»   » ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್

ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್

Posted By:
Subscribe to Filmibeat Kannada

ಹಾಲಿವುಡ್ ಚಿತ್ರಗಳಲ್ಲಿ ಕಾಮಿಕ್ ಪಾತ್ರಗಳು ಹೊಸದಲ್ಲ. ಅಲ್ಲಿನ ಪ್ರತಿಯೊಬ್ಬ ನಟ, ನಟಿ ಮೇಲೂ ವಿನೋದ ಚಿತ್ರಾವಳಿಗಳಿವೆ. ಇತ್ತೀಚೆಗಷ್ಟೇ ಆ ಸಂಪ್ರದಾಯ ಬಾಲಿವುಡ್ ಗೂ ಲಗ್ಗೆ ಹಾಕಿತು. ಮೊದಲು ಬಂದದ್ದೇ ಸೈಫ್ ಆಲಿಖಾನ್ ಹಾಗೂ ರಾಣಿ ಮುಖರ್ಜಿ ಅವರ 'ಹಮ್ ತುಮ್' ಕಾಮಿಕ್ ಸ್ಟ್ರಿಪ್.

ಈಗ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲೂ ರಂಜಿಸಲು ಕಾಮಿಕ್ ಸ್ಟ್ರಿಪ್ ರೂಪದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಈ ಬಾರಿಯ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ (ಡಿಸೆಂಬರ್ 30) ಅವರ ಅಳಿಯ ಹಾಗೂ ನಟ ಅನಿರುದ್ಧ್ ಅವರು ಈ ಕಾಮಿಕ್ ಸೀರೀಸನ್ನು ಹೊರತರುತ್ತಿದ್ದಾರೆ.

Sahasasimha comic series

ಈ ಮೂಲಕ ಸಪ್ತ ಕೋಟಿ ಕನ್ನಡಿಗರ ಮುಂದೆ 'ಆಪ್ತಮಿತ್ರ' ಮತ್ತೆ ಹುಟ್ಟಿಬರುತ್ತಿದ್ದಾರೆ. ವಿಷ್ಣುವರ್ಧನ್ ಅವರ ಕಾಮಿಕ್ ಸ್ಟ್ರಿಪ್ ಗೆ 'ಡಿಟೆಕ್ಟೀವ್ ಸಾಹಸಸಿಂಹ' ಎಂದು ಹೆಸರಿಡಲಾಗಿದೆ. ತನ್ನ ಮೊಮ್ಮಕ್ಕಳ ಜೊತೆ ಸೇರಿಕೊಂಡು 'ಡಿಟೆಕ್ಟೀವ್ ಸಾಹಸಸಿಂಹ' ಹಲವಾರು ರಹಸ್ಯಗಳನ್ನು ಭೇದಿಸುವುದೇ ಈ ವಿನೋದ ಚಿತ್ರಾವಳಿಯ ವಿಶೇಷ.

ಇನ್ನೂರು ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಅವರನ್ನು ಕಾಮಿಕ್ ರೂಪದಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಇಂದಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಕಾಮಿಕ್ ಸೀರೀಸ್ ಹೊರತರಲಾಗುತ್ತಿದೆ. 'ಡಿಟೆಕ್ಟೀವ್ ಸಾಹಸಸಿಂಹ'ನಿಗೆ ಅವರ ಮೊಮ್ಮೊಕ್ಕಳು ರಹಸ್ಯಗಳನ್ನು ಭೇದಿಸಲು ಸಹಾಯ ಮಾಡುತ್ತಾರೆ.

ಈ ಕಾಮಿಕ್ ಸರಣಿಯ ಬಹುತೇಕ ಕಂತುಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಆಗಿದೆ. ಈ ಮೂಲಕ ಮಕ್ಕಳಿಗೆ ರಂಜನೆ ಜೊತೆಗೆ ಶಿಕ್ಷಣ ನೀಡುವುದೇ ಆಗಿದೆ ಎನ್ನುತ್ತಾರೆ ಅನಿರುದ್ಧ್. ಈ ಕಾಮಿಕ್ ಸರಣಿಯಲ್ಲಿ ಅನಿರುದ್ಧ್ ಮಕ್ಕಳಾದ ಜ್ಯೇಷ್ಠ ಹಾಗೂ ಶ್ಲೋಕಾ ಸಹ ಭಾಗಿಯಾಗಲಿದ್ದಾರೆ. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಸಹ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)

English summary
Kannada actor and 'The Phoenix of Indian Cinema' Dr.Vishnuvardhan back with a roar in a new avatar along with Jyesta and Shloka. The actor son-in-law Anirudh launched a comic series starring the late actor as Detective Sahasimha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada