For Quick Alerts
  ALLOW NOTIFICATIONS  
  For Daily Alerts

  ಪುತ್ಥಳಿಗಳ ಮೂಲಕ ವಿಷ್ಣುವರ್ಧನ್ ರನ್ನ ಜೀವಂತವಾಗಿರಿಸಿದ ಅಭಿಮಾನಿ

  By Pavithra
  |

  ಕಲಾವಿದನ ದೇಹಕ್ಕೆ ಮಾತ್ರ ಸಾವು ಆತ ಮಾಡಿರುವ ಕೆಲಸಗಳಿಗಲ್ಲ ಎನ್ನುವ ಮಾತಿದೆ. ಅದೇ ರೀತಿಯಲ್ಲಿ ಡಾ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಮೂಲಕ ಹಾಗೂ ಅವರು ಮಾಡಿರುವ ಕೆಲಸಗಳಿಂದ ಅವರ ನೆನಪು ಎಂದೆಂದಿಗೂ ಅಭಿಮಾನಿಗಳು ಮತ್ತು ಜನರ ಮಧ್ಯೆ ಉಳಿದುಕೊಂಡು ಬಿಟ್ಟಿದೆ. ಅಭಿಮಾನಿಗಳ ಅಭಿಮಾನವನ್ನ ಎಂದಿಗೂ ಅಳೆಯಲು ಸಾಧ್ಯವಿಲ್ಲ. ಅದೇ ಕಾರಣದಿಂದ ಅಭಿಮಾನಿಗಳನ್ನ ದೇವರು ಎಂದು ಕರೆದಿದ್ದು.

  ನೆಚ್ಚಿನ ನಟನ ಮೇಲಿನ ಪ್ರೀತಿ ಅಭಿಮಾನವನ್ನ ತೋರಿಸಲು ಸಾಕಷ್ಟು ಹಾದಿಗಳಿವೆ. ಆದರೆ ವಿಷ್ಣುವರ್ಧನ್ ಅವರ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ವಿಷ್ಣು ಅವರ ಪುತ್ಥಳಿಗಳನ್ನ ಸ್ಥಾಪನೆ ಮಾಡುವ ಮೂಲಕ ಮುಂದಿನ ಪೀಳಿಗೆಯ ಮನಸ್ಸಿನಲ್ಲಿಯೂ ವಿಷ್ಣುವರ್ಧನ್ ನೆನಪಿನಲ್ಲಿರುವಂತಹ ಕೆಲಸ ಮಾಡುತ್ತಿದ್ದಾರೆ.

  ಅಂದು-ಇಂದು ಕನ್ನಡಕ್ಕೆ ಒಬ್ಬರೇ ಯಜಮಾನ !

  ಇಲ್ಲಿಯ ತನಕ ವೀರಕಪುತ್ರ ಶ್ರೀನಿವಾಸ್ ಸುಮಾರು 24 ಪುತ್ಥಳಿಯನ್ನ ತಮ್ಮ ಸ್ವಂತ ಖರ್ಚಿನಿಂದ ಸ್ಥಾಪನೆ ಮಾಡಿದ್ದಾರೆ. ಜಯನಗರ, ಜೆಪಿನಗರ, ಹೆಣ್ಣೂರು, ಮೆಜೆಸ್ಟಿಕ್, ಮೈಸೂರು ರಸ್ತೆ, ಕುಂಬಳಗೋಡು, ಪಾವಗಡ, ಮಧುಗಿರಿ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಅಭಿಮಾನಿಗಳಿಗೆ ವಿಷ್ಣು ದರ್ಶನವಾಗುವಂತೆ ಮಾಡಿದ್ದಾರೆ.

  ಸದ್ಯ ವಿಷ್ಣು ದಾದನ 25 ನೇ ಪುತ್ಥಳಿಯನ್ನ ದಾವಣಗೆರೆಯಲ್ಲಿ ಮಾರ್ಚ್ 31 ರಂದು ಅನಾವರಣಗೊಳ್ಳಲಿದೆ. ಕಲಾವಿದ ಶಿವಕುಮಾರ್ ಹಾಗೂ ರಾಜು ಕೈನಲ್ಲಿ ವಿಷ್ಣು ಪುತ್ಥಳಿಗಳು ಕೆತ್ತನೆಯಾಗಿದೆ. ನೆಚ್ಚಿನ ನಟರ ಮೇಲಿನ ಪ್ರೀತಿಯನ್ನ ಒಂದು ಎರಡು ದಿನಗಳಿಗೆ ಮೀಸಲು ಮಾಡದೇ ಸಾಕಷ್ಟು ವರ್ಷಗಳು ನಾವಿಲ್ಲ ಎಂದರೂ ಜನರು ನೆನಪಿಸಿಕೊಳ್ಳುವಂತೆ ಮಾಡುತ್ತಿರುವ ಅಭಿಮಾನಿಯ ಕೆಲಸ ನಿಜಕ್ಕೂ ಮೆಚ್ಚುವಂತದ್ದೆ.

  'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೀರೋ!

  English summary
  Vishnuvardhan Fan Veerakaputra Srinivas founded 25 Kannada film actor Vishnuvardhan statue all over Karnataka from his own expense, The 25th statue will be unveiled at Davangere on March 31.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X