For Quick Alerts
  ALLOW NOTIFICATIONS  
  For Daily Alerts

  ನಾಗರಹಾವು ವಿಜಯೋತ್ಸವಕ್ಕೆ ಅಭಿಮಾನಿಗಳ ತಯಾರಿ

  By Naveen
  |
  Nagarahaavu 2018 : ಜೋರಾಗಿರಲಿದೆ ನಾಗರಹಾವು ಉತ್ಸವ..! | Filmibeat Kannada

  ವಿಷ್ಣುದಾದ ಅಭಿನಯದ 'ನಾಗರಹಾವು' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಬೇರೆ ಬೇರೆ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ಸಾಹಸ ಸಿಂಹನ ಘರ್ಜನೆ ಮಾತ್ರ ಜೋರಾಗಿಯೇ ಮುಂದುವರೆದಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ವಿಷ್ಣು ಸಿನಿಮಾಗೆ ಭರ್ಜರಿ ಬೇಡಿಕೆ ಹುಟ್ಟಿಕೊಂಡಿದೆ.

  ಮರು ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ನಾಗರಹಾವು' ಸಿನಿಮಾದ ವಿಜಯೋತ್ಸವಕ್ಕೆ ಅಭಿಮಾನಿಗಳು ಸಿದ್ದತೆ ನಡೆಸಿದ್ದಾರೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಬಳಿ ಸಂಭ್ರಮ ಆಚರಣೆ ಮಾಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

  ವಿಷ್ಣು ನಮ್ಮ ಕಣ್ಣ ಮುಂದೆ ಇಲ್ಲದೆ ಇದ್ದರೂ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಇಂದಿಗೂ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ಮತ್ತೆ ನಿರೂಪಿಸುತ್ತಿದ್ದಾರೆ. ಇದೇ ಭಾನುವಾರ ವೀರೇಶ್ ಸಿನಿಮಾ ಮಂದಿರ ಬಳಿ ವಿಷ್ಣುವರ್ಧನ್ ಕಟೌಟ್ ಗಳಿಗೆ ಬೃಹತ್ ಆಕಾರದ ಹಾರಗಳನ್ನು ಹಾಕಿ ಪಟಾಕಿ ಸಿಡಿಸಲಿದ್ದಾರೆ.

   Vishnuvardhan fans planning to calibrate Nagarahaavu Vijayotsava at Vireesh cinema hall

  ಭಾನುವಾರದಂದು ಸಿನಿಮಾ ನೋಡುವ ಅಭಿಮಾನಿಗಳಿಗಾಗಿ ಚಿತ್ರಮಂದಿರದ ಬಳಿ ಅನ್ನದಾನ ಮತ್ತು ಸಿಹಿ ವಿತರಣೆ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ. ಒಟ್ಟಾರೆ, ಸಾಹಸ ಸಿಂಹನನ್ನು ಅಭಿಮಾನಿಗಳು ಎಂದೆಂದಿಗೂ ಪ್ರೀತಿ ಮಾಡುತ್ತಾರೆ ಎನ್ನುವುದನ್ನು ಈ ಮೂಲಕ ನಿರೂಪಿಸುತ್ತಿದ್ದಾರೆ.

  English summary
  Kannada cinema Nagarahaavu is re-releasing and has been successful everywhere. The fans planning to calibrate Nagarahaavu Vijayotsava at the Vireesh cinema hall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X