For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಅವರ 'ವೃತ್ರ' ಚಿತ್ರದ ಫಸ್ಟ್ ಲುಕ್ ರಿಲೀಸ್

  By Naveen
  |
  ಹೇಗಿದೆ ನೋಡಿ ರಶ್ಮಿಕಾ ಹೊಸ ಸಿನಿಮಾ ಲುಕ್..!! | Filmibeat Kannada

  ಪರಭಾಷೆಯ ಸಿನಿಮಾಗಳಲ್ಲಿ ಬಿಜಿ ಇದ್ದ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಹೊಸದಾಗಿ ಒಂದು ಕನ್ನಡ ಸಿನಿಮಾ ಒಪ್ಪಿಕೊಂಡಿದ್ದರು. ನವ ನಿರ್ದೇಶಕ ಆರ್.ಗೌತಮ್ ಐಯರ್ ಕಥೆಯನ್ನು ರಶ್ಮಿಕಾ ಒಕೆ ಮಾಡಿದ್ದು, ಈ ಆ ಚಿತ್ರದ ಫಸ್ಟ್ ಲುಕ್ ಇದೀಗ ರಿಲೀಸ್ ಆಗಿದೆ.

  ವರ್ಷದ ಸಂಭ್ರಮಕ್ಕೆ ಸಾನ್ವಿಗೆ ಬಂತು ಕರ್ಣನಿಂದ ಪ್ರೇಮಪತ್ರ ವರ್ಷದ ಸಂಭ್ರಮಕ್ಕೆ ಸಾನ್ವಿಗೆ ಬಂತು ಕರ್ಣನಿಂದ ಪ್ರೇಮಪತ್ರ

  ರಶ್ಮಿಕಾ ಮಂದಣ್ಣ ಅವರ ಈ ಹೊಸ ಸಿನಿಮಾಗೆ 'ವೃತ್ರ' ಎಂಬ ಟೈಟಲ್ ಫಿಕ್ಸ್ ಆಗಿದೆ. ಚಿತ್ರದ ಫಸ್ಟ್ ಲುಕ್ ಸಿಂಪಲ್ ಆಗಿದ್ದರು, ಸೂಪರ್ ಎನಿಸುವಂತಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯ ಪೋಸ್ಟರ್ ಗಳು ಹೊರಬಂದಿವೆ. ಪೋಸ್ಟರ್ ನಲ್ಲಿ ರಶ್ಮಿಕಾ ಖಡಕ್ ಕುವರಿಯಾಗಿ ಕಾಣಿಸಿಕೊಂಡಿದ್ದಾರೆ.

  ವಿಶೇಷ ಅಂದರೆ, ಈ ಸಿನಿಮಾದಲ್ಲಿ ರಶ್ಮಿಕಾ ಇನ್ವೆಸ್ಟಿಗೇಟಿವ್ ಆಫೀಸರ್ ಪಾತ್ರವನ್ನು ಮಾಡಿದ್ದಾರೆ. ಈ ಹಿಂದೆ ಸ್ವೀಟ್, ಕ್ಯೂಟ್ ಪಾತ್ರಗಳಿಗೆ ಸೀಮಿತವಾಗಿದ್ದ ರಶ್ಮಿಕಾ ಮೊದಲ ಬಾರಿಗೆ ಚಾಲೆಂಜಿಂಗ್ ಪಾತ್ರವನ್ನು ಮಾಡುತ್ತಿದ್ದಾರೆ.

  'ವೃತ್ರ' ರಶ್ಮಿಕಾ ಮಂದಣ್ಣ ನಟನೆಯ ಐದನೇ ಕನ್ನಡ ಸಿನಿಮಾವಾಗಿದೆ. ಈ ಚಿತ್ರದ ಜೊತೆಗೆ ದರ್ಶನ್ ಅವರ 'ಯಜಮಾನ' ಸಿನಿಮಾದಲ್ಲಿ ಕೂಡ ಅವರು ನಟಿಸುತ್ತಿದ್ದಾರೆ. ಉಳಿದಂತೆ, ತೆಲುಗಿನಲ್ಲಿ ಮೂರು ಸಿನಿಮಾಗಳು ಅವರ ಕೈನಲ್ಲಿವೆ.

  English summary
  Actress Rashmika Mandanna's 'Vrithra' kannada movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X