India
  For Quick Alerts
  ALLOW NOTIFICATIONS  
  For Daily Alerts

  ಪ್ರಭಾಕರ್ ನೆನಪಿನಲ್ಲಿ 'ಟೈಗರ್ ಟಾಕೀಸ್' ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್ ಪ್ರಭಾಕರ್

  |

  ತಂದೆ ಟೈಗರ್ ಪ್ರಭಾಕರ್ ಹಾದಿಯಲ್ಲೇ ಸಾಗಿ ಬಂದ ವಿನೋದ್ ಪ್ರಭಾಕರ್ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದ್ದ 'ರಾಬರ್ಟ್' ಸಿನಿಮಾ ವಿನೋದ್ ಪ್ರಭಾಕರ್ ಇಮೇಜ್ ಅನ್ನೇ ಬದಲಿಸಿತ್ತು. ಇದರೊಂದಿಗೆ ತಂದೆ ಟೈಗರ್ ಪ್ರಭಾಕರ್ ನೆನಪಿನಲ್ಲಿ ಟೈಗರ್ ಟಾಕೀಸ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಮೊದಲ ಸಿನಿಮಾಗೆ ಚಾಲನೆ ಕೂಡ ನೀಡಲಾಗಿದೆ.

  ವಿನೋದ್ ಪ್ರಭಾಕರ್ ಮಾಸ್ ಲುಕ್, ಆಕ್ಷನ್ ದೃಶ್ಯಗಳನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಸಿನಿಮಾದೊಳಗಿನ ಪಾತ್ರಕ್ಕಾಗಿ ವಿನೋದ್ ಪ್ರಭಾಕರ್ ತನ್ನ ದೇಹದ ಮೇಲೆ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ನಿರ್ಮಾಣ ಸಂಸ್ಥೆ ಆರಂಭ ಮಾಡುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

  ನಿರ್ಮಾಪಕರಾದ ಟೈಗರ್ ಪುತ್ರ ವಿನೋದ್ ಪ್ರಭಾಕರ್

  ವಿನೋದ್ ಪ್ರಭಾಕರ್ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕಿಸ್ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದು,‌ 'ಲಂಕಾಸುರ' ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಹೆಸರಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು, ವಿನೋದ್ ಪ್ರಭಾಕರ್ ಅಭಿಮಾನಿಗಳು ಫಿದಾ ಆಗಿದ್ದಾರೆ.

  ತಂದೆ ಟೈಗರ್ ಪ್ರಭಾಕರ್ ಹೆಸರಲ್ಲಿ ನಿರ್ಮಾಣ ಸಂಸ್ಥೆ

  ವಿನೋದ್ ಪ್ರಭಾಕರ್ ತಮ್ಮ ನಿರ್ಮಾಣ ಸಂಸ್ಥೆಗೆ 'ಟೈಗರ್ ಟಾಕಿಸ್' ಎಂದು ಹೆಸರಿಡಲು ಕಾರಣ ಅವರ ತಂದೆ ಟೈಗರ್ ಪ್ರಭಾಕರ್. ಇವರ ನೆನಪಿನಲ್ಲಿಯೇ ವಿನೋದ್ ಪ್ರಭಾಕರ್ ಟೈಗರ್ ಟಾಕಿಸ್ ಆರಂಭ ಮಾಡಿದ್ದು, ಹೊಸ ಹೆಜ್ಜೆ ಇಟ್ಟಿದ್ದಾರೆ. ಲಂಕಾಸುರ ಸಿನಿಮಾ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿದ್ದಾರೆ. ವಿಶೇಷ ಅದರೆ, ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಯೋಗಿ ಹಾಗೂ ವಿನೋದ್ ಪ್ರಭಾಕರ್ ಒಟ್ಟಾಗಿ ನಟಿಸುತ್ತಿರುವ ಮೊದಲ ಸಿನಿಮಾ.

  Vinod Prabhakar Started Own Production House Lankasura Is His First Movie

  'ಲಂಕಾಸುರ' ಸಿನಿಮಾದಲ್ಲಿ ಹಿರಿಯ ನಟ ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. 'ರಾಬರ್ಟ್' ಸಿನಿಮಾದಲ್ಲಿ ಸ್ಮಾರ್ಟ್ ಆಗಿ ಕಂಡಿದ್ದ ಆಕ್ಷನ್ ಹೀರೋ, ಲಂಕಾಸುರ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭ ಆಗಿದ್ದು, ಪ್ರಮೋದ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಹಾಗೂ ವಿಜೇತ್ ಕೃಷ್ಣ ಸಂಗೀತ ಹಾಗೂ ಸುಜ್ಞಾನ್ ಛಾಯಾಗ್ರಾಹಕರಾಗಿದ್ದಾರೆ.

  ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ ಹೊಸ ಸಿನಿಮಾ 'ವರದ' ರಿಲೀಸ್‌ಗೆ ಸಜ್ಜಾಗುತ್ತಿದೆ. ಗಣೇಶ್ ನಟಿಸಿದ 'ಆಟೋ ರಾಜ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಉದಯ್ ಪ್ರಕಾಶ್ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಇದೇ ಜನವರಿ 28ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದರು. ಆದರೆ, ವೀಕೆಂಡ್ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದಾಗಿ ಸಿನಿಮಾ ಮುಂದೂಡುವ ಸಾಧ್ಯಗಳಿವೆ. 'ವರದ' ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ.

  English summary
  Vinod Prabhakar started own production house Lankasura is his first movie. Vinod Prabhakar has started in the name production house in the name of Tiger talkies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X