For Quick Alerts
  ALLOW NOTIFICATIONS  
  For Daily Alerts

  ರಾಜ್, ವಿಷ್ಣು, ಶಂಕ್ರಣ್ಣ ,ತೂಗುದೀಪ್ ಶ್ರೀನಿವಾಸ್ ಇಲ್ಲಿ ಎಲ್ಲರೂ ಒಂದೇ

  By Pavithra
  |

  ಕಲಾವಿದರುಗಳು ಎಂದಿಗೂ ಗಲಾಟೆ ಮಾಡಿಕೊಳ್ಳುವುದಿಲ್ಲ ಅದರಲ್ಲೂ ಹಿರಿಯ ಕಲಾವಿದರೆಲ್ಲರೂ ಸಾಕಷ್ಟು ವರ್ಷ ಒಟ್ಟಿಗೆ ಕೆಲಸ ಮಾಡಿದರೂ ಯಾವುದೇ ರೀತಿಯ ಗಲಾಟೆ ಮಾಡಿಕೊಳ್ಳದೆ ಅನ್ಯೂನ್ಯವಾಗಿದ್ದರು. ಈಗಲೂ ಇದ್ದಾರೆ ಎಂದರೆ ತಪ್ಪಾಗಲಾರದು. ಹೌದು ಕನ್ನಡ ಸಿನಿಮಾರಂಗದ ಹಿರಿಯ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ತೂಗುದೀಪ್ ಶ್ರೀನಿವಾಸ್ ಈ ನಾಲ್ಕು ಜನರು ಇಂದಿಗೂ ಒಂದಾಗಿದ್ದಾರೆ.

  ಅದು ಹೇಗೆ ಅಂತ ಯೋಚನೆ ಮಾಡಬೇಡಿ ನಾವು ಹೇಳುತ್ತಿರುವುದು ಈ ನಾಲ್ಕು ನಾಯಕರು ಒಂದಾಗಿರುವುದು ಪುತ್ಥಳಿಯಲ್ಲಿ. ಹೌದು ಸದ್ಯ ಅಪಾರ ಅಭಿಮಾನಿ ಬಳಗವನ್ನ ಅಗಲಿರುವ ಈ ಹಿರಿಯ ಕಲಾವಿದರೆಲ್ಲರೂ ಒಂದೇ ಪುತ್ಥಳಿಯ ನಾಲ್ಕು ಮುಖಗಳಾಗಿದ್ದಾರೆ.

  ತೂಗುದೀಪ ಶ್ರೀನಿವಾಸ್ ಹುಟ್ಟುಹಬ್ಬದ ಸಂಭ್ರಮತೂಗುದೀಪ ಶ್ರೀನಿವಾಸ್ ಹುಟ್ಟುಹಬ್ಬದ ಸಂಭ್ರಮ"ದಲ್ಲಿ ಅಭಿಮಾನಿಗಳು

  ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಶ್ರೀಕಂಠೇಶ್ವರನಗರದ ಯುವಕರು ತಮ್ಮ ಸಂಘದ ಮೂಲಕ ಇಂಥದೊಂದು ಪುತ್ಥಳಿಯನ್ನ ಸ್ಥಾಪನೆ ಮಾಡಿದ್ದಾರೆ. ಒಂದೇ ಪುತ್ಥಳಿಯಲ್ಲಿ ನಾಲ್ಕು ಮುಖಗಳಿದ್ದು ಒಂದರಲ್ಲಿ ವಿಷ್ಣುವರ್ಧನ್, ಮತ್ತೊಂದರಲ್ಲಿ ಡಾ ರಾಜ್ ಕುಮಾರ್ ಮಿಕ್ಕ ಎರಡರಲ್ಲಿ ತೂಗುದೀಪ ಶ್ರೀನಿವಾಸ್ ಹಾಗೂ ಶಂಕರ್ ನಾಗ್ ಮುಖಗಳಿದೆ.

  ಪ್ರತಿಯೊಬ್ಬರಿಗೂ ಅವರದ್ದೇ ಆದ ಆಸೆಗಳಿರುತ್ತೆ ಮತ್ತು ಆಯ್ಕೆಗಳು ಇರುತ್ತದೆ. ಅದರಂತೆ ನಾಲ್ಕು ಕಲಾವಿದರನ್ನೂ ಒಂದೇ ಪುತ್ಥಳಿಯಲ್ಲಿ ಸೇರಿಸಿರುವುದು ಆ ನಗರದ ಎಲ್ಲಾ ಜನರಿಗೂ ಸಂತಸ ತಂದಿದೆ. ಸುಮಾರು ಐದು ವರ್ಷದ ಹಿಂದೆಯೇ ಈ ಕೆಲಸ ಮಾಡಿರುವ ಇಲ್ಲಿನ ಯುವಕರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಟಾರ್ ವಾರ್ ಅಂತ ಪ್ರತಿ ನಿತ್ಯ ಫೇಸ್ ಬುಕ್ ನಲ್ಲಿ ಕಿತ್ತಾಡುವ ಜನರಿಗೆ ಶ್ರೀಕಂಠೇಶ್ವರನಗರದ ಜನರು ಮಾಡಿರುವ ಕೆಲಸ ಸ್ಪೂರ್ತಿ ಆಗಲಿದೆ.

  English summary
  Kannada artists Vishnuvardhan, Toogudeepa Srinivas, Shankar Nag and RajKumar have been placed in the one statue. This special statue is made at Mahalakshmi Layout

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X