The King ಸಹ ಅಷ್ಟೇ ನಿರೀಕ್ಷೆಗಳನ್ನು ಗಾಂಧಿನಗರದಲ್ಲಿ ಹುಟ್ಟುಹಾಕಿದೆ. ಜೊತೆಗೆ ಪ್ರೇಮ್ ನಿರ್ದೇಶನ ಇರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.


ರಾಜ್ ಕುಟುಂಬದ ಚಿತ್ರ ಎಂದರೆ ಕೇಳಬೇಕೆ. ಕುಟುಂಬ ಸಮೇತ ನೋಡುವ ಚಿತ್ರಗಳಿಗೆ ಹೆಸರುವಾಸಿ. ಆದರೆ ಚಿತ್ರದ ಟೈಟಲ್ ಸಂಪೂರ್ಣ ಇಂಗ್ಲಿಷ್ ನಲ್ಲಿರುವುದು ಏಕೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್)

English summary
After launching the title of Vinay Rajkumar's movie 'R The King' now director Prem is busy in graphic works in Mumbai. The first teaser of the film to release on 7th of May.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada