»   » ತಂದೆಯ ಸಾವಿನ ಕಾರಣ ಬಿಚ್ಚಿಟ್ಟ ವಿನೋದ್ ಪ್ರಭಾಕರ್

ತಂದೆಯ ಸಾವಿನ ಕಾರಣ ಬಿಚ್ಚಿಟ್ಟ ವಿನೋದ್ ಪ್ರಭಾಕರ್

Posted By:
Subscribe to Filmibeat Kannada

ನಟ ವಿನೋದ್ ಪ್ರಭಾಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಮತ್ತೊಮ್ಮೆ ಅವರ ತಂದೆ 'ಟೈಗರ್ ಪ್ರಭಾಕರ್' ವಿಷಯಕ್ಕೆ. ಟೈಗರ್ ಪ್ರಭಾಕರ್ ಹುಟ್ಟುಹಬ್ಬದಂದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಳಲನ್ನ ತೋಡಿಕೊಂಡು, ಕನ್ನಡ ಚಿತ್ರರಂಗದಲ್ಲಿ ತಮ್ಮನ್ನ ತುಳಿಯುತ್ತಿರುವ ಬಗ್ಗೆ ವಿನೋದ್ ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದರು.

''ನಮ್ಮ ತಂದೆ ಕ್ರಿಶ್ಚಿಯನ್ ಆಗಿದ್ದಕ್ಕೆ ಎಷ್ಟೋ ಅವಕಾಶಗಳು ಕೈತಪ್ಪಿದವು. ಕನ್ನಡ ಚಿತ್ರರಂಗದಲ್ಲಿ ಅವರನ್ನ ತುಳಿಯುತ್ತಿದ್ದರು. ತುಳಿತದಿಂದಲೇ ಪ್ರಭಾಕರ್ ಮೇಲೆ ಬಂದವರು'' ಅಂತೆಲ್ಲಾ ಹೇಳಿ ವಿನೋದ್ ಪ್ರಭಾಕರ್ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಹೆಡ್ ಲೈನ್ಸ್ ಮಾಡಿದ್ದರು. [ನಟ ಟೈಗರ್ ಪ್ರಭಾಕರ್ 'ಕ್ರಿಶ್ಚಿಯನ್' ಆಗಿದ್ದೇ ತಪ್ಪಾಯ್ತಾ.?]

ಈಗ ಮತ್ತೆ ತಮ್ಮ ತಂದೆಯ ಕೊನೆಯ ದಿನಗಳ ಬಗ್ಗೆ ಮಾತನಾಡುವ ಮೂಲಕ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ''ನಮ್ಮ ತಂದೆ ಕೊನೆಯುಸಿರೆಳೆದದ್ದು ಜಾಂಡೀಸ್ ಮೂಲಕ. ಗ್ಯಾಂಗ್ರೀನ್ ನಿಂದಲ್ಲ. ಅವರ ಕಾಲನ್ನ ಕಟ್ ಮಾಡಲಾಗಿರಲಿಲ್ಲ. ಅವರಿಗೆ ಮಲ್ಟಿಪಲ್ ಆರ್ಗನ್ ಫೇಲ್ಯೂರ್ ಆಗಿತ್ತು'' ಅನ್ನುವ ಸಂಗತಿಯನ್ನ ವಿನೋದ್ ಪ್ರಭಾಕರ್ ಬಯಲು ಮಾಡಿದ್ದಾರೆ. ಮುಂದೆ ಓದಿ....

ಬಹು ಬೇಗ ಇಹಲೋಕ ತ್ಯಜಿಸಿದ ಟೈಗರ್ ಪ್ರಭಾಕರ್

ಕೇವಲ 52ನೇ ವಯಸ್ಸಿಗೆ ಪ್ರಭಾಕರ್ ಇಹಲೋಕ ತ್ಯಜಿಸಲು ಕಾರಣ, ನಿಜ ಜೀವನದಲ್ಲಿ ಅನುಭವಿಸಿದ್ದ ನೋವು ಮತ್ತು ವೃತ್ತಿ ಬದುಕಲ್ಲಿ ಆದ ಏರುಪೇರು. ಬಹುಶಃ ವೈವಾಹಿಕ ಜೀವನದಲ್ಲಿ ದಣಿಯದಿದ್ದರೆ 'ಟೈಗರ್' ಇನ್ನಷ್ಟು ವರ್ಷ ಗರ್ಜಿಸುತ್ತಿದ್ದರೇನೋ.

ಕಡೆಗಾಲದಲ್ಲಿ ಕಾಡಿತ್ತು ಅನಾರೋಗ್ಯ

ದಾಂಪತ್ಯ ಜೀವನದಲ್ಲಾದ ಕಹಿ ಘಟನೆಗಳಿಂದ ಸಾಕಷ್ಟು ನೊಂದಿದ್ದ ಟೈಗರ್ ಪ್ರಭಾಕರ್ ಅವರ ಕೊನೆಗಾಲ ಘೋರಾತಿ ಘೋರ. ಅವಕಾಶ ಕಡಿಮೆ ಆಗುತ್ತಿದ್ದಂತೆ, ಸ್ವಂತ ನಿರ್ಮಾಣ ಸಂಸ್ಥೆ ಶುರುಮಾಡಿದ ಪ್ರಭಾಕರ್, ಕೆಲವು ಹಿಟ್ ಸಿನಿಮಾಗಳನ್ನ ನೀಡಿದ್ರು. ಜೀವನ ಸರಿಹೋಯ್ತು ಅನ್ನುವಷ್ಟರಲ್ಲಿ ಅವರಿಗೆ ಕಾಡಿದ್ದು ಅನಾರೋಗ್ಯ.

ಗ್ಯಾಂಗ್ರೀನ್ ನಿಂದ ಕೊಳೆತಿತ್ತಾ ಕಾಲು?

ಟೈಗರ್ ಪ್ರಭಾಕರ್ ಕೊನೆಯ ದಿನಗಳ ಬಗ್ಗೆ ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಾರೆ. ಕೆಲವರು ಗ್ಯಾಂಗ್ರೀನ್ ನಿಂದ ಕಾಲು ಕೊಳೆತು ಹೋಗಿತ್ತು ಅನ್ನುತ್ತಾರೆ. ಇಡೀ ಕಾಲನ್ನೇ ಹುಳ ತಿಂದಿದ್ದರಿಂದ ಮಾಂಸ ಕಟ್ಟಲಾಗಿತ್ತು ಅನ್ನುವವರು ಕೂಡ ಇದ್ದಾರೆ.

ವಾಸ್ತವ ಏನು?

ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಹೇಳುವ ಪ್ರಕಾರ, ಪತ್ರಿಕೆಯವರಿಗೂ ಮತ್ತು ಪ್ರಭಾಕರ್ ಅವರಿಗೂ ಮನಸ್ತಾಪ ಇತ್ತು. ಕಡೆಗಾಲದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವಾಗ, ಪ್ರಭಾಕರ್ ಕಾಲು ಕಟ್ ಆಗಿದೆ ಅಂತ ಪೇಪರ್ ಒಂದರಲ್ಲಿ ಸುದ್ದಿಯಾಗಿತ್ತು. ಇದನ್ನೇ ಜನ ನಂಬಿದರು. ಆದ್ರೆ, ಅವರ ಕಾಲು ಕಟ್ ಆಗಿರ್ಲಿಲ್ಲ. ಚೆನ್ನಾಗಿತ್ತು. ಅದೆಲ್ಲಾ ಸುಳ್ಳು ಸುದ್ದಿ ಅನ್ನುತ್ತಾರೆ. [ಹುಲಿ ಮರಿ ವಿನೋದ್ ಪ್ರಭಾಕರ್ ಸಂದರ್ಶನ!]

22 ದಿನ ಆಸ್ಪತ್ರೆಯಲ್ಲಿದ್ದರು..!

ಕಡೆಗಾಲದಲ್ಲಿ ತೀರಾ ನೊಂದಿದ್ದ ಪ್ರಭಾಕರ್, ಅನಾರೋಗ್ಯದ ಕಾರಣ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ 22 ದಿನ ಚಿಕಿತ್ಸೆ ಪಡೆದರೂ, ಚೇತರಿಸಿಕೊಳ್ಳಲಿಲ್ಲ. ಜಾಂಡೀಸ್ ಅಟ್ಯಾಕ್ ಆಗಿ ಮಲ್ಟಿಪಲ್ ಆರ್ಗನ್ ಫೇಲ್ಯೂರ್ ಆದ್ರಿಂದ ಮಾರ್ಚ್ 25, 2001 ರಂದು ಕೊನೆಯುಸಿರೆಳೆದರು.

ವಿನೋದ್ ಪ್ರಭಾಕರ್ ಬಯಲು ಮಾಡಿದ ಸತ್ಯ

''ನನ್ನ ತಂದೆಗೆ ಗ್ಯಾಂಗ್ರೀನ್ ಇರ್ಲಿಲ್ಲ. ಅವರ ಕಾಲು ಕಟ್ ಆಗಿರ್ಲಿಲ್ಲ. ಈ ಸುದ್ದಿಯನ್ನ ಕೇಳಿ ಅವರು ತುಂಬಾ ಅಪ್ ಸೆಟ್ ಆಗಿದ್ದರು. ಅವರ ಅಭಿಮಾನಿಗಳು ಇದನ್ನೆಲ್ಲಾ ಕೇಳುತ್ತಿದ್ದಾಗ, ಮಗುವಿನಂತೆ ಅಳುತ್ತಿದ್ದರು. ಅವರು ತೀರಿಕೊಂಡಿದ್ದು ಜಾಂಡೀಸ್ ಮತ್ತು ಮಲ್ಟಿಪಲ್ ಆರ್ಗನ್ ಫೇಲ್ಯೂರ್ ನಿಂದ'' ಅಂತ 'ಟೈಸನ್' ಸಿನಿಮಾದ ಟೈಟಲ್ ಲಾಂಚ್ ವೇಳೆ ಪತ್ರಿಕಾಗೋಷ್ಠಿಯಲ್ಲಿ ವಿನೋದ್ ಪ್ರಭಾಕರ್ ಹೇಳಿದರು. [ಮರಿ ಹುಲಿ 'ಟೈಸನ್' S/O ಟೈಗರ್ ಟೀಸರ್ ನೋಡಿ...]

ಹಳೆ ಹೇಳಿಕೆಗೆ ಸ್ಪಷ್ಟನೆ

''ನನ್ನ ತಂದೆ ಕ್ರಿಶ್ಚಿಯನ್ ಆಗಿರುವುದಕ್ಕೆ ಅವಕಾಶ ಸಿಗ್ಲಿಲ್ಲ ಅಂತ ನಾನು ಹೇಳ್ಲಿಲ್ಲ. ಕ್ರಿಶ್ಚಿಯನ್ ಆಗಿದ್ದಕ್ಕೆ ಕೊನೆ ದಿನಗಳಲ್ಲಿ ಅವರ ಚಿತ್ರಗಳಿಗಾದ ತೊಂದರೆಯನ್ನ ಅಪ್ಪ ನನಗೆ ಹೇಳಿದ್ದರು ಅಂತ ನಾನು ಹೇಳಿದಷ್ಟೆ. ಹಾಗೇ, ನನ್ನ ಚಿತ್ರಗಳಿಗೂ ಸಮಸ್ಯೆ ಆಗುತ್ತಿರುವುದಕ್ಕೆ ನಾನು ಕ್ರಿಶ್ಚಿಯನ್ ಆಗಿರುವುದು ಕಾರಣ ಅಂತ ನಾನು ಹೇಳಿಲ್ಲ'' ಅಂತ ವಿನೋದ್ ಪ್ರಭಾಕರ್ ಇದೇ ಸುದ್ದಿಗೋಷ್ಢಿಯಲ್ಲಿ ಸ್ಪಷ್ಟಪಡಿಸಿದರು.

English summary
Kannada Actor Vinod Prabhakar is in news again by revealing the truth behind Tiger Prabhakar's death. During the title launch of his upcoming movie 'Tyson', Vinod Prabhakar has clarified that this father died due to Jaundice and not Gangrene.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada