ಕನ್ನಡ ಕಲಿಯುತ್ತಿದ್ದಾರೆ ಬಾಲಿವುಡ್ ನಟ ವಿವೇಕ್ ಒಬೆರಾಯ್: ಯಾಕ್ಗೊತ್ತಾ.?
ಬಾಲಿವುಡ್ ನಟ ವಿವೇಕ್ ಒಬೆರಾಯ್ ಕರ್ನಾಟಕದ ಅಳಿಯ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. 'ರುಸ್ತುಂ' ಚಿತ್ರದ ಮೂಲಕ ವಿವೇಕ್ ಒಬೆರಾಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸುದ್ದಿಯೂ ಕೂಡ ನಿಮಗೆ ಹೊಸತೇನಲ್ಲ.
ಕರ್ನಾಟಕ ಮತ್ತು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ವಿವೇಕ್ ಒಬೆರಾಯ್ ಸದ್ಯ ಕನ್ನಡ ಕಲಿಯುತ್ತಿದ್ದಾರೆ. ಯಾಕಂದ್ರೆ, 'ರುಸ್ತುಂ' ಚಿತ್ರಕ್ಕೆ ಡಬ್ಬಿಂಗ್ ಮಾಡೋಕೆ.!
ಹೌದು, 'ರುಸ್ತುಂ' ಚಿತ್ರದಲ್ಲಿ ವಿವೇಕ್ ಒಬೆರಾಯ್ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕೆ ತಮ್ಮದೇ ಧ್ವನಿ ಇರಲಿ ಎಂದು ಡಬ್ಬಿಂಗ್ ಮಾಡಲು ವಿವೇಕ್ ಒಬೆರಾಯ್ ಕನ್ನಡ ಕಲಿಯುತ್ತಿದ್ದಾರೆ.

ಅಸಲಿಗೆ, 'ರುಸ್ತುಂ' ಶಿವರಾಜ್ ಕುಮಾರ್ ಅಭಿನಯದ ಚಿತ್ರ. ಈ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಹೇಗೆ ಪೊಲೀಸ್ ಅಧಿಕಾರಿಯೋ ಹಾಗೇ ಶಿವಣ್ಣ ಕೂಡ ಪೊಲೀಸ್ ಆಫೀಸರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇದು ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದ ಚಿತ್ರವಾಗಿದ್ದು, ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ಮಯೂರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.


Click it and Unblock the Notifications











