»   » 'ನಾಗರಹಾವು' ನಂತರ ಮತ್ತೆ ತೆರೆಮೇಲೆ ಅಬ್ಬರಿಸಲಿರುವ ವಿಷ್ಣು ದಾದ!

'ನಾಗರಹಾವು' ನಂತರ ಮತ್ತೆ ತೆರೆಮೇಲೆ ಅಬ್ಬರಿಸಲಿರುವ ವಿಷ್ಣು ದಾದ!

Posted By:
Subscribe to Filmibeat Kannada

'ನಾಗರಹಾವು' ಸಿನಿಮಾದ ಮೂಲಕ ಕಳೆದ ವರ್ಷ ಡಾ.ವಿಷ್ಣುವರ್ಧನ್ ಸಿ.ಜಿ (Computer Graphics) ರೂಪದಲ್ಲಿ ತೆರೆ ಮೇಲೆ ಮಿಂಚಿದ್ದರು. ಈಗ ಮತ್ತೊಂದು ಹೊಸ ಸಿನಿಮಾದಲ್ಲಿಯೂ ವಿಷ್ಣು ದಾದ ಗ್ರಾಫಿಕ್ಸ್ ರೂಪದಲ್ಲಿ ಎಂಟ್ರಿ ಕೊಡಲಿದ್ದಾರೆ ಅಂತ ಹೇಳಲಾಗುತ್ತಿದೆ. ಅಲ್ಲದೆ ಈ ಸಿನಿಮಾ ವಿಷ್ಣು ಅಭಿಮಾನಿಗಳಿಗೆ ತುಂಬಾನೇ ವಿಶೇಷವಾಗಿರಲಿದೆಯಂತೆ.

ಕನ್ನಡದ ಇತ್ತೀಚಿನ ಅನೇಕ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಹೆಸರು ಬಳಸಿಕೊಳ್ಳುವುದರ ಜೊತೆಗೆ ಅವರ ಚಿತ್ರದ ಹೆಸರನ್ನೇ ಮತ್ತೆ ಇಟ್ಟು ವಿಷ್ಣು ಅವರ ನೆನಪು ಮಾಡುತ್ತಿದ್ದಾರೆ.

ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು

ಹೀಗಿರುವಾಗ ನಟ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತೆ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಮುಂದೆ ಓದಿ...

'ರಾಜಾಸಿಂಹ' ಚಿತ್ರ

ನಟ ಅನಿರುದ್ಧ ಅಭಿನಯದ 'ರಾಜಸಿಂಹ' ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸಿ.ಜಿ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಪ್ರಮುಖ ಪಾತ್ರ

ಸಿನಿಮಾದಲ್ಲಿ ವಿಷ್ಣು ಅವರಿಗಾಗಿ ಒಂದು ಪ್ರಮುಖ ಪಾತ್ರವನ್ನು ಸೃಷ್ಟಿ ಮಾಡಲಾಗಿದೆಯಂತೆ. ಜೊತೆಗೆ ಈ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅವರೇ ವಿಷ್ಣು ಪತ್ನಿಯ ಪಾತ್ರವನ್ನು ಮಾಡಿರುವುದು ವಿಶೇಷ.

ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

'ಸಿಂಹಾದ್ರಿಯ ಸಿಂಹ' ಚಿತ್ರದ ಸೀಕ್ವೆಲ್

'ರಾಜಾಸಿಂಹ' ಸಿನಿಮಾ ವಿಷ್ಣುವರ್ಧನ್ ನಟನೆಯ 'ಸಿಂಹಾದ್ರಿಯ ಸಿಂಹ' ಸಿನಿಮಾದ ಮುಂದುವರೆದ ಭಾಗವಾಗಿದ್ದು, ಇಲ್ಲಿ 'ಸಿಂಹಾದ್ರಿಯ ಸಿಂಹ' ಚಿತ್ರದಲ್ಲಿದ್ದ ನರಸಿಂಹೇಗೌಡ ಪಾತ್ರದ ಪ್ರತಿಮೆಯನ್ನು ಬಳಸಿಕೊಳ್ಳಲಾಗಿದೆ.

ಹಿಂದೆಯೂ ಸುದ್ದಿಯಾಗಿತ್ತು

'ರಾಜಾಸಿಂಹ' ಸಿನಿಮಾ ಹಿಂದೆಯೂ ಸದ್ದು ಮಾಡಿತ್ತು. ಚಿತ್ರದಲ್ಲಿ ನಟಿಸಿರುವ ಅನಿರುದ್ಧ್ ಮತ್ತು ಸಂಜನಾ ಗರ್ಲಾನಿ ನಡುವಿನ ಹಾಟ್ ಸಾಂಗ್ ಮೇಕಿಂಗ್ ಫೋಟೋಗಳು ಸಖತ್ ಸುದ್ದಿ ಮಾಡಿತ್ತು.

ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು.!

English summary
Legendary Actor Dr.Vishuvardhan Is Back In The Form Of Graphics Again in 'Raja Simha' Kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada