»   » 'ಟೈಸನ್' ಆದ ಮರಿ ಟೈಗರ್ ವಿನೋದ್ ಪ್ರಭಾಕರ್

'ಟೈಸನ್' ಆದ ಮರಿ ಟೈಗರ್ ವಿನೋದ್ ಪ್ರಭಾಕರ್

Posted By:
Subscribe to Filmibeat Kannada

''ಕನ್ನಡ ಚಿತ್ರರಂಗದಲ್ಲಿ ನನ್ನ ತಂದೆಯನ್ನ ತುಳಿದ ಹಾಗೆ, ನನ್ನನ್ನೂ ತುಳಿಯುತ್ತಿದ್ದಾರೆ'' ಅಂತ್ಹೇಳಿ ವಿವಾದ ಸೃಷ್ಟಿಸಿದ್ದ ನಟ 'ಟೈಗರ್' ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಈಗ ಮತ್ತೆ ಸುದ್ಧಿಯಲ್ಲಿದ್ದಾರೆ. ಅದು ಒಳ್ಳೆ ವಿಷಯಕ್ಕೆ.

ವಿನೋದ್ ಪ್ರಭಾಕರ್ ಹೊಸ ಸಿನಿಮಾ ಮಾಡ್ತಿದ್ದಾರೆ. ಹೆಸರು 'ಟೈಸನ್' ಅಂತ. ಟೈಟಲ್ ಕೇಳ್ತಿದ್ದ ಹಾಗೆ, ನಿಮಗೆ ಖ್ಯಾತ ಬಾಕ್ಸರ್ ಮೈಕ್ ಟೈಸನ್ ನೆನಪಾಗಬಹುದು. ಆದ್ರೆ, ಇದು ಟೈಸನ್ ಬದುಕಿನ ಕಹಾನಿ ಅಲ್ಲ. ಕಾಲ್ಪನಿಕ ಆಕ್ಷನ್ ಸ್ಟೋರಿ ಅಷ್ಟೆ. [ನಟ ಟೈಗರ್ ಪ್ರಭಾಕರ್ 'ಕ್ರಿಶ್ಚಿಯನ್' ಆಗಿದ್ದೇ ತಪ್ಪಾಯ್ತಾ.?]

vinod prabhakar

ಈ ಹಿಂದೆ 'ಸ್ನೇಹಿತರು', 'ಪೈಪೋಟಿ' ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ರಾಮ್ ನಾರಾಯಣ್, 'ಟೈಸನ್' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿರುವ ವಿನೋದ್ ಪ್ರಭಾಕರ್, 'ಟೈಸನ್' ಚಿತ್ರದಲ್ಲಿ ಭರ್ಜರಿ ಆಕ್ಷನ್ ಮಾಡಲಿದ್ದಾರೆ.

'ನಮೋ ಭೂತಾತ್ಮ' ಚಿತ್ರದಲ್ಲಿ ಕೋಮಲ್ ಜೊತೆಯಾಗಿದ್ದ ಗಾಯತ್ರಿ ಐಯ್ಯರ್, 'ಟೈಸನ್' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಗೆ ಸಾಥ್ ನೀಡಲಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, 'ಟೈಸನ್' ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು ಹಾಡುಗಳನ್ನ ಸಂಯೋಜಿಸಲಿದ್ದಾರೆ.

ವಿ.ಹರಿಕೃಷ್ಣ, ಜೆಸ್ಸಿ ಗಿಫ್ಟ್ ಮತ್ತು ಗಣೇಶ್ ನಾರಾಯಣ್ ಸಂಗೀತ ನೀಡಲಿದ್ದಾರೆ. ಇತ್ತೀಚೆಗಷ್ಟೆ ಫೋಟೋಶೂಟ್ ಮುಗಿಸಿರುವ 'ಟೈಸನ್' ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. (ಏಜೆನ್ಸೀಸ್)

English summary
Kannada Actor Vinod Prabhakar is back with a new film titled 'Tyson'. The film is touted as a heavy weight action film directed by Ramnarayan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada