»   » ಫಲ ಕೊಡುವ ವೃಕ್ಷದ ಪರಿಕಲ್ಪನೆಯಲ್ಲಿ ಡಾ ವಿಷ್ಣುವರ್ಧನ್ ನಿಮ್ಮ ಮುಂದೆ

ಫಲ ಕೊಡುವ ವೃಕ್ಷದ ಪರಿಕಲ್ಪನೆಯಲ್ಲಿ ಡಾ ವಿಷ್ಣುವರ್ಧನ್ ನಿಮ್ಮ ಮುಂದೆ

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಸಾಹಸ ಸಿಂಹನಾಗಿ ಮೆರೆದವರು. ಕನ್ನಡ ಸಿನಿಮಾರಂಗಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದ ವಿಷ್ಣುವರ್ಧನ್ ಹೆಸರಲ್ಲಿ ಈ ವರ್ಷವೂ ಕ್ಯಾಲೆಂಡರ್ ಹೊರ ಬರ್ತಿದೆ. ಕಳೆದ ಐದು ವರ್ಷಗಳಿಂದ ಡಾ.ವಿಷ್ಣು ಸೇನಾ ಸಮಿತಿ ಅಭಿಮಾನಿಗಳಿಗಾಗಿ ಕ್ಯಾಲೆಂಡರ್ ರಿಲೀಸ್ ಮಾಡುತ್ತಾ ಬರುತ್ತಿದ್ದಾರೆ.

ಡಾ.ವಿಷ್ಣು ಸೇನಾ ಸಮಿತಿಯಿಂದ ಈ ವರ್ಷ ಬರುತ್ತಿರುವ ಕ್ಯಾಲೆಂಡರ್ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಫಲ ಕೊಡುವ ವೃಕ್ಷದ ಪರಿಕಲ್ಪನೆಯಲ್ಲಿ ವಿಷ್ಣುವರ್ಧನ್ ರನ್ನ ಹೋಲಿಕೆ ಮಾಡಿ ಕ್ಯಾಲೆಂಡರ್ ಡಿಸೈನ್ ಮಾಡಿದ್ದಾರೆ.

ಹಲವು ವಿಶೇಷತೆಗಳ ಜೊತೆ ವಿಷ್ಣುವರ್ಧನ್

ಈ ತರಹದ ಪರಿಕಲ್ಪನೆ ಇದೇ ಮೊದಲು. ಡಾ.ವಿಷ್ಣು ಎಂದರೆ ಏನು? ಅವರು ಬಿತ್ತಿದ ಆದರ್ಶಗಳೇನು? ಎಂಬುದನ್ನು ಅತ್ಯಂತ ಕ್ರಿಯಾಶೀಲ ಮತ್ತು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವನ್ನ ಡಾ.ವಿಷ್ಣು ಕ್ಯಾಲೆಂಡರ್ ಮೂಲಕ ಮಾಡಲಾಗಿದೆ.

ಕ್ಯಾಲೆಂಡರ್ ನಲ್ಲಿ ವಿಷ್ಣು ಬಗ್ಗೆ ಮಾಹಿತಿ

ಭರ್ಜರಿ ವಿನ್ಯಾಸದ, ಡಾ.ವಿಷ್ಣು ಅವರ ಅತಿ ಅಪರೂಪದ ಫೋಟೋ ಮತ್ತು ಸಂದರ್ಶನದ ಆಯ್ದ ನುಡಿಗಳು, ಕೆಲವು ಶ್ರೇಷ್ಠ ಅಭಿಮಾನಿಗಳ ವಿವರಗಳು, ಡಾ.ವಿಷ್ಣು ರಾಷ್ಟ್ರೀಯ ಉತ್ಸವದ ಚಿತ್ರ ಸಹಿತ ವಿವರಣೆ ಇಲ್ಲಿ ಸಿಗಲಿದೆ.

ಕ್ಯಾಲೆಂಡರ್ ನಲ್ಲಿದೆ ಹತ್ತು ಹಲವು ವಿಶೇಷ

ಸಾಮಾನ್ಯವಾಗಿ ಕ್ಯಾಲೆಂಡರ್ ಅಂದರೆ 12 ಪುಟಗಳು ಇರುತ್ತವೆ. ಆದರೆ ವಿಷ್ಣು ಕ್ಯಾಲೆಂಡರ್ ನಲ್ಲಿ 14 ಪುಟಗಳಿವೆ. ಅದರ ಸ್ಪೆಷಲ್ ಏನು ಅನ್ನೋದು ಕ್ಯಾಲೆಂಡರ್ ಕೈಗೆ ಬಂದಾಗ ಮಾತ್ರ ತಿಳಿಯುತ್ತೆ ಅನ್ನೋದು ವಿಷ್ಣು ಸೇನಾ ಸಮಿತಿಯವರ ಮಾತು.

ಕ್ಯಾಲೆಂಡರ್ ಫೋಟೋ ಪ್ರೊಫೈಲ್ ಪಿಚ್ಚರ್

ವಿಷ್ಣು ಕ್ಯಾಲೆಂಡರ್ ನ ಫೋಟೋ ಸಖತ್ ವೈರಲ್ ಆಗಿದೆ. ಈಗಾಗಲೇ ಐದು ಸಾವಿರ ಜನರು ತಮ್ಮ ಫೇಸ್ ಬುಕ್ ನಲ್ಲಿ ಫೋಟೋವನ್ನ ಪ್ರೋಫೈಲ್ ಪಿಕ್ ಆಗಿ ಮಾಡಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕ್ಯಾಲೆಂಡರ್ ಲಭ್ಯವಿದ್ದು ಆಯಾ ಜಿಲ್ಲೆಯ ವಿಷ್ಣು ಸೇನಾ ಸಮಿತಿಯವರನ್ನ ಸಂಪರ್ಕಿಸಿ ವಿಭಿನ್ನವಾಗಿರುವ ಕ್ಯಾಲೆಂಡರ್ ಖರೀದಿ ಮಾಡಬಹುದು.

English summary
This time, the special edition of the Annual Calendar has been released by the Vishnu sena samithi for fans of Vishnuvardhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada