For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬ ಆಚರಣೆ 'ನೋ' ಎಂದ ಪ್ರಭಾಕರ್ ಪುತ್ರ, ಕಾರಣ ಏನು?

  |
  ಹುಟ್ಟುಹಬ್ಬ ಆಚರಣೆ 'ನೋ' ಎಂದ ಪ್ರಭಾಕರ್ ಪುತ್ರ, ಕಾರಣ ಏನು? | FILMIBEAT KANNADA

  ನಟ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ ಇಂದು ಇದೆ. ಆದರೆ, ಅವರು ಈ ವರ್ಷದ ತಮ್ಮ ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಕೂಡ ಅಭಿಮಾನಿಗಳ ಜೊತೆಗೆ ಸೇರಿ ಸಂತೋಷ ಪಡುತ್ತಿದ್ದ ಅವರು ಈ ಬಾರಿ ಯಾವುದೇ ಕಾರ್ಯಕ್ರಮ ಮಾಡಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದಾರೆ.

  ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆಗೆ ವಿನೋದ್ ಪ್ರಭಾಕರ್ ನೋ ಎಂದಿದ್ದಾರೆ. ಅಭಿಮಾನಿಗಳಿಗೆ ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡದಂತೆ ಮನವಿ ಮಾಡಿದ್ದಾರೆ.

  ಅಂಬಿ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ 'ಬಿಗ್ ಬಾಸ್' ಸ್ಪರ್ಧಿಗಳು

  ''ಕಳೆದ ಬಾರಿ ಅನೇಕ ಸಂಖ್ಯೆಯ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಬಂದಿದ್ದರು. ಈ ಬಾರಿ ಕೇಕ್, ಹಾರ, ಪಟಾಕಿ ಯಾವುದು ಬೇಡ, ಹುಟ್ಟುಹಬ್ಬ ಆಚರಣೆ ಮಾಡುವ ಮನಸ್ಥಿತಿಯಲ್ಲಿ ನಾನು ಇಲ್ಲ. ವಿಶ್ ಮಾಡಿಬೇಕು ಎನ್ನುವವರು ಕೇಕ್ ಹಾರ ಯಾವುದು ಇಲ್ಲದೆ ಬಂದು ಶುಭಾಶಯ ತಿಳಿಸಿ ಎಂದು ಹೇಳಿದ್ದಾರೆ.

  ಗಂಗಾನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ

  ಈ ರೀತಿ ವಿನೋದ್ ಪ್ರಭಾಕರ್ ಅಗಲಿದ ನಾಯಕನಿಗೆ ತಮ್ಮ ಗೌರವ ಸೂಚಿಸಿದ್ದಾರೆ. ಸದ್ಯ, ವಿನೋದ್ ಪ್ರಭಾಕರ್ 'ರಗಡ್', 'ಫೈಟರ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ .

  English summary
  Kannada actor Vinod Prabhakar is not celebrating his birthday this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X