For Quick Alerts
  ALLOW NOTIFICATIONS  
  For Daily Alerts

  ಕಮಲ್ 'ವಿಶ್ವರೂಪಂ' ರು.120 ಕೋಟಿ ಕಲೆಕ್ಷನ್

  By ಶಂಕರ್, ಚೆನ್ನೈ
  |
  ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಚಿತ್ರ ಬಾಕ್ಸ್ ಆಫೀಸಲ್ಲಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದೆ. ತಮಿಳುನಾಡು ಸರ್ಕಾರ ಚಿತ್ರಕ್ಕೆ ಎರಡು ವಾರ ನಿಷೇಧ ಹೇರಿದ ಕಾರಣ ಎಲ್ಲಿ ತಮ್ಮ ಚಿತ್ರಕ್ಕೆ ಹೊಡೆತ ಬೀಳುತ್ತದೋ ಎಂದು ಕಮಲ್ ಸಹ ಕಂಗಾಲಾಗಿದ್ದರು.

  ಆದರೆ 'ವಿಶ್ವರೂಪಂ' ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ರು.120 ಕೋಟಿ ಬಾಚಿದೆ. ಈ ಬಗ್ಗೆ ಸ್ವತಃ ಚಿತ್ರದ ನಟರಲ್ಲಿ ಒಬ್ಬರಾಗಿರುವ ರಾಹುಲ್ ಬೋಸ್ ತಿಳಿಸಿದ್ದಾರೆ. ಏತನ್ಮಧ್ಯೆ ತಮಿಳುನಾಡಿನಾದ್ಯಂತ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಒಟ್ಟಾರೆ ಗಳಿಕೆ ರು.120 ಕೋಟಿ ಎಂದಿದ್ದಾರೆ ರಾಹುಲ್.

  ನಾನು ಅಭಿನಯಿಸಿದ್ದ ಚಿತ್ರವೊಂದು ರು.100 ಕೋಟಿಗೂ ಅಧಿಕ ಗಳಿಸುತ್ತಿರುವುದು ಇದೇ ಮೊದಲು ಎಂದಿರುವ ಅವರು, ಚಿತ್ರತಂಡ ಹಾಗೂ ಕಮಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸರಿಸುಮಾರು ರು.96 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಪೈಸಾ ವಸೂಲ್ ಮಾಡಿದೆ.

  ಇತ್ತೀಚೆಗೆ ಕಮಲ್ ಹಾಸನ್ ಅವರು ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದ ಮಹಾ ಜನತೆಗೆ ಕೃತಜ್ಞತೆಗಳನ್ನು ತಿಳಿಸಿದರು. ತಮ್ಮ ಚಿತ್ರಕ್ಕೆ ಕರ್ನಾಟಕ ಜನ ತೋರಿದ ಪ್ರೀತಿಗೆ ತಾವು ಮೂಕರಾಗಿರುವುದಾಗಿ ಅವರು ಹೇಳಿದ್ದಾರೆ. ಈಗ ಅವರ ಚಿತ್ರ 120 ಕೋಟಿ ಗಳಿಸುವ ಮೂಲಕ ಅವರ ಸಂಭ್ರಮವನ್ನು ಹೆಚ್ಚಿಸಿದೆ.

  ವಿಶ್ವರೂಪಂ ಗೆಲುವಿನ ಖುಷಿಯಲ್ಲಿರುವ ಕಮಲ್ ಹಾಸನ್ ಅವರು ಈಗ ವಿಶ್ವರೂಪಂ 2 ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಬಗ್ಗೆ ಕಮಲ್ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ವಿಶ್ವರೂಪಂ ಚಿತ್ರದಲ್ಲಿನ ಬಹುತೇಕ ತಾರಾಗಣ ಇಲ್ಲೂ ಇರುತ್ತದೆ ಎಂದಿದ್ದಾರೆ.

  English summary
  Kamal Haasan's controversal film Vishwaroopam raking in at the box office. The film, which released on February 7, has earned Rs.120 crore in just four days and is still running to packed houses in Tamil Nadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X