twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ ಸಾಧನೆಯನ್ನು ಒರಿಸ್ಸಾಕ್ಕೂ ಪಸರಿಸಿದ ಅಭಿಮಾನಿಗಳು

    By ಫಿಲ್ಮಿಬೀಟ್ ಡೆಸ್ಕ್
    |

    ಸಾಹಸ ಸಿಂಹ ವಿಷ್ಣುವರ್ಧನ್‌ಗೆ ಸಾಗರದಷ್ಟು ಅಭಿಮಾನಿಗಳು. ಕರ್ನಾಟಕದಲ್ಲಿ ವಿಷ್ಣುವರ್ಧನ್ ಕುರಿತು ತಿಳಿಯದವರಿಲ್ಲ. ಹಾಗಾಗಿ ವಿಷ್ಣುವರ್ಧನ್ ಸಾಧನೆಯನ್ನು, ಅವರ ವ್ಯಕ್ತಿತ್ವವನ್ನು ಹೊರ ರಾಜ್ಯಗಳಿಗೂ ಹಬ್ಬಿಸುವ ಮಹತ್ತರದ ಕೆಲಸವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ.

    ಒರಿಸ್ಸಾದ ಸಮುದ್ರ ದಂಡೆಯಲ್ಲಿ ವಿಷ್ಣುವರ್ಧನ್ ಅವರ ಬೃಹತ್ ಮರಳು ಶಿಲ್ಪವನ್ನು ವಿಷ್ಣು ಅಭಿಮಾನಿಗಳು ನಿರ್ಮಿಸಿದ್ದಾರೆ. ಸ್ಥಳೀಯ ಮರಳು ಶಿಲ್ಪ ಕಲಾವಿದರೊಂದಿಗೆ ಈ ಮರಳು ಶಿಲ್ಪವನ್ನು ಮಾಡಿಸಲಾಗಿದೆ. ಕೇವಲ ಮರಳು ಶಿಲ್ಪಾ ಮಾಡಿ ಸುಮ್ಮನಾಗಿಲ್ಲ ಬದಲಿಗೆ ಸ್ಥಳೀಯ ಪತ್ರಿಕೆಗಳವರನ್ನು ಕರೆದು ವಿಷ್ಣುವರ್ಧನ್ ಸಾಧನೆಯನ್ನು ಅಲ್ಲಿನ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದರ ನೇತೃತ್ವ ವಹಿಸಿರುವುದು ವೀರಕಪುತ್ರ ಶ್ರೀನಿವಾಸ.

    ''ಕರ್ನಾಟಕದಲ್ಲಿ ಮಗುವಿನಿಂದ ಹಿಡಿದು ಮುದುಕನವರೆಗೂ ವಿಷ್ಣುವರ್ಧನ್ ಸಾಧನೆ, ವ್ಯಕ್ತಿತ್ವ ಗೊತ್ತಿದೆ. ಹಾಗಾಗಿ ಅಲ್ಲಿಯೇ ಮತ್ತೊಮ್ಮೆ, ಮಗದೊಮ್ಮೆ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವುದಕ್ಕಿಂತಲೂ ಅವರ ಸಾಧನೆಯನ್ನು ಬೇರೆಡೆ ಸಹ ಪಸರಿಸುವ ಉದ್ದೇಶದಿಂದ ನಾವು ಈ ಕಾರ್ಯ ಮಾಡಿದ್ದೇವೆ'' ಎಂದಿದ್ದಾರೆ ಶ್ರೀನಿವಾಸ.

    ಸ್ಥಳೀಯ ಉತ್ತಮ ಕಲಾವಿದರನ್ನು ಹುಡುಕಿ ಶಿಲ್ಪ ಮಾಡಿಸಲಾಗಿದೆ

    ಸ್ಥಳೀಯ ಉತ್ತಮ ಕಲಾವಿದರನ್ನು ಹುಡುಕಿ ಶಿಲ್ಪ ಮಾಡಿಸಲಾಗಿದೆ

    ಒರಿಸ್ಸಾದ ಸಮುದ್ರ ತೀರದಲ್ಲಿ ಮರಳು ಶಿಲ್ಪ ಮಾಡಬೇಕೆಂದು ಕೆಲ ದಿನಗಳ ಹಿಂದೆಯೇ ನಿಶ್ಚಯ ಮಾಡಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರಿಂದ ಮರಳು ಶಿಲ್ಪ ಮಾಡಿಸುವ ಆಸೆ ಇತ್ತು. ಆದರೆ ಅದು ಸುಮಾರು ಎಂಟು ಲಕ್ಷ ರುಪಾಯಿ ಹಣ ವೆಚ್ಚವಾಗುತ್ತಿತ್ತು. ಆದರೆ ಸುದರ್ಶನ್‌ ಪಟ್ನಾಯಕ್‌ರ ತರುವಾಯದ ಕಲಾವಿದರೊಬ್ಬರನ್ನು ಹುಡುಕಿ ಇಂದು (ಸೆಪ್ಟೆಂಬರ್ 16) ಬೆಳಿಗ್ಗೆಯಿಂದ ನಾವೆಲ್ಲ ಸೇರಿ ಮರಳು ಶಿಲ್ಪ ರೂಪಿಸಿದ್ದೇವೆ'' ಎಂದು ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.

    ವಿಷ್ಣುವರ್ಧನ್‌ರ 71ನೇ ಹುಟ್ಟುಹಬ್ಬದ ಸಂದರ್ಭಕ್ಕೆ ಮರಳು ಶಿಲ್ಪ

    ವಿಷ್ಣುವರ್ಧನ್‌ರ 71ನೇ ಹುಟ್ಟುಹಬ್ಬದ ಸಂದರ್ಭಕ್ಕೆ ಮರಳು ಶಿಲ್ಪ

    ವಿಷ್ಣುವರ್ಧನ್‌ರ 71ನೇ ಹುಟ್ಟುಹಬ್ಬದ ಸಂದರ್ಭಕ್ಕೆಂದು ಈ ಮರಳು ಶಿಲ್ಪ ರೂಪಿಸಲಾಗಿದ್ದು, ಇನ್ನೂ ಸುಮಾರು ಏಳು ದಿನಗಳು ಈ ಮರಳು ಶಿಲ್ಪ ಇಲ್ಲಿಯೇ ಇರಲಿದೆ. ಈಗಾಗಲೇ ಹಲವಾರು ಮಂದಿ ಸ್ಥಳೀಯರು ಬಂದು ವಿಷ್ಣುವರ್ಧನ್‌ರ ಶಿಲ್ಪವನ್ನು ಕಂಡು ಮೆಚ್ಚಿ, ಚಿತ್ರಗಳನ್ನು ತೆಗೆಸಿಕೊಂಡು ವಿಷ್ಣುವರ್ಧನ್ ಬಗೆಗೆ ಮಾಹಿತಿಯನ್ನು ಪಡೆದುಕೊಂಡು ಹೋಗುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಶ್ರೀನಿವಾಸ. ಮರಳು ಶಿಲ್ಪದ ಬಳಿಯಲ್ಲಿಯೇ ನಿಂತು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.

    ವಿಷ್ಣುವರ್ಧನ್‌ರ ಸಾಧನೆ ಹೊರರಾಜ್ಯಗಳಿಗೂ ಪಸರಿಸಬೇಕು: ಶ್ರೀನಿವಾಸ

    ವಿಷ್ಣುವರ್ಧನ್‌ರ ಸಾಧನೆ ಹೊರರಾಜ್ಯಗಳಿಗೂ ಪಸರಿಸಬೇಕು: ಶ್ರೀನಿವಾಸ

    'ಮರಳು ಶಿಲ್ಪದ ಬಳಿ ವಿಷ್ಣುವರ್ಧನ್ ಜೀವನ ಸಾಧನೆ ಬಗ್ಗೆ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಕರಪತ್ರಗಳನ್ನು ಮುದ್ರಿಸಿ ಇಡುತ್ತೇವೆ. ಇನ್ನೂ ಮೂರು ದಿನಗಳ ನಾವು ಸಹ ಇಲ್ಲೇ ಇರಲಿದ್ದೇವೆ. ನಾಳೆ ಮಳೆ ಬರುವ ಸಾಧ್ಯತೆಯೂ ಇರುವ ಕಾರಣದಿಂದ ನಾವು ಈ ಶಿಲ್ಪವನ್ನು ರಕ್ಷಿಸಬೇಕಾಗಿದೆ. ವಿಷ್ಣುವರ್ಧನ್‌ರ ಜೀವನ ಸಾಧನೆ ರಾಜ್ಯ ಮಾತ್ರವಲ್ಲ ಹೊರರಾಜ್ಯದಲ್ಲೂ ಪಸರಿಸಬೇಕು ಎಂಬ ಉದ್ದೇಶದಿಂದ ನಾವು, ವಿಷ್ಣುಸೇನಾ ಸಮಿತಿಯ ಹಲವು ಪ್ರಮುಖರು, ವಿಷ್ಣು ಅವರ ಅಭಿಮಾನಿಗಳ ಒತ್ತಾಸೆಯಿಂದ ಈ ಕಾರ್ಯ ಆಗಿದೆ'' ಎಂದಿದ್ದಾರೆ ವೀರಕಪುತ್ರ.

    ವಿಷ್ಣುವರ್ಧನ್ ಜೀವನ, ಸಾಧನೆ ಕುರಿತ ಪುಸ್ತಕ ಬಿಡುಗಡೆ

    ವಿಷ್ಣುವರ್ಧನ್ ಜೀವನ, ಸಾಧನೆ ಕುರಿತ ಪುಸ್ತಕ ಬಿಡುಗಡೆ

    ವಿಷ್ಣುಸೇನಾ ಸಮಿತಿಯಿಂದ ವಿಷ್ಣುವರ್ಧನ್ ಜೀವನ ಸಾಧನೆ ಒಳಗೊಂಡ ಪುಸ್ತಕ 'ಕರುನಾಡ ಯಜಮಾನ ಡಾ ವಿಷ್ಣುವರ್ಧನ' ಎಂಬ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವನ್ನು ಶರಣು ಹುಲ್ಲೂರು ರಚಿಸಿದ್ದಾರೆ. ಶಿಕ್ಷಣ ಸಚಿವ ನಾಗೇಶ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು ಒಂದು ಲಕ್ಷ ಮಕ್ಕಳಿಗೆ ಪುಸ್ತಕವನ್ನು ಉಚಿತವಾಗಿ ಹಂಚುವ ಇರಾದೆ ವಿಷ್ಣು ಅಭಿಮಾನಿಗಳಿಗೆ ಇದೆ. ವಿಷ್ಣುವರ್ಧನ್ ಅವರ ಸಾಧನೆ ಮಕ್ಕಳಿಗೆ ಪಠ್ಯವಾಗಬೇಕು ಎಂದು ವೀರಕಪುತ್ರ ಅವರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.

    English summary
    Actor Vishnuvardhan's sand sculpture in Odisha. Vishnuvardhan fans made this sculpture by help of local sand artist.
    Friday, September 17, 2021, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X